ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಿ : ಎಚ್.ಎಸ್.ಟಿ.ಸ್ವಾಮಿ
ಭೀಮಸಮುದ್ರ -ಜುಲೈ15: ಶ್ರೀ ಭೀಮೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಕಿರುವಿಜ್ಞಾನ ಕೇಂದ್ರ ಮತ್ತು ಕಂಪ್ಯೂಟರ್ ಕೊಠಡಿ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಎಚ್.ಎಸ್.ಟಿ.ಸ್ವಾಮಿ ಭೀಮೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ವಿಜ್ಞಾನವೇ ಜಗತ್ತು ವಿಜ್ಞಾನ ವಿಲ್ಲವೆಂದರೆ ಜಗತ್ತಿಲ್ಲ ವಿಜ್ಞಾನ ಬಳಸಿಕೊಂಡು ಮೌಡ್ಯಗಳನ್ನು ಓಡಿಸಿ ಎಂದು ಮಕ್ಕಳಿಗೆ ಕರೆ ಕೊಟ್ಟರು.
ಗ್ರಾಮಾಂತರ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಮುಂದುವರೆಯಲಿ ಎಂದು ವೇದಾಂತ ಲಿಮಿಟೆಡ್ ಹಾಗೂ ಸ್ಟೇಮ ಲರ್ನಿಂಗ್ ಸಂಸ್ಥೆಯವರು ಯೋಜನೆಯಲ್ಲಿ ಕಿರು ವಿಜ್ಞಾನ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದಂತಹ ಪುಟ್ಟಪ್ಪ.ಬಿ.ಟಿ ಶಾಲೆಯ ಅಧ್ಯಕ್ಷರಾಗಿದ್ದು 8ನೇ ತರಗತಿ ಉಚಿತ ಸಮವಸ್ತ್ರ ವಿತರಣೆ ಮಾಡಿದರು. ಮಕ್ಕಳಿಗೆ ನಮ್ಮ ಶಾಲೆಯ ಸದಸ್ಯರಾದ ಬಿ.ಕೆ.ಕಲ್ಲಪ್ಪ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ವೇದಾಂತ ಲಿಮಿಟೆಡ್ ನ ಅರ್ಪಿತ್ ಪಟೇಲ್ ವಿದ್ಯಾರ್ಥಿಗಳಿಗೆ ಕಿರು ವಿಜ್ಞಾನ ಕೇಂದ್ರದ ಹಾಗೂ ಗಣಕಯಂತ್ರ ಕೊಠಡಿಯನ್ನು ಸದುಪಯೋಗ ಮಾಡಿಕೊಳ್ಳಬೇಕಾಗಿ ತಿಳಿಸಿಕೊಟ್ಟರು. ಸ್ಟೇಮ್ ಲರ್ನಿಂಗ್ ಸಂಸ್ಥೆಯ ಮಹೇಶ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಇರುವಂತಹ ವಿಜ್ಞಾನ ಕ್ವಿಜ್ ಹಾಗೂ ಇನ್ನು ಹಲವು ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವೇದಾಂತ ಲಿಮಿಟೆಡ್ ರವಿ.ಬಿ.ಸಿ ಹಾಗೂ ಭಾಗ್ಯ ಜ್ಯೋತಿ ಮೇಡಂ ಅವರು ಭಾಗವಹಿಸಿದ್ದರು ಸುಮಾರು ಐದು ವರ್ಷಗಳ ಕಾಲ ಮುಖ್ಯೋಪಾಧ್ಯರಾಗಿ ಕಾರ್ಯ ನಿರ್ವಹಿಸಿದಂತಹ ಮಂಜುನಾಥಚಾರಿ.ಎಸ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಗಣಕಯಂತ್ರ ಕಿರುವಿಜ್ಞಾನ ಕೇಂದ್ರವನ್ನು ಬಳಸಿಕೊಳ್ಳಬೇಕಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಪ್ರಕಾಶ್.ಎಸ್ ಸಾವುಕರ್ ವೇದಾಂತ ಲಿಮಿಟೆಡ್ ಧನ್ಯವಾದಗಳನ್ನು ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ವಿಜ್ಞಾನ ಗಣಕಯಂತ್ರ ಕೇಂದ್ರದ ಸದ್ಬಳಕೆಯನ್ನು ಮಾಡಿಕೊಳ್ಳಬೇಕಾಗಿ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯಸಲಾ ಸಮಿತಿಯ ಸದಸ್ಯರಾದ ದೇವ್ ಕುಮಾರ್, ಸರ್ ಉಪಸ್ಥಿತರಿದ್ದರು ಹಾಗೂ ಶಾಲೆಯ ಎಲ್ಲ ನೌಕರವರ್ಗದವರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು