27-06-2023 11:10 PM
ಶ್ರೀ ತರಳಬಾಳು ವಿದ್ಯಾಸಂಸ್ಥೆಯ ತ್ರಿವಿಧ ದಾಸೋಹ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕೆಂಬ ಹಿರಿಯ ಶ್ರೀಗಳ ದೂರ ದೃಷ್ಟಿತ್ವ ಒಳಗೊಂಡಂತೆ ಶ್ರೀಮಠದ ಸಾಮಾಜಿಕ ಕಾರ್ಯಗಳ ಬಗ್ಗೆ ಶ್ರೀಯುತ ಗಿರಿಜಾ ಶಂಕರ್ ರವರು ಸಮಗ್ರ ಮಾಹಿತಿಯನ್ನು ಬಲು ಅಚ್ಚುಕಟ್ಟಾಗಿ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. ಮಠಗಳನ್ನು ಒಂದು ಜನಾಂಗದ ಸೂಚಕವೆಂಬಂತೆ ಹಾಗೂ ಅದೇ ಜನಾಂಗದವರ ಬೆನ್ನಿಗಷ್ಟೇ ಆಯಾ ಮಠಗಳು ನಿಲ್ಲುತ್ತವೆ ಎಂಬುದು ಬಹುತೇಕರ ಅಭಿಪ್ರಾಯ. ಆದರೆ ಇದಕ್ಕೆ ಅಪವಾದವೆಂಬಂತೆ ಸರ್ವ ಜನಾಂಗದ ಏಳ್ಗೆಗಾಗಿ ಶ್ರೀಮಠವು ಶ್ರಮಿಸುತ್ತಿದೆ. ಶ್ರೀಗಳು ನಡೆಸಿಕೊಡುವ ನ್ಯಾಯಪೀಠದಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಅನೇಕ ಪ್ರಕರಣಗಳು ಇತ್ಯರ್ಥಗೊಂಡಿವೆ. ನೀರು ಕಾಣದ ಬಯಲುಸೀಮೆಯ ರೈತನ ಮೊಗದಲ್ಲಿ ಬದುಕಿನ ಭರವಸೆಯನ್ನು ತರಳಬಾಳು ಶ್ರೀಗಳು ಮೂಡಿಸಿದ್ದಾರೆ. ಹೇಳುತ್ತಾಹೋದಲ್ಲಿ ನಮ್ಮ ಕಣ್ಣೆದುರಿಗೆ ಸಾಕಷ್ಟು ನಿದರ್ಶನಗಳು ಕಾಣಸಿಗುತ್ತವೆ. ಸಮಾಜವು ನೈತಿಕವಾಗಿ ಸರಿಯಾದ ಹಾದಿಯಲ್ಲಿ ಸಾಗಬೇಕಾದಲ್ಲಿ ಧರ್ಮ ಗುರುಗಳ ಮತ್ತು ಧಾರ್ಮಿಕ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅಂತಹ ಸಾಮಾಜಿಕ ಕಾರ್ಯಗಳನ್ನು ತರಳಬಾಳು ಶ್ರೀಮಠವು ನಿರಂತರವಾಗಿ ನಡೆಸಿಕೊಂಡು ಬರುತ್ತಲೇ ಇದೆ. ಮುಂದೆಯೂ ಸಹ ಶ್ರೀಮಠದ ಭಕ್ತರು ಸಮಾಜದ ಒಳಿತಿಗಾಗಿ ಶ್ರೀಮಠದ ಸಮಾಜಮುಖಿ ಕಾರ್ಯಗಳಿಗೆ ತಮ್ಮ ನಿರಂತರ ಸಹಕಾರವನ್ನು ಮುಂದುವರೆಸಿಕೊಂಡು ಹೋಗಲಿ. ಶ್ರೀಮಠದ ಸಾಧನೆ, ಸಾಮಾಜಿಕ ಕಾರ್ಯಗಳನ್ನು ನಾಡಿನ ಜನತೆಗೆ ತಮ್ಮ ಲೇಖನದ ಮೂಲಕ ಪ್ರಸ್ತುತಪಡಿಸಿದ ಲೇಖಕರಾದ ಶ್ರೀಯುತ ಗಿರಿಜಾಶಂಕರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು.
ರವಿನಾಗ್ ತಾಳ್ಯ
ತಾಳ್ಯ, ಕರ್ನಾಟಕ, ಭಾರತ