ಅಮೇರಿಕಾ ಸಾನ್ ಜೋಸ್ ಬಾಲಾಜಿ ದೇವಾಲಯದಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ಅನುಗ್ರಹ ಪೂರ್ವಕ ಸಂದೇಶ.
ತಿರುಪತಿ ಎಂದ ಕೂಡಲೇ ನಮಗೆ ಹತ್ತಾರು ವಿವರಗಳು ಕಣ್ಮುಂದೆ ಸುಳಿಯುತ್ತವೆ. ಅಲ್ಲಿಯ ಗುಡಿಯ ವೈಭವ, ಹತ್ತಾರು ರೀತಿಯ ಉತ್ಸವಗಳು, ಜಗತ್ತಿನ ಹಲವು ಭಾಗಗಳಿಂದ ಅಲ್ಲಿಗೆ ಹರಿದುಬರುವ ಜನಸಾಗರ, ಲಡ್ಡು ಪುಸಾದದ ರುಚಿ, ಅಲ್ಲಿ ಸಂಗ್ರಹವಾಗುವ ಕಾಣಿಕೆಯ ರಾಶಿ, ಅನ್ನಮಾಚಾರ್ಯರ ಸಂಕೀರ್ತನೆ, ಸುಂದರ ಪ್ರಕೃತಿಯ ಮಡಿಲು, ಎಂ. ಎಸ್. ಸುಬ್ಬುಲಕ್ಷ್ಮಿ ಹಾಡಿರುವ ಸುಪ್ರಭಾತ ಗರ್ಭಗುಡಿಯಲ್ಲಿ ನೆಲೆ ನಿಂತಿರುವ ವಿಗ್ರಹದ ರಹಸ್ಯ ಮತ್ತು ಅದರ ಸೊಗಸು-ಹೀಗೆ ಹತ್ತಾರು ಸಂಗತಿಗಳು ಮನೋಮುದ್ರಿಕೆಯಲ್ಲಿ ಸಂಚಾರವಾಗುತ್ತವೆ. ಸಾವಿರಾರು ವರ್ಷಗಳಿಂದ ಜನಾದರಣೆಯನ್ನು ಪಡೆದಿರುವ ಈ ದೇವಾಲಯ ನಮ್ಮ ಸಂಸ್ಕೃತಿಯನ್ನು ರೂಪಿಸುವಲ್ಲೂ ಪ್ರಭಾವವನ್ನು ಬೀರುತ್ತಿರುವುದು ಸುಳ್ಳಲ್ಲ.
ದಾಸ ಪರಂಪರೆಯ ಹಲವರು ದಾಸರು ತಿರುಪತಿ ತಿಮ್ಮಪ್ಪನನ್ನು ಸ್ತುತಿಸಿದ್ದಾರೆ. ಅನ್ನಮಾಚಾರ್ಯರ ಸಂಕೀರ್ತನೆಗಳು ಅಲ್ಲಿಯ ಪೂಜಾ ಸಮಯದಲ್ಲೂ ಬಳಕೆಯಾಗುತ್ತವೆ. ಆಳ್ವಾರರ ಪಾಶರಗಳೂ ಕೂಡ ವಿಶೇಷ ಮನ್ನಣೆಯನ್ನು ಪಡೆದಿರುವ ಬಾಲಜಿಯ ಮಹಿಮೆ ಅಪಾರ.
ಅಮೇರಿಕಾ ಸಾನ್ ಜೋಸ್ ಬಾಲಾಜಿ ದೇವಾಲಯದ ಆಡಳಿತ ಮಂಡಳಿಯ ಕೋರಿಕೆಯಂತೆ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಮೇರಿಕಾದಲ್ಲಿರುವ ಭಾರತೀಯ ಸಂಜಾತರಿಗೆ ಅನುಗ್ರಹ ಪೂರ್ವಕ ಸಂದೇಶ ಕರುಣಿಸಿದರು.