ಶ್ರೀ ತರಳಬಾಳು ಜಗದ್ಗುರುಗಳವರಿಂದ ಅಮೇರಿಕಾ ಹಿಂದೂ ಧಾರ್ಮಿಕ ಸನ್ಯಾಸಿಗಳಿಗೆ ವಚನ ಸಾಹಿತ್ಯ ಪರಿಚಯ.

  •  
  •  
  •  
  •  
  •    Views  

ಅಮೇರಿಕಾದ ಕವಾಯಿ ದ್ವೀಪದಲ್ಲಿರುವ ಹಿಂದೂ ಆಶ್ರಮಕ್ಕೆ ಶ್ರೀ ಜಗದ್ಗುರುಗಳವರ ಭೇಟಿ.

ಅಂತರರಾಷ್ಟ್ರೀಯ ನಿಯತಕಾಲಿಕೆ "Hinduism Today" ಗೆ  ಶ್ರೀ ಜಗದ್ಗುರುಗಳವರಿಂದ ಲೇಖನ ಬರೆಯಲು ಆಶ್ರಮದ ಪೂಜ್ಯರು ಗಳ ಮನವಿ.

ಅಮೇರಿಕಾ 29-07-2023 : ಅಮೇರಿಕಾ ಪ್ರವಾಸದಲ್ಲಿರುವ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಪೆಸಿಫಿಕ್ ಸಾಗರದ ಹವಾಯಿ ದ್ವೀಪವಾದ ಕೌಯಿಯಲ್ಲಿರುವ ಹಿಂದೂ ಮಠಕ್ಕೆ ಭೇಟಿ ನೀಡಿದರು. 

ಈ ಮಠದಲ್ಲಿ 18 ಅಮೆರಿಕನ್ ಪೂಜ್ಯ ಸನ್ಯಾಸಿಗಳಿದ್ದಾರೆ. ಅವರು ತುಂಬಾ ಸರಳ ಮತ್ತು ಸಮರ್ಪಿತ ಜೀವನವನ್ನು ನಡೆಸುತ್ತಿದ್ದಾರೆ. ಶ್ರೀ ಜಗದ್ಗುರುಗಳವರನ್ನು ಭಕ್ತಿ ಗೌರವಗಳಿಂದ ಸ್ವಾಗತಿಸಿ, ವಿದ್ಯುತ್ ಗಾಡಿಯಲ್ಲಿ ಕರೆದೊಯ್ದರು.  ಮರಗಳು ಮತ್ತು ವಿಶೇಷ ಸಸ್ಯವರ್ಗದಿಂದ ತುಂಬಿದ 300 ಎಕರೆ ಪ್ರದೇಶದಲ್ಲಿ ಹರಡಿರುವ ತಮ್ಮ ಆಶ್ರಮವನ್ನು ಪೂಜ್ಯರಿಗೆ ಪರಿಚಯಿಸಿದರು. ಆಶ್ರಮದ  ಬೆಟ್ಟಗಳ ಕೆಳಗೆ ಒಂದು ಸಣ್ಣ ತೊರೆಯ ಜುಳು ಜುಳು ನಾದವು ಮನಸ್ಸನ್ನು ಉಲ್ಲಾಸಿತರನ್ನಾಗಿಸುವ ಸಂದರ್ಭವನ್ನು ಶ್ರೀ ಜಗದ್ಗುರುಗಳವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಶ್ರೀ ತರಳಬಾಳು ಜಗದ್ಗುರುಗಳವರು ಸಂಸ್ಕೃತ ವ್ಯಾಕರಣಕ್ಕೆ ಸಂಬಂಧಿಸಿದ ಪಾಣಿನಿಯ ಅಷ್ಟಾಧ್ಯಾಯಿ ಸೂತ್ರಗಳ ಕುರಿತು ಹಾಗೂ ಬಸವಾದಿ ಶರಣರ ವಚನ ಸಾಹಿತ್ಯವನ್ನು18 ಅಮೆರಿಕನ್ ಪೂಜ್ಯರಿಗೆ ಪರಿಚಯಿಸಿದರು. ಸುಮಾರು ಒಂದು ಗಂಟೆ ಕಾಲ ಶರಣರ ಬರಹ ಮತ್ತು ಬದುಕಿನ ಬಗ್ಗೆ ಕುರಿತು ಚರ್ಚಿಸಿದರು.

ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರ ಆಧ್ಯಾತ್ಮ ಜ್ಞಾನವನ್ನು ಮನಸಾ ಪ್ರಶಂಸಿಸಿದ ಅಮೇರಿಕಾ ಪೂಜ್ಯರುಗಳು, ತರಳಬಾಳು ಬೃಹನ್ಮಠದ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ಹೊಂದಿರುವುದಾಗಿ ತಿಳಿಸಿದರು. ತಮ್ಮ ವಿಚಾರ ಪ್ರಭೆಯನ್ನು ತಮ್ಮ ಮಠದ ಜನಪ್ರಿಯ ಅಂತರರಾಷ್ಟ್ರೀಯ ನಿಯತಕಾಲಿಕ "ಹಿಂದೂಯಿಸಂ ಟುಡೇ" ಗೆ ಶ್ರೀ ತರಳಬಾಳು ಜಗದ್ಗುರುಗಳವರಿಂದ ಲೇಖನಗಳ ಮೂಲಕ ಬರೆಯಬೇಕೆಂದು ಪೂಜ್ಯರುಗಳು ಬಯಸಿದರು. 

ಕರ್ನಾಟಕದಲ್ಲಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳ ವಚನ ವಾಚನವನ್ನು ರೆಕಾರ್ಡ್ ಮಾಡಲು ಮತ್ತು ತಮ್ಮ ಪತ್ರಿಕೆಯಲ್ಲಿ ಲೇಖನ ಬರೆಯಲು  ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.

I am at the seashore of the Kauai island in Hawaii. Will be flying from here in two hours to Honolulu.

Visited a Hindu monastery in Kauai a small island of Hawaii in the Pacific Ocean. There are 18 American monks in this monastery.

They are leading a very simple and dedicated life. They took me in an electric cart and showed me their Ashram spread over 300 acres full of trees and vegetation. A small stream is flowing down the hills.

I introduced Vachana literature to them and had discussions with them for about an hour. They want me to  write an article to their popular international magazine “Hinduism Today”

They want to send a journalist from Bangalore to record the Vachana recital by the school children and make a write up in their magazine.

The Rudraksha fruits grown in the Monastery. Bigger in size is the fresh Rudraksha fruit fallen from the tree. It is bluish in color. They offered me a garland of Rudraksha.