ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾದ ಪಡೆದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು.
ದಿನಾಂಕ: 09-06-2023 ಸ್ಥಳ: ಬೆಂಗಳೂರು
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಬಗ್ಗೆ ಸದಾ ಭಕ್ತಿ ಗೌರವ ಹೊಂದಿರುವ ಶ್ರೀ ತರಳಬಾಳು ಜಗದ್ಗುರುಗಳವರ ಸಾಮಾಜಿಕ, ಧಾರ್ಮಿಕ, ರೈತಮುಖಿ, ನ್ಯಾಯಮುಖಿ, ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಅತೀವ ಮೆಚ್ಚುಗೆ ಹೊಂದಿರುವ ಕರ್ನಾಟಕ ಸರ್ಕಾರದ ನೂತನ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ನಂತರ ಇದೇ ಪ್ರಥಮ ಬಾರಿಗೆ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಶ್ರೀ ಜಗದ್ಗುರುಗಳವರಿಗೆ ಫಲ, ಪುಷ್ಪಹಾರದೊಂದಿಗೆ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆದರು.
ನೂತನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರನ್ನು ಶ್ರೀ ಜಗದ್ಗುರುಗಳವರು ಶಾಲು, ಹಾರ, ಸ್ಮರಣಿಕೆಯೊಂದಿಗೆ ಗೌರವಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಸಚಿವರಾದ ಶ್ರೀ ಎಸ್ಎ.ಸ್ ಮಲ್ಲಿಕಾರ್ಜುನ್ ರವರು, ಶ್ರೀ ಭೈರತಿ ಸುರೇಶ್ ರವರು, ಶಾಸಕರುಗಳಾದ ಶ್ರೀ ತಮ್ಮಣ್ಣನವರು, ಶ್ರೀ ಶಿವಗಂಗಾ ಬಸವರಾಜುರವರು, ಶ್ರೀ ಡಿ.ಜಿ. ಶಾಂತನಗೌಡರವರು, ಶ್ರೀ ಬಸವಂತಪ್ಪ ನವರು ಮಾಜಿ ಶಾಸಕರಾದ ಶ್ರೀ ಹೆಚ್.ಎಂ ರೇವಣ್ಣನವರು, ಮಾಜಿ ಸಂಸದ ಶ್ರೀ ಚಂದ್ರಪ್ಪನವರು, ಮಾಜಿ ಸಚಿವರಾದ ಶ್ರೀ ಹೆಚ್.ಆಂಜನೇಯವರು, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಶ್ರೀ ಹೆಚ್.ಆರ್.ಬಸವರಾಜಪ್ಪನವರು ಐಪಿಎಸ್ ಶ್ರೀ ಯತೀಶ್ ಚಂದ್ರರವರು, ತರಳಬಾಳು ಕೇಂದ್ರದ ಕಾರ್ಯದರ್ಶಿ ಶ್ರೀ ಬಾತಿವಿಶ್ವನಾಥ್ ರವರು ಸೇರಿದಂತೆ ಅಪಾರ ಗಣ್ಯರು. ಬೆಂಗಳೂರಿನ ಶ್ರೀ ತರಳಬಾಳು ಬೃಹನ್ಮಠದ ಸದ್ಭಕ್ತರು ಹಾಜರಿದ್ದರು.