ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾದ ಪಡೆದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್.
ಪೂಜನೀಯರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಪೀಠಾಧಿಪತಿಗಳಾದ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದವನ್ನು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕಿ ಶ್ರೀಮತಿ ಲತಾ ಮಲ್ಲಿಕಾರ್ಜುನ್ ರವರು ಸಿರಿಗೆರೆಯ ಸದ್ಧರ್ಮ ನ್ಯಾಯ ಪೀಠದಲ್ಲಿ ಪಡೆದರು.
ಮಾಜಿ ಉಪಮುಖ್ಯಮಂತ್ರಿ ಲಿಂಗೈಕ್ಯ ಶ್ರೀ ಎಂ.ಪಿ.ಪ್ರಕಾಶ್ ರವರ ಪುತ್ರಿಯಾದ ಶ್ರೀಮತಿ ಲತಾ ಮಲ್ಲಿಕಾರ್ಜುನ್ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದೊಡನೆ ಶ್ರದ್ಧಾಭಕ್ತಿವುಳ್ಳವರು. ಶ್ರೀ ಜಗದ್ಗುರು ಗಳವರಿಗೆ ಫಲ,ಪುಷ್ಪ, ಹಾರ ಅರ್ಪಿಸಿ ಮಾರ್ಗದರ್ಶನ ಕೋರಿದ ಶಾಸಕಿ ಶ್ರೀಮತಿ ಲತಾ ಮಲ್ಲಿಕಾರ್ಜುನ್ ರವರಿಗೆ ನಿಮ್ಮ ತಂದೆಯ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಕಲೆ, ಸಾಂಸ್ಕೃತಿಕ, ಸಾಹಿತ್ಯಿಕಾಸಕ್ತಿಯ ಅಪರೂಪದ ರಾಜಕಾರಣಿಯಾಗಿದ್ದರು. ರಾಮಕೃಷ್ಣ ಹೆಗಡೆ, ಎಸ್. ಆರ್. ಬೊಮ್ಮಾಯಿ, ಎಚ್. ಡಿ. ದೇವೇಗೌಡ, ಜೆ. ಹೆಚ್. ಪಟೇಲ್, ಸೇರಿದಂತೆ ವಿವಿಧ ಸರ್ಕಾರಗಳಲ್ಲಿ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರೂ, ರಾಜಕೀಯ ಸೋಲು ಗೆಲುವುಗಳನ್ನು ಸಮ ಪ್ರಮಾಣದಲ್ಲಿ ಅನುಭವಿಸಿದ್ದ ಪ್ರಕಾಶ್, ಜನಪರ ಕೆಲಸಗಳನ್ನು ಮಾಡುವ ಮೂಲಕ ಕರ್ನಾಟಕದ ರಾಜಕೀಯದಲ್ಲಿ ಒಬ್ಬ ಸರಳ ಸಜ್ಜನರಾಗಿದ್ದರು. ನಮ್ಮ ಮಠದ ಆತ್ಮೀಯ ಶಿಷ್ಯರಾದ ಶ್ರೀ ಎಂ. ಪಿ. ಪ್ರಕಾಶ್ ರವರ ಮಗಳಾದ ನೀವು ರಾಜಕೀಯ ಕ್ಷೇತ್ರದಲ್ಲಿ ರೈತರಿಗೆ ನೆರವಾಗುವ ಕಾರ್ಯಗಳಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವಂತೆ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಪತಿ ಮಲ್ಲಿಕಾರ್ಜುನ್, ಹರಪನಹಳ್ಳಿಯ ವಿವಿಧ ಸಮಾಜಗಳ ಮುಖಂಡರು ಹಾಜರಿದ್ದರು.