ಮತದಾನ ಕಡ್ಡಾಯವಾಗಬೇಕು, ನೀತಿ ಸಂಹಿತೆ ನಿರಂತರವಾಗಲಿ – ತರಳಬಾಳು ಶ್ರೀಗಳ ಆಶಯ

  •  
  •  
  •  
  •  
  •    Views  

ದಾವಣಗೆರೆ, ಏ. 6- ಭಾರತದಲ್ಲಿಯೂ ಆಸ್ಟ್ರೇಲಿಯಾದಲ್ಲಿನ ರೀತಿ ಮತದಾನ ಕಡ್ಡಾಯವಾಗಬೇಕು. ಮತದಾನ‌ ಮಾಡದವರಿಗೆ ಸರ್ಕಾರಿ ಸೌಲಭ್ಯ ನಿಲ್ಲಿಸಬೇಕು. ನೀತಿ ಸಂಹಿತೆ ನಿರಂತರವಾಗಿರಬೇಕು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಆನಗೋಡಿನಲ್ಲಿ‌ ಗುರುವಾರ ನಡೆದ‌ ಮರುಳಸಿದ್ದೇಶ್ವರ ರಥೋತ್ಸವದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಜಗದ್ಗುರುಗಳು   ಆಶೀರ್ವಚನ ನೀಡಿದರು.

ನೀತಿ ಸಂಹಿತೆ‌ ಅನಾದಿ‌ ಕಾಲದಿಂದ ಇದೆ. ಹೀಗೆ ಬಾಳಬೇಕು ಎಂಬ ಧರ್ಮವೇ ನೀತಿ ಸಂಹಿತೆ. ನೀತಿ ಸಂಹಿತೆ ಚುನಾವಣೆಗಾಗಿ ಇರಬಾರದು ನಿರಂತರ ಇರಬೇಕು.‌ ಸ್ವಾತಂತ್ರ್ಯ ಮತ್ತು ಸ್ವೇಚ್ಛಾ ಚಾರ ಬೇರೆ ಬೇರೆ. ಇಂದು ಟಿಕೆಟ್‌ಗಾಗಿ ನಡೆಯುತ್ತಿರುವ ಕೋಲಾ ಹಲ ಅಸಹ್ಯ ಮೂಡಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರಿಲ್ಲ, ಎಲ್ಲಾ ಟಿಕೆಟ್ ಹೋರಾಟಗಾರರೇ. ಇದಕ್ಕೆ‌ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿಲ್ಲ ಎಂದರು. 5 ವರ್ಷ ಪಕ್ಷದ ಸಕ್ರಿಯವಾಗಿದ್ದ ಸದಸ್ಯನಿಗೆ  ಮಾತ್ರ ಸ್ಪರ್ಧಿಸಲು ಅವಕಾಶ ನೀಡಬೇಕು. ರಾಜಕಾರಣಿಗಳು ಮರದಿಂದ ಮರಕ್ಕೆ‌ ನೆಗೆಯುವ ಮಂಗಾಟ ನಿಲ್ಲಿಸಲು ಇದೇ ಮದ್ದು ಎಂದರು.

1994ರಲ್ಲಿ ಪಕ್ಷ, ಜಾತಿ ಹೊರತುಪಡಿಸಿ ಅಭ್ಯರ್ಥಿ ಘೋಷಿ ಸಿದ್ದೆವು. ಚುನಾವಣಾ ಅವ್ಯವಹಾರ ತಡೆಯಲು‌ ನಿರಂತರ ಪ್ರಯತ್ನ ನಡೆಸಿದೆವು. ವರ್ಷದ 12 ತಿಂಗಳು ನೀತಿ ಸಂಹಿತೆ ಇರ ಬೇಕಿದೆ. ಗಂಡನಿಲ್ಲದಾಗ ಸೀರೆ ತಂದು ಕೊಟ್ಟವರನ್ನು ಏನು‌ ಮಾಡು ತ್ತೀರೋ ಅದನ್ನು ಚುನಾವಣೆಯಲ್ಲಿ ಸೀರೆ‌ ಹಂಚುವವರಿಗೂ ಮಾಡಿ.‌ ಕೇವಲ‌ ರಾಜಕಾರಣಿಗಳು ಭ್ರಷ್ಟರಲ್ಲ, ತೆಗೆದುಕೊಳ್ಳುವ ವರೂ ಭ್ರಷ್ಟರೇ ಆಗಿದ್ದು ಅತ್ಯಂತ ‌ದುರದೃಷ್ಟಕರ‌ ಸಂಗತಿ ಎಂದು ವಿಷಾದಿಸಿದರು.

ಕೆರೆಕಟ್ಟೆ ತುಂಬಿವೆ. ಏತ ನೀರಾವರಿ ಎಲ್ಲಾ‌ ಜನಾಂಗದ ರೈತರ ಬದುಕು‌ ಹಸನು ಮಾಡಿದೆ. ಸರ್ಕಾರಗಳು‌ ಪರಿಶುದ್ಧ.  ಜನಪರ‌ ಆಡಳಿತ ನೀಡಲಿ.‌ ನಮ್ಮ ಪರಪರೆಯ ಮೂಲಪುರುಷರು ರಾಜಾಶ್ರಯ ಬೇಡಿದವರಲ್ಲ ಹೋರಾಟ ಮಾಡಿಕೊಂಡು ಬಂದವರು.‌ಇದಕ್ಕೆ‌ ಆನಗೋಡು ಗ್ರಾಮವೇ ಸಾಕ್ಷಿ ಎಂದರು.‌

ಸಾಧು ಸದ್ಧರ್ಮ‌ ಸಮಾಜದ ತಾಲ್ಲೂಕು ಅಧ್ಯಕ್ಷ ಹಾಲುವರ್ತಿ ಎಚ್.ಡಿ‌.ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಗಳು ಆನಗೋಡು ಗ್ರಾಮದ ಮೇಲೆ‌ ವಿಶೇಷ ಒಲವು ಹೊಂದಿ ಹಲವು ಅಭಿವೃದ್ಧಿ ಕಾರ್ಯ‌ಗಳನ್ನು  ನೆರವೇರಿಸಿದ್ದಾರೆ ಎಂದರು. ಕಳವೂರು ಮನ್ನೇರ ನಾಗರಾಜು ರೂ.2,50,000 ಕ್ಕೆ  ಧ್ವಜ,  ಅಣ್ಣಾಪುರ ಪ್ರಕಾಶ್ ರೂ. 50000ಕ್ಕೆ ಯಾಲಕ್ಕಿ ಹಾರ ಹರಾಜಿನಲ್ಲಿ ಪಡೆದರು.

ಶಾಸಕ‌ ಪ್ರೊ.ಲಿಂಗಣ್ಣ, ಮಾಜಿ ಸಚಿವ ಎಚ್.‌ಆಂಜನೇಯ, ಮಾಜಿ ಶಾಸಕ ಬಸವರಾಜ‌ನಾಯ್ಕ, ಜಿಲ್ಲಾ ಪಂಚಾಯತಿ‌ ಮಾಜಿ‌ ಸದಸ್ಯರಾದ ಕೆ.ಎಸ್. ಬಸವಂತಪ್ಪ, ವಾಗೀಶಸ್ವಾಮಿ, ಎಪಿಎಂಸಿ‌ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮಾಜಿ  ಸದಸ್ಯ ವಿ.ಜಿ.ರುದ್ರೇಶ್, ಶಿವಸೈನ್ಯದ ಅಧ್ಯಕ್ಷ ಹೆಮ್ಮನ‌ಬೇತೂರು ಶಶಿಧರ,  ಶಿವ ಬ್ಯಾಂಕ್ ಅಧ್ಯಕ್ಷ ಮಾಗನೂರು ಸಂಗಮೇಶ ಗೌಡ್ರು,  ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರವಿ, ನಸ್ರು, ವಸಂತ್‌ಕುಮಾರ್ ಸದಸ್ಯರಾದ ಕರಿಬಸಪ್ಪ, ಬಸವರಾಜ್ , ಪ್ರಕಾಶ್, ಎಪಿಎಂಸಿ ಮಾಜಿ‌ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಹೆದ್ನೆ ಮುರಿಗೇಂದ್ರಪ್ಪ, ಹೊನ್ನನಾಯ್ಕನ‌ಹಳ್ಳಿ‌ ಮುರುಗೇಶಪ್ಪ, ಮೆಳ್ಳೆಕಟ್ಟೆ ಕುಮಾರ್ ಮತ್ತಿತರರು ಇದ್ದರು.