ಗುರು ಮಹಿಮೆ : ಅಣ್ಣಾಪುರ ಡಾ.ಶಿವಕುಮಾರ್

  •  
  •  
  •  
  •  
  •    Views  

ಆ ದೇವ ಈ ದೇವ
ಮಹದೇವನೆನಬೇಡ
ವಾಸುದೇವನೂ ಬೇಡ
ಏಸುದೇವನೂ ಬೇಡ
ಗುರುದೇವ ಬಳಿಯಿರಲು
ಬೇರೆ ದೇವರ ಹಂಗು ಬೇಡವೇ ಬೇಡ!!

ಗುರುವಿನಾ ಒಲವಿದ್ದು 
ಮಾಡಿದಾ ಕಾಯಕವು 
ಗುರಿಯ ಸಾಧಿಸಲು ಹದವು
ಗುರು ತೋರದಾ ಪಾಠ
ಜಲದುದಿತ ಗುಳ್ಳೆಯ ತೆರದಿ 
ತ್ವರಿತದಲಿ ನಶಿಸುವುದು ನೋಡಾ!

ಎಲ್ಲವನು ಸ್ವಂತದಲಿ
ತಾನೆ ಕಲಿತೆನೆಂಬ ಹಮ್ಮಿನಲಿ 
ಬೀಗುವುದದು ಅಹಂಭಾವ
ಎದ್ದು ತೋರುವಾ ತಾರಸಿಯು ತನ್ನನೆತ್ತಿರುವ ತಳಪಾಯವನು 
ಹಳಿದಂತೆ ನೋಡಾ!

ಶುರುವಿನಲಿ ಗುರುವಿರಲು
ಹರುಷದಲಿ ಸಾಗುವುದು ಬದುಕು
ಗುರುವಿರದ ಇರುವು
ತಿರುಳಿರದ ಅರಿವು
ಬೆರಳಿರದ ಕರವು
ಸರಳವಾಗದು ಬದುಕು ನೋಡಾ!

...ಅಣ್ಣಾಪುರ ಡಾ.ಶಿವಕುಮಾರ್
ಚಿಕಾಗೊ, ಯು.ಎಸ್.ಎ