ದೇಶದ ಏಳಿಗೆಗಾಗಿ ನಿಸ್ವಾರ್ಥ ಮನೋಭಾವದಿಂದ ದುಡಿದ ಮಹಾನೀಯರ ಆದರ್ಶಗಳು ನಮ್ಮ ಯುವಕರಿಗೆ ಮಾದರಿಯಾಗಬೇಕು.

  •  
  •  
  •  
  •  
  •    Views  


ಸಿರಿಗೆರೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮ

ಸ್ವಾತಂತ್ರ‍್ಯ ಎಂದರೆ ಇನ್ನೊಬ್ಬರನ್ನು ಗೌರವಿತವಾಗಿ ಕಾಣುವುದಾಗಿದೆ - ಪ್ರೊ. ಎಸ್.ಬಿ.ರಂಗನಾಥ್

ರೈತ ಹಾಗೂ ಸೈನಿಕರೇ ನಮ್ಮ ದೇಶದ ಆಸ್ತಿ - ಹೆಚ್.ಆರ್.ಬಸವರಾಜಪ್ಪ

ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ 77ನೆಯ ಸ್ವಾತಂತ್ರ‍್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 

ಧ್ವಜಾರೋಹಣ ನೆರವೇರಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರಾದ ಹೆಚ್.ಆರ್.ಬಸವರಾಜಪ್ಪನವರು ಮಾತನಾಡಿ ಬ್ರಿಟಿಷರಿಂದ ಸುಮಾರು 2000 ವರ್ಷಗಳ ನಂತರ ಅನೇಕ ಸ್ವತಂತ್ರ ಹೋರಾಟಗಾರರ ತ್ಯಾಗ, ಹೋರಾಟದ ಮೂಲಕ ಭಾರತೀಯರಾದ ನಾವು ಸ್ವತಂತ್ರ ಭಾರತದ ಪ್ರಜೆಗಳಾಗಿದ್ದೇವೆ. 

ಸ್ವಾತಂತ್ರ‍್ಯದ ಮೂಲಕ ಅಸಮಾನತೆ, ಜಾತಿಯತೆ, ಕೋಮುವಾದಗಳಿಂದ ಇಂದು ನಾವು ಬಿಡುಗಡೆ ಹೊಂದುತ್ತೀದ್ದೇವೆ. ಭ್ರಷ್ಟಾಚಾರ ಭಾರತದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಾಶಪಡಿಸುತ್ತಿದೆ. ಹಾಗಾಗಿ ಭ್ರಷ್ಟಾಚಾರವನ್ನು ನಾವೆಲ್ಲರೂ ಕಿತ್ತೆಸೆಯಬೇಕು. ರೈತ ಹಾಗೂ ಸೈನಿಕರೇ ನಮ್ಮ ದೇಶದ ಆಸ್ತಿ. ಇವರನ್ನು ದೇಶದ ಪ್ರತಿಯೊಬ್ಬರು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸ್ವತಂತ್ರವೆಂದರೆ ಸಂವಿಧಾನದ ಅಡಿಯಲ್ಲಿ ಜೀವಿಸುವುದಾಗಿದೆ ಎಂದರು.

ಶ್ರೀಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಬಿ.ರಂಗನಾಥ್ ಮಾತನಾಡಿ ಸ್ವಾತಂತ್ರ‍್ಯ ಎಂದರೆ ಇನ್ನೊಬ್ಬರನ್ನು ಗೌರವಿತವಾಗಿ ಕಾಣುವುದಾಗಿದೆ. ಭಾರತ ದೇಶವು ಬೃಹತ್ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಯನ್ನು ಹೊಂದುತ್ತಿರುವ ರಾಷ್ಟ. ಭವ್ಯ ಭಾರತದ ನಿರ್ಮಾಣವನ್ನು ಮಾಡುವ ಶಕ್ತಿ ಯುವಕರ ಕೈಯಲ್ಲಿದೆ. ಬದುಕುವ ಛಲ, ಧರ್ಮಸಹಿಷ್ಣುತೆ, ಉತ್ತಮ ಚಾರಿತ್ರ್ಯ, ಸಾಧನೆಯಕಿಚ್ಚು ಇದ್ದರೆ ಮಾತ್ರ ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪಬಹುದಾಗಿದೆ. ಸಿರಿಗೆರೆ ಮಠದಿಂದ ಉಚಿತ ಹಾಸ್ಟೆಲ್ ಮೂಲಕ ಮಕ್ಕಳ ಶ್ರೇಯಾಭಿವೃದ್ಧಿಗೆ ಶ್ರೀಗಳು ದಾರಿ ದೀಪವಾಗಿದ್ದಾರೆ. ವಚನ ಸಾಹಿತ್ಯ, ಶೈಕ್ಷಣಿಕ ಕಲೆ, ಸಾಹಿತ್ಯ, ಸಂಗೀತ ಹಾಗೂ ಮುಂತಾದ ಕಾರ್ಯಕ್ರಮಗಳ ಮೂಲಕ ಎಲ್ಲ ವಿದ್ಯಾರ್ಥಿಗಳಿಗೂ ಕಲಿಯಲು ಶ್ರೀಗಳು ಅವಕಾಶ ನೀಡಿದ್ದಾರೆ ಎಂದರು.

ಶ್ರೀ ಸಂಸ್ಥೆಯ ಆಡಳಿತ ಅಕಾರಿಗಳಾದ ಡಾ. ಹೆಚ್.ವಿ.ವಾಮದೇವಪ್ಪ ಹಾಗೂ ಬೆಂಗಳೂರಿನ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಕೆ.ನಾರಾಯಣ ಸ್ವಾಮಿ ಸ್ವತಂತ್ರ ಚಳುವಳಿ ಮತ್ತು ಸಮಕಾಲೀನ ಭಾರತ ಎಂಬ ವಿಷಯಗಳ ಬಗ್ಗೆ ಮಾತನಾಡಿದರು. 

ಬಿ.ಎಲ್.ಆರ್.ಪಿಯು ಕಾಲೇಜಿನ ವಿದ್ಯಾರ್ಥಿನಿ ಹಜೀರಾ ಖಾನಂ ಹಿಂದಿ ಭಾಷೆಯಲ್ಲಿ ಹಾಗೂ ಎಂ.ಬಿ.ಆರ್.ಪಿ.ಯು ಕಾಲೇಜಿನ ವಿದ್ಯಾರ್ಥಿ ಮಾತೃ ಭಾಷೆ ಕನ್ನಡದಲ್ಲಿ ಸ್ವಾತಂತ್ರ್ಯೋತ್ಸವ ಬಗ್ಗೆ ಮಾತನಾಡಿದರು. ಮಾತನಾಡಿದರು. 

ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಂದ ಪಥಸಂಚಲನ, ಯೋಗ, ದೇಶಭಕ್ತಿಗೀತೆಗೆ ನೃತ್ಯರೂಪಕ ಕಾರ್ಯಕ್ರಮಗಳು ಜರುಗಿದವು. 

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ಭಾರತೀಯ ಸೇನೆಗೆ ಆಯ್ಕೆಯಾದ ವಿದ್ಯಾರ್ಥಿ ಅರುಣ್ ಕುಮಾರ್ ಅವರನ್ನು ಗೌರವಿಸಲಾಯಿತು.

ಶಾಲಾ-ಕಾಲೇಜುಗಳಿಂದ ನೃತ್ಯ ರೂಪಕ, ವಿವಿಧ ಕಾರ್ಯಕ್ರಮಗಳು ನಡೆದವು. ವೇಷಭೂಷಣ, ಪ್ರಬಂಧ, ಚಿತ್ರಕಲೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ನೀಡಲಾಯಿತು. ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Powered by Froala Editor