ಹರಿಹರನ ರಗಳೆ ಕನ್ನಡ ಸಾಹಿತ್ಯದ ವಿಶೇಷ ಪ್ರಕಾರವಾಗಿದೆ : ಕನ್ನಡ ಅಧ್ಯಾಪಕಿ ಎಸ್.ಆರ್. ಶಿಲ್ಪ ಅಭಿಪ್ರಾಯ

  •  
  •  
  •  
  •  
  •    Views  

ಸಿರಿಗೆರೆ-05: ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಐಕ್ಯಮಂಟಪದ ಆವರಣದಲ್ಲಿ ಅಣ್ಣನ ಬಳಗದವರು ಏರ್ಪಡಿಸಿದ್ದ ”ಹರಿಹರ ಮಹಾಕವಿ ಜಯಂತಿ” ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

"ಹರಿಹರ” ಕನ್ನಡ ಕಾವ್ಯ ಪರಂಪರೆಯಲ್ಲಿ ಬಹು ಮುಖ್ಯ ಕವಿಗಳಲ್ಲಿ ಒಬ್ಬರು. ತನ್ನ ಕಾವ್ಯದ ಸತ್ವದಿಂದಲೇ ಜನಸಮುದಾಯದ ಕವಿಯಾಗಿದ್ದು ಹರಿಹರನ ಹೆಗ್ಗಳಿಕೆ. ಹರಿಹರನು ಪಂಪಾ ಕ್ಷೇತ್ರವನ್ನು ಕಾರ್ಯಕ್ಷೇತ್ರವಾಗಿ ಮಾಡಿಕೊಂಡನು."ಹಂಪೆಯ ಹರಿಹರ"ಎನ್ನುವಷ್ಟರ ಮಟ್ಟಿಗೆ ಅದರಲ್ಲಿ ಲೀನವಾಗಿ ರಗಳೆಯ ಯುಗಾಂತರ ಸೃಷ್ಟಿಸಿದನು.

ಬಸವರಾಜದೇವರ ರಗಳೆ, ಪ್ರಭುದೇವರ ರಗಳೆ, ಮಹಾದೇವಿಯಕ್ಕನ ರಗಳೆ ಮುಂತಾದವು ಪ್ರಮುಖವಾಗಿವೆ ಎಂದರು. ಚಂಪುವಿಗೆ ಪಂಪ, ಷಟ್ಪದಿಗೆ ಕುಮಾರವ್ಯಾಸ, ತ್ರಿಪದಿಗೆ ಸರ್ವಜ್ಞ ಇದ್ದಂತೆ ರಗಳೆಗೆ ಹರಿಹರನೇ ಸೀಮಾಪುರುಷ ಎಂದರು.

ಕನ್ನಡನಾಡಿನ ಹನ್ನೆರಡನೆಯ ಶತಮಾನದಲ್ಲಿ ಧಾರ್ಮಿಕ ಸಾಮಾಜಿಕ, ಸಾಹಿತ್ಯಕ ಆಂದೋಲನಕ್ಕೆ ಕಾರಣರಾದ ಶಿವಶರಣರನ್ನು ಕುರಿತು ರಚಿಸಿದ ರಗಳೆಗಳನ್ನು ರಚಿಸಿದರವರು. ಹರಿಹರ ಕವಿ ಹಾಗೂ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡ ಹರಿಹರ ಪ್ರವರ್ತಕ ಕವಿ, ಕೃಷಿ ಕವಿ, ಭಕ್ತ ಕವಿ, ಮಹಾಕವಿ, ಕ್ರಾಂತಿಕಾರಿ ಕವಿ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಣ್ಣನ ಬಳಗದ ಅಧ್ಯಕ್ಷರಾದ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ ಹರಿಹರ ಕವಿಯು ಕಾವ್ಯ ರಚನೆಯೇ ಜೀವನ, ಜೀವನವೇ ಕಾವ್ಯ ರಚನೆ, ಕಾವ್ಯ ರಚನೆಯೇ ಶಿವಪೂಜೆಯಾಗಿತ್ತು ಎಂದರು. ಆದುದರಿಂದ ವಿದ್ಯಾರ್ಥಿಗಳಾದ ನೀವು ಓದುವುದೇ ಶಿವಪೂಜೆಯಾಗಬೇಕು.

ನಿಮ್ಮಲ್ಲಿರುವ ಸೋಮಾರಿತನ ಮತ್ತು ಆಲಸ್ಯ ಎಂಬ ಬ್ರಹ್ಮ ರಾಕ್ಷಸರನ್ನು ಒಡದೋಡಿಸಿ ಏಕಾಗ್ರತೆ ಎಂಬ ದೇವರನ್ನು ಮನಸ್ಸಿನಲ್ಲಿ ಪ್ರತಿಷ್ಠಾಪಿಸಬೇಕು ಎಂದರು.

ಹರಿಹರನ ರಗಳೆಗಳು ಮಾತ್ರಾಗಣದಿಂದ ಕೂಡಿ ದೇಶೀಯ ಛಂದಸ್ಸಿನಲ್ಲಿವೆ. ಇವರು ಒಟ್ಟು106 ರಗಳೆಗಳನ್ನು ರಚಿಸಿದ್ದಾರೆ. ”ಮುಡಿಗೆಯ ಅಷ್ಟಕ”, ಪಂಪಾಶತಕ, ರಕ್ಷಾಶತಕ ಕೃತಿಗಳು ವೃತ್ತ ರೂಪದಲ್ಲಿವೆ. “ಗಿರಿಜಾ ಕಲ್ಯಾಣ” ಚಂಪೂ ಛಂದಸ್ಸಿನಲ್ಲಿದೆ. ರಗಳೆ ಎಂಬ ದೇಸಿ ಪ್ರಕಾರವನ್ನು ಕನ್ನಡ ಸಾಹಿತ್ಯದಲ್ಲಿ ಮೊದಲಿಗೆ ಬಳಸಿದವರು ಹರಿಹರ ಮಹಾಕವಿ. ಆದ್ದರಿಂದ ಅವರಿಗೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ದೊರೆತಿದೆ ಎಂದರು.

ಕಾರ್ಯಕ್ರಮದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ವಸತಿ ನಿಲಯದ ಶಿಕ್ಷಕಿಯರಾದ ಆಶಾ, ಉಷಾ, ನಿರ್ಮಲ, ಗಿರೀಶ್, ಜಿತೇಂದ್ರ, ಡಿ.ಗಿರೀಶ್, ಸಿದ್ದಲಿಂಗಪ್ಪ ಭಾಗವಹಿಸಿದ್ದರು.

ಎಂ.ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದಿವ್ಯ, ಪ್ರೀತಿ ಮತ್ತು ರೂಪ ಜಿ.ಆರ್.ವಚನಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ನಾಗವೇಣಿ ಸ್ವಾಗತಿಸಿದರು, ರೂಪ ವಂದಿಸಿದರು, ಸ್ವಪ್ನ ನಿರೂಪಿಸಿದರು.