ಏಕಲವ್ಯನಂತೆ ಕಲಿಕಾ ನಿಷ್ಠೆಯನ್ನು ಬೆಳೆಸಿಕೊಳ್ಳಬೇಕು - ಶ್ರೀ ತರಳಬಾಳು ಜಗದ್ಗುರುಗಳವರು
ಸಿರಿಗೆರೆ ಜು.3 : ಸ್ಥಳೀಯ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮಾ ಹಾಗೂ ಶಿವ ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದ್ರೋಣಾಚಾರ್ಯರು ಏಕಲವ್ಯನಿಗೆ ಬಿಲ್ಲು ವಿದ್ಯೆಯನ್ನು ಕಲಿಸಲು ನಿರಾಕರಿಸಿದರು. ಏಕಲವ್ಯನು ಗುರು ದ್ರೋಣಾಚಾರ್ಯರ ವಿಗ್ರಹವನ್ನು ಸ್ಥಾಪಿಸಿ ನಿಷ್ಠೆಯಿಂದ ಬಿಲ್ಲು ವಿದ್ಯೆಯನ್ನು ಕಲಿತು ಅರ್ಜುನನನ್ನು ಮೀರಿಸುವ ಅಪ್ರತಿಮ ಬಿಲ್ಲುಗಾರ ಎನಿಸಿಕೊಂಡನು.
ಮಕ್ಕಳು ಶ್ರದ್ಧೆ ಮತ್ತು ನಿಷ್ಠೆಯಿಂದ ಜ್ಞಾನಾರ್ಜನೆಯನ್ನು ಮಾಡಬೇಕು ಎಂದರು. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಇನ್ನುವಂತೆ ಮಾತೃದೇವೋಭವ ಪಿತೃದೇವೋಭವ ಎನ್ನುವ ಮಾತಿನಂತೆ ತಾಯಿಗೆ ಪ್ರಥಮ ಸ್ಥಾನವನ್ನು ನೀಡಲಾಗಿದೆ ನಂತರದ ಸ್ಥಾನ ತಂದೆಗೆ, ತಾಯಿ ತನ್ನ ಮಕ್ಕಳಿಗೆ ಪ್ರೀತಿ ವಾತ್ಸಲ್ಯ ಕರುಣೆಯನ್ನು ತೋರಿಸುತ್ತಾಳೆ, ತಂದೆಗಿಂತ ವಿದ್ಯೆ ಕಲಿಸುವುದರಲ್ಲಿ ತಾಯಿಯೇ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದರು.
ಬಸವಣ್ಣನವರ ಈ ಕೆಳಕಂಡ ವಚನವನ್ನು ಪ್ರಸ್ತಾಪಿಸಿದ ಶ್ರೀಗಳವರು
ಮಡಕೆಯ ಮಾಡುವರೆ ಮಣ್ಣೇ ಮೊದಲು;
ತೊಡಿಗೆಯ ಮಾಡುವರೆ ಹೊನ್ನೇ ಮೊದಲು;
ಶಿವಪಥವನರಿವರೆ ಗುರುಪಥವೇ ಮೊದಲು;
ಕೂಡಲ ಸಂಗಮದೇವರನರಿವರೆ ಶರಣರ ಸಂಗವೇ ಮೊದಲು.
ಎನ್ನುವಂತೆ ತಾಯಿಯೇ ಗುರುವಿನ ಶ್ರೇಷ್ಠತೆನ್ನು ತಿಳಿಸಿದರು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ವಿದ್ಯಾರ್ಥಿಗಳು ಗುರುವಿನ ಮುಖೇನ ಜ್ಞಾನವನ್ನು ಸಂಪಾದಿಸುತ್ತಾರೆ. ಭಾರತದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿರುವುದು ಗುರುವಿಗೆ ನೀಡಿದ ಗೌರವವಾಗಿದೆ ಎಂದರು. ಅಕ್ಷರವನ್ನು ಕಲಿತವರನ್ನು ಸಾಕ್ಷರರು ಎಂದು ಕರೆಯುತ್ತೇವೆ.ಅಕ್ಷರ ಕಲಿತ ಸಾಕ್ಷರರ ವರ್ತನೆ ಇಂದು ರಾಕ್ಷಸ ವರ್ತನೆಯಾಗಿದೆ ಎಂದರು ಅಕ್ಷರ ಕಲಿತ ವಿದ್ಯಾವಂತರು ನಡೆ- ನುಡಿ ಬದಲಾಗಬೇಕು ಎಂದರು. ಶಿಕ್ಷಕರನ್ನು ಗೌರವಿಸುವಂತಹ ಜಪಾನ್ ದೇಶದ ಒಂದು ದೃಷ್ಟಾಂತವನ್ನು ವಿವರಿಸಿದರು.
"ಜಪಾನ್ ನಲ್ಲಿ ಬೋಧನೆಯು, ಅತ್ಯಂತ ಗೌರವಾನ್ವಿತ ವೃತ್ತಿಯಾಗಿದೆ. ಇಲ್ಲಿ ಶಿಕ್ಷಕ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿರುತ್ತಾನೆ. ಶಿಕ್ಷಕರು ತಮ್ಮ ಅಂಗಡಿಗಳಿಗೆ ಬಂದಾಗ ಜಪಾನಿನ ವಾಣಿಜ್ಯೋದ್ಯಮಿಗಳು ತುಂಬಾ ಸಂತೋಷಪಡುತ್ತಾರೆ. ಅವರು ಅದನ್ನು ತಮ್ಮ ಗೌರವವೆಂದು ಪರಿಗಣಿಸುತ್ತಾರೆ" ಎಂದರು.
ಮೆಟ್ರೋದಲ್ಲಿ ಅವರಿಗೆ ವಿಶೇಷ ಆಸನಗಳನ್ನು ನಿಗದಿಪಡಿಸಲಾಗಿದೆ. ಅವರಿಗಾಗಿ ವಿಶೇಷ ಅಂಗಡಿಗಳಿವೆ. ಅಲ್ಲಿ ಶಿಕ್ಷಕರು ಯಾವುದೇ ರೀತಿಯ ಸಾರಿಗೆಗೆ, ಟಿಕೆಟ್ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಅದಕ್ಕಾಗಿಯೇ ಜಪಾನಿನಲ್ಲಿ ಶಿಕ್ಷಕರಿಗೆ ವಿಶೇಷ ದಿನದ ಅಗತ್ಯವಿಲ್ಲ. ಜಪಾನೀಯರ ಜೀವನದಲ್ಲಿ ಪ್ರತಿ ದಿನವೂ ಶಿಕ್ಷಕರ ದಿನ ಆಗಿದೆ ಎಂದರು.
ಈ ಸಂದರ್ಭದಲ್ಲಿ ಸಿರಿಗೆರೆಯಲ್ಲಿ ವಿದ್ಯಾಭ್ಯಾಸ ಮಾಡುವ ಸುಮಾರು 2500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಪ್ರಸಾದದ ವ್ಯವಸ್ಥೆಯ ಕಲ್ಪಿಸಲಾಗಿದೆ ಎಂದರು. ಮೈಸೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಶರಣ ಬಸವಂತಪ್ಪ ಗುಡಗತ್ತಿಯವರು ವಿದ್ಯಾರ್ಥಿ ದಾಸೋಹ ನಿಧಿಗೆ 1,00,101(ಒಂದು ಲಕ್ಷದ ಒಂದು ನೂರಾ ಒಂದು ರೂಪಾಯಿಗಳು) ರೂಪಾಯಿಗಳನ್ನು ವಿದ್ಯಾರ್ಥಿ ದಾಸೋಹ ನಿಧಿಗೆ ಸಮರ್ಪಿಸಿದರು ಇವರ ಈ ಆರ್ಥಿಕ ಸೇವೆಯನ್ನು ಶ್ರೀ ಜಗದ್ಗುರು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು. ಉಚಿತ ಪ್ರಸಾದ ಮತ್ತು ವಸತಿ ವ್ಯವಸ್ಥೆಗೆ ಎಲ್ಲರೂ ಕೈಲಾದ ಸೇವೆಯನ್ನು ಮಾಡಬೇಕೆಂದು ಸೂಚಿಸಿದರು.
ಶ್ರೀ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಯೋಜಿಸಿದ್ದ ಗುರುಪೂರ್ಣಿಮಾ ಮತ್ತು ಶಿವ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಪುಟಾಣಿಗಳಗೆ ಶ್ರೀ ಜಗದ್ಗುರುಗಳವರಿಂದ ಕೆಲವು ಮಕ್ಕಳಿಗೆ ಸ್ಲೇಟು ಮತ್ತು ಬಳಪದಿಂದ "ಶಿವ" ಎಂಬೆರಡಕ್ಷರದ ಅಕ್ಷರಾಭ್ಯಾಸ ಮಾಡಿಸಿದರು. ಅಕ್ಷರಾಭ್ಯಾಸ ಮಾಡಿಸಿದ ಮಕ್ಕಳು ಧನ್ಯತಾ ಭಾವ ವ್ಯಕ್ತಪಡಿಸಿದರು.
ಗುರುಪೂರ್ಣಿಮೆಯ ಈ ಶುಭ ಸಂದರ್ಭದಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ಪಾದ ಪೂಜೆಯನ್ನು ಮುಖ್ಯೋಪಾಧ್ಯಾಯಿನಿ ಎಂ.ಎನ್.ಶಾಂತಾ ಮತ್ತು ಅಣ್ಣನ ಬಳಗದ ಆಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ನೆರವೇರಿಸಿದರು. ಶ್ರೀಮಠದ ವೇದ ಶಿಕ್ಷಕರಾದ ಮರುಳಸಿದ್ದಯ್ಯ ಶಾಸ್ತ್ರಿಗಳು ಸರಸ್ವತಿ ಪೂಜೆಯ ಪೌರೋಹಿತ್ಯ ಕಾರ್ಯ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಜಗದ್ಗುರು ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಪಾದಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ-ಕಾಲೇಜುಗಳ ಮುಖ್ಯಸ್ಥರಾದ ಪ್ರಾಚಾರ್ಯ ಶಿವನಗೌಡ ಕೆ.ಸುರಕೋಡ, ಶಿವಬಸವಸ್ವಾಮಿ, ಪ್ರವೀಣ್ ಕುಮಾರ್ ಕೆ.ಆರ್. ದಿವಾಕರ್, ಉಪ ಪ್ರಾಚಾರ್ಯ ಜೆ.ಡಿ.ಬಸವರಾಜ ಮುಖ್ಯಶಿಕ್ಷಕ ಎಂ.ಎಸ್.ಸೋಮಶೇಖರ, ಶಾಲಾ-ಕಾಲೇಜುಗಳ ನೌಕರ ವರ್ಗದವರು ಶ್ರೀ ಜಗದ್ಗುರು ಅವರಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುವ ಮುಖಾಂತರ ಆಶೀರ್ವಾದ ಪಡೆದರು .
ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯಿಂದ ಪೋಷಕರು ಗುರುಪೂರ್ಣಿಮೆ ಮತ್ತು ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಪತಿ ವರ್ಷವೂ ಹಿರಿಯರಿಗೆ ತಂದೆ ತಾಯಿಗಳಿಗೆ ಗೌರವ ಸಲ್ಲಿಸುವ ಪಾದ ಪೂಜಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.