ಎಲೆಬೇತೂರು, ಚನ್ನಗಿರಿ, ಹಿರೆಗುಂಟನೂರು, ನೇರಲಕೆರೆ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚಣೆ ಮಾಡಲಾಯಿತು
ಹಿರೇಗುಂಟನೂರು: 5 ಜೂನ್ 2023 ರಂದು ಶ್ರೀ ದ್ಯಾಮಲಂಬ ಪ್ರೌಢಶಾಲೆ ಹಿರೇಗುಂಟನೂರು ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಗರ್ಭಿತವಾಗಿ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶೇಷ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿತ್ರದುರ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶ್ರೀಯುತ ದಿವಾಕರ್.ಎಂ.ಎಸ್ ರವರು ಗಿಡಗಳಿಗೆ ನೀರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು ಪ್ರತಿಯೊಂದು ಮಗುವಿಗೂ ಒಂದೊಂದು ಗಿಡವನ್ನು ದತ್ತು ನೀಡುವುದರ ಮೂಲಕ ಅದರ ಪೋಷಣೆಯ ಜವಾಬ್ದಾರಿಯನ್ನು ನೀಡಬೇಕೆಂದು ಸಲಹೆ ನೀಡಿದರು ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಶಾಲಾ ದಿನಗಳಲ್ಲಿ ಗಿಡಗಳನ್ನು ಮನೆಯಿಂದ ತಂದು ಶಾಲೆಯಲ್ಲಿ ನೆಟ್ಟು ಅದಕ್ಕೆ ಹತ್ತಿರದ ಕೆರೆಯಿಂದ ನೀರನ್ನು ಹಾಕುತ್ತಿದ್ದ ವಿಷಯವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ವಸಂತನ ಬಡಿಗೇರ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಿಶ್ವ ಪರಿಸರ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಮಕ್ಕಳಿಗೆ ಬೋಧಿಸಲಾಯಿತು ಹಾಗೂ ಪರಿಸರ ಮತ್ತು ನನ್ನ ಶಾಲೆ ಎಂಬ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ವೇದಿಕೆಯಲ್ಲಿರುವ ಮಹನೀಯರು ಬಹುಮಾನಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಟಿ ಇವರು ವಹಿಸಿಕೊಂಡಿದ್ದರು.
ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ರಂಗಸ್ವಾಮಿ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ಚಿತ್ರದುರ್ಗ ಇವರು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಸುರೇಶ್ ಬಾಬುರವರು ಹಾಗೂ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ನಾಗೇಂದ್ರ ನಾಯಕ್ ಎಂಪಿ ರವರು ಹಾಗೂ ಚಿತ್ರದುರ್ಗ ತಾಲೂಕು ಪಂಚಾಯತ್ ಇ.ಓ. ಶ್ರೀ ಹನುಮಂತಪ್ಪನವರು ತಾಲೂಕು ಪಂಚಾಯಿತಿ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ಧನಂಜಯ್ ಅವರು ವಲಯಾಧಿಕಾರಿ, ಶ್ರೀ ಭರತ್ ರಾಜು ಎಂ.ಎ. ಮತ್ತು ಉಪವಲಯ ಅರಣ್ಯ ಅಧಿಕಾರಿಗಳಾದ ಶ್ರೀ ವೀರೇಶ್ ರವರು ಮುಂತಾದವರು ಭಾಗವಹಿಸಿದ್ದರು.
ನಿರೂಪಣೆಯನ್ನು ಶಾಲಾ ಶಿಕ್ಷಕರಾದ ಶ್ರೀ ಸಯ್ಯದ್ ಸಾಧಿಕ್ ಭಾಷಾ ರವರು ಸ್ವಾಗತವನ್ನು ಉಮೇಶ್.ಎಸ್.ಟಿ ವಂದಿಸಿದರು, ಗೀತಮ್ಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ವಲಯ ಅರಣ್ಯ ಸಿಬ್ಬಂದಿ ವರ್ಗ ಶ್ರೀ ದ್ಯಾಮಲಾಂಬ ಪ್ರೌಢಶಾಲೆಯ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಸಲಹಾ ಸಮಿತಿ ಸದಸ್ಯರು ಮತ್ತು ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು