ಶ್ರೀ ತರಳಬಾಳು ಜಗದ್ಗುರುಗಳವರ ವಿದೇಶ ಪ್ರವಾಸಕ್ಕೆ ಸಚಿವ ಶರಣ ಪ್ರಕಾಶ ಪಾಟೀಲ ಇವರು ಶುಭ ನಮನಗಳನ್ನು ಅರ್ಪಿಸಿದರು

  •  
  •  
  •  
  •  
  •    Views  

ಬೆಂಗಳೂರು : ಜ್ಞಾನಯೋಗಿಗಳು, ವಿದ್ವತ್ಪೂರ್ಣ ಜಗದ್ವಂದ್ಯರು, ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ರೈತಮುಖಿ, ನ್ಯಾಯಮುಖಿ ದಿವ್ಯ ದಾರ್ಶನಿಕರಾದ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು  ಬಸವಾದಿ ಶರಣರ ವಚನ ಸಾಹಿತ್ಯ ಪ್ರಸಾರ ಕೈಂಕರ್ಯದ ನಿಮಿತ್ತ ಭಾನುವಾರದಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶ ಪ್ರವಾಸಕ್ಕೆ ದಯಮಾಡಿಸಿದ ಸಂದರ್ಭದಲ್ಲಿ ಡಾ.ಶರಣ ಪ್ರಕಾಶ ರುದ್ರಪ್ಪ ಪಾಟೀಲರವರು, ಮಾನ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖಾ ಸಚಿವರು, ಕರ್ನಾಟಕ ಸರ್ಕಾರ ಇವರು ಪೂಜ್ಯ ಶ್ರೀ ಜಗದ್ಗುರುಗಳವರಿಗೆ ಭಕ್ತಿ ಸಮರ್ಪಿಸಿ, ಪೂಜ್ಯರ ಪ್ರಯಾಣಕ್ಕೆ ಶುಭ ನಮನಗಳನ್ನು ಅರ್ಪಿಸಿದರು.

ಶ್ರೀ ಜಗದ್ಗುರುಗಳವರು ಬೆಂಗಳೂರಿನಿಂದ ವಿಮಾನ ಮಾರ್ಗವಾಗಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಹವಾಯಿ ದ್ವೀಪ, ಚಿಕಾಗೋ, ಬಹಾಮ ದ್ವೀಪ, ಜರ್ಮನಿ, ಆಸ್ಟ್ರಿಯಾ, ಸ್ವಿಟ್ಜರ್ಲ್ಯಾಂಡ್, ಐರ್ಲೆಂಡ್, ದುಬೈ ಮುಂತಾದ ದೇಶಗಳಿಗೆ ತೆರಳಿ  ಅಲ್ಲಿನ ಭಾರತೀಯರನ್ನು ಉದ್ದೇಶಿಸಿ ಆಶೀರ್ವಚನ ದಯಪಾಲಿಸುವರು.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಹೊರ ತಂದಿರುವ ಬಸವಾದಿ ಶಿವಶರಣರ ವಚನ ಸಂಪುಟ ತಂತ್ರಾಂಶ ಮತ್ತು ಪಾಣಿನಿಯ ಅಷ್ಟಾಧ್ಯಾಯೀ ಕುರಿತ ತಂತ್ರಾಂಶ ಗಣಕಾಷ್ಟಾಧ್ಯಾಯೀಯನ್ನು ಇಲ್ಲಿ ಉಪನ್ಯಾಸ ನೀಡಲಿದ್ದಾರೆ.

Happened to meet Sharan Patil, Minister for Medical Education at the Bangalore airport just before boarding the plane for San Francisco.

Happened to meet the IPS officer Dr Kavitha, SP of Mysore, at the Bangalore airport just before boarding the plane for San Francisco. She introduced herself that she is from Bommanalli and she studied in our high school in Bheemasamudra.