ಆಸ್ಟ್ರೀಯಾ ರೈತರ ಕೃಷಿ ಪದ್ಧತಿಗಳನ್ನು ವೀಕ್ಷಿಸಿದ ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಬೆಳೆ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಸುಧಾರಿಸಲು ಸದಾ ಚಿಂತಿಸುವ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಆಸ್ಟ್ರೀಯಾ ದೇಶದಲ್ಲಿ  ರೈತರೊಂದಿಗೆ ಚರ್ಚಿಸಿದರು 

ಆಸ್ಟ್ರಿಯಾ ಪ್ರವಾಸದಲ್ಲಿರುವ ಶ್ರೀ ಜಗದ್ಗುರುಗಳವರು ಈ ದೇಶದ ರಾಜಧಾನಿ ವಿಯೆನ್ನಾದಲ್ಲಿ 1977-79 ರ ಅವಧಿಯಲ್ಲಿ ನಾವು ವ್ಯಾಸಾಂಗ ಮಾಡಿದ್ದರು.

ತಮ್ಮ ವಿದ್ಯಾರ್ಥಿ ಜೀವನದಲ್ಲಿ ನೆರವಾದ ಅಧ್ಯಾಪಕರನ್ನು ಭೇಟಿ ಮಾಡಿ ಗೌರವ ಸಮರ್ಪಿಸಲು ಆಸ್ಟ್ರಿಯಾ ದೇಶಕ್ಕೆ ದಯಮಾಡಿಸಿರುವ ಪೂಜ್ಯರು ಅಲ್ಲಿನ ಕೃಷಿ ಪದ್ಧತಿಗಳ ಮೆಚ್ಚುಗೆ ವ್ಯಕ್ತಪಡಿಸಿ ಬಗ್ಗೆ ಇಲ್ಲಿನ ರೈತ ಸಮುದಾಯಕ್ಕೆ  ರವಾನಿಸಿರುವ ಸಂದೇಶದಲ್ಲಿ: ಆಸ್ಟ್ರಿಯಾದ ಪಶ್ಚಿಮ ಭಾಗದಲ್ಲಿ ಇನ್ಸ್ ಬ್ರಕ್ ಬಳಿಯ ಟ್ರಿನ್ ಎಂಬ ಸ್ಥಳದಲ್ಲಿ ಕೃಷಿ ಭೂಮಿಗೆ ಭೇಟಿ ನೀಡಿದೆವು. ಈ ಸ್ಥಳವು ಜರ್ಮನ್ ಗಡಿಗೆ ಹತ್ತಿರದಲ್ಲಿದೆ. ಇಲ್ಲಿನ ಜಮೀನಿನಲ್ಲಿ ದುಡಿಯುತ್ತಿರುವ ರೈತ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದೆವು. 

ಮನೆಯವರೆಲ್ಲರೂ - ತಂದೆ, ತಾಯಿ,ಮಗ ಮತ್ತು ಮಗಳು ಒಟ್ಟಾಗಿ ಹೊಲದಲ್ಲಿ ಹುಲ್ಲುಕಡ್ಡಿ ಕತ್ತರಿಸುವ ಮತ್ತು ಒಂದೆಡೆ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಹುಲ್ಲುಕಡ್ಡಿ ಕತ್ತರಿಸುವ ಟ್ರಾಕ್ಟರ್ ನ್ನು ನೋಡುತ್ತಾ ನಾವು ಆ ಹುಡುಗ ಓಡಿಸುತ್ತಿದ್ದ ಆ ಟ್ರ್ಯಾಕ್ಟರ್ ಹತ್ತಿ ಸವಾರಿ ಮಾಡಿದೆವು. ತನಗೆ ಉನ್ನತ ವ್ಯಾಸಂಗದಲ್ಲಿ ಆಸಕ್ತಿಯಿಲ್ಲ, ಆದರೆ ಪೂರ್ವಿಕರ ಆ ಜಮೀನಿನ ಸಾಗುವಳಿಯಲ್ಲಿ ತನಗೆ ಆಸಕ್ತಿ ಇದೆ ಎಂದು ಆ ಹುಡುಗ ನಮಗೆ ತಿಳಿಸಿದ. ರೈತರು  ಮೇವು ಸಂಗ್ರಹಿಸಿ, ಬೇಸಿಗೆ ಕಾಲದಲ್ಲಿ ಅದನ್ನೆಲ್ಲಾ ಒಂದು ಕಡೆ ಒಟ್ಟು ಮಾಡಿ, ಚಳಿಗಾಲದಲ್ಲಿ ಜಾನುವಾರುಗಳಿಗೆ ಮೇವಿನ ರೂಪದಲ್ಲಿ ಆಹಾರಕ್ಕಾಗಿ ಸಂಗ್ರಹಿಸುತ್ತಾರೆ. ನಾವು ಭೇಟಿಯಾದ ರೈತ ಕುಟುಂಬವು ವರ್ಷಕ್ಕೆ ಸುಮಾರು 1,20,000/- ಯುರೋ ಡಾಲರ್ ಗಳಿಸುತ್ತದೆ. ಅಂದರೆ ಅದರ ಮೌಲ್ಯ ಸುಮಾರು 11,00,000/- ಭಾರತೀಯ ರೂಪಾಯಿಗಳು.

ನಾವಿದ್ದ ಆ ಪ್ರದೇಶದ ಭೂಮಿಯ ಸುತ್ತಲೂ ಕಾಣುವ ಪರ್ವತಗಳನ್ನು ಆಲ್ಪ್ಸ್ ಪರ್ವತಗಳು ಎಂದು ಕರೆಯಲಾಗುತ್ತದೆ. ಚಳಿಗಾಲದಲ್ಲಿ ಈ ಎಲ್ಲಾ ಪರ್ವತಗಳು ಹಿಮದಿಂದ ಆವೃತವಾಗುತ್ತವೆ. ಚಳಿಗಾಲದಲ್ಲಿ ಸ್ಕೀಯಿಂಗ್ (Skiing) ಮಾಡಲು ಯುರೋಪಿನಾದ್ಯಂತ ಜನರು ಇಲ್ಲಿಗೆ ಬರುತ್ತಾರೆ. ಆಸ್ಟ್ರಿಯನ್  ಸರ್ಕಾರವು ಭೂಮಿಯ ವಿಸ್ತೀರ್ಣವನ್ನು ಆಧರಿಸಿ ರೈತರಿಗೆ ತಮ್ಮ ಭೂಮಿಯನ್ನು ನಿರ್ವಹಿಸಲು ಪ್ರತಿ ವರ್ಷ ಸ್ವಲ್ಪ ಹಣವನ್ನು ಪಾವತಿಸುತ್ತದೆ.

ಮರಗಳನ್ನು ಕಡಿಯಲು ರೈತರಿಗೆ ಇಲ್ಲಿ ಯಾವುದೇ ಪರವಾನಗಿಯ ಅಗತ್ಯವಿಲ್ಲ. ಆದರೆ ಯಾವುದೇ ಮರವನ್ನು ಕಡಿಯುವ ಮೊದಲು ಅವರು ಹೊಸ ಮರಗಳನ್ನು ನೆಡಬೇಕು.

ಅದು ಕಾರ್ಯನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಸೈರನ್ ನ್ನು ಪ್ರತಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಪರೀಕ್ಷೆ ಮಾಡಲಾಗುತ್ತದೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಬೆಟ್ಟ ಪ್ರದೇಶದಲ್ಲಿ ಯಾವುದೇ ಅವಘಡ ಸಂಭವಿಸಿದಾಗ, ಜನರನ್ನು ಎಚ್ಚರಿಸಲು ಮತ್ತು ಬೆಂಕಿಯನ್ನು ನಂದಿಸಲು ಮತ್ತು ಗಾಯಗೊಂಡವರಿಗೆ ಸಹಾಯ ಮಾಡಲು ಮೂರು ಬಾರಿ ಸೈರನ್ ನುಡಿಸಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ನಾಳೆ ಇಲ್ಲಿಂದ ಸ್ವಿಟ್ಜರ್ಲೆಂಡ್ ದೇಶದ ಜ್ಯೂರಿಚ್ ನಗರಕ್ಕೆ  ಶ್ರೀ ಜಗದ್ಗುರುಗಳವರು ಪ್ರಯಾಣಿಸಲಿದ್ದಾರೆ.

-------------------------------

We are in Austria. Came here yesterday. Vienna is the capital of this country. This is where I studied during the years 1977-79.

Visited the farm land in a place called Trin near Innsbruck in the western part of Austria.  This place is close to the German border. 

Talked to the farmer family members working in their land.  All the family members - Father, mother, son and daughter were jointly working on the field cutting the grass and collecting it.

Looked at the grass cutting tractor and took a ride on the tractor run by the boy carrying the grass. He told me that he has no interest in higher studies but in the cultivation of ancestral land.  

The farmers collect the grass, role it into a bundle during the summer season and store it for feeding the cattle in the winter. The farmer family which I met earns about 1,20,000/- euro dollars per year.

The mountains that you see around the land are called Alps mountains. During winter all these mountains will be covered by snow. People from all over Europe come here for skiing in the winter. The Austrian Government pays the farmers some money every year for maintaining their lands based on the extent of land.

The farmers do not need any license to cut the trees but they have to plant new trees before cutting any tree. 

Every Saturday at 12 PM, Siren is played to test whether it works or not. Whenever the Fire breaks out in the forest or any accident takes place in the valley, Siron is played for three times to warn the people and also to assemble to extinguish the fire and help the injured.

Going to Zurich in Switzerland tomorrow.