ಕವಿತೆ: ಭಾರತದ ರೈತ

  •  
  •  
  •  
  •  
  •    Views  

ನಾನು ಈ  ಪುಣ್ಯ ಭಾರತದ ರೈತ
ನಿತ್ಯವೂ ಸಾಯುತ್ತಿದ್ದೇನೆ 
ಪತ್ರಿಕೆಗಳು ಹೇಳುತ್ತಿವೆ:
ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ನಾನು ಹೇಳುತ್ತೇನೆ: 
ನನ್ನ ಕತ್ತನ್ನು ಹಿಸುಕಲಾಗುತ್ತಿದೆ.

ರಾಜಕೀಯ ನೇತಾರರ ಭಾಷಣಗಳಲ್ಲಿ
ಸರಕಾರದ ಯೋಜನೆಗಳಲ್ಲಿ
ಕೋಟಿ ಕೋಟಿ ರೂಪಾಯಿ ನನ್ನ ಮೇಲೆ
ಖರ್ಚಾಗುತ್ತಿದೆ
ಆದರೆ ನಾನು ಮಾತ್ರ ಎರಡು ಹೊತ್ತಿನ ರೊಟ್ಟಿಗಾಗಿ
ಸಾಯುತ್ತಿದ್ದೇನೆ, ನಿತ್ಯವೂ ಸಾಯುತ್ತಿದ್ದೇನೆ.

ಕೆಮ್ಮಿ ಕೆಮ್ಮಿ ನನಗೆ ಸಾಕಾಗಿಹೋಗಿದೆ 
ಬತ್ತಿಹೋಗಿದೆ ನನ್ನ ಕಣ್ಣೀರ ಹನಿ 
ಸಾಯುವುದು ನನಗೀಗ ಸುಲಭವೆನಿಸಿದೆ! 
ನನ್ನ ಕೂಗು ಯಾರಿಗೂ ಕೇಳದಾಗಿದೆ
ಏಕೆಂದರೆ ಈ ಪುಣ್ಯಭಾರತದ ರೈತ ನಾನು!


ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

17-8-2017