ಚಂದ್ರಯಾನ-3 ಉಡಾವಣೆ ಕಾರ್ಯದಲ್ಲಿ ತರಳಬಾಳು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೇವೆಯಲ್ಲಿದ್ದ ವಿಜ್ಞಾನಿ ಹೇಮಲತಾ ಕಾರ್ಯನಿರ್ವಹಣೆ ..!
"ಇದು ದಿಗ್ವಿಜಯದ ದಿನ. ಆರು ದಶಕಗಳ ಹಿಂದೆ ಡಾ. ವಿಕ್ರಂ ಸಾರಾಭಾಯ್ ಅವರು ಕಂಡ ಕನಸು ಈಡೇರಿದ ದಿನ. ಯಾವುದೇ ಮುಜುಗರ ಅಥವಾ ಹಿಂಜರಿಕೆ ಇಲ್ಲದೆ ಬೈಸಿಕಲ್ ನಲ್ಲಿ ಉಡಾವಣಾ ವಾಹನಗಳನ್ನು ಸಾಗಿಸಿದ ಆ ಚಿತ್ರಗಳನ್ನು ಕಂಡಾಗ, ವಿಕ್ರಂ ಮತ್ತು ಅವರ ತಂಡಕ್ಕೆ ಭಾರತದ ಶಕ್ತಿಯ ಬಗ್ಗೆ ನಂಬಿಕೆ ಇತ್ತು ಎಂಬ ಅರಿವಾಗುತ್ತದೆ. ಮತ್ತು ನಾವು ಈಗ ಭಾರತದ ಸ್ವದೇಶಿ ಸಾಮರ್ಥ್ಯಗಳನ್ನು ಬಲಪಡಿಸುತ್ತಿದ್ದೇವೆ"
"ಚಂದ್ರಯಾನ-3 ಭಾರತದ ಬಾಹ್ಯಾಕಾಶ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಇದು ಎತ್ತರಕ್ಕೆ ಸಾಗುತ್ತಾ, ಪ್ರತಿ ಭಾರತೀಯನ ಕನಸು ಹಾಗೂ ಮಹತ್ವಾಕಾಂಕ್ಷೆಯನ್ನು ಮೇಲೆ ಕೊಂಡೊಯ್ಯುತ್ತಿದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಬದ್ಧತೆಗೆ ಸಾಕ್ಷಿ. ಅವರ ಉತ್ಸಾಹ ಮತ್ತು ದಕ್ಷತೆಗೆ ಮನಸಾ ಅಭಿನಂದನೆಗಳು.
ಈ ಚಿತ್ರದಲ್ಲಿ ಪಿಂಕ್ ಕಲರ್ ಸೀರೆ ಹಾಗೂ ಹಳದಿ ಟ್ಯಾಗ್ ಧರಿಸಿರುವವವರು ಶ್ರೀಮತಿ ಹೇಮಲತಾರವರು. ಚಂದ್ರಯಾನ-3 ಉಡಾವಣೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಈ ಹಿಂದೆ ಬಡವರ ಪಾಲಿಗೆ ಶಿಕ್ಷಣದ ಮೂಲಕ ಬೆಳದಿಂಗಳ ನೀಡುವ ನಾಡಿನ ಹೆಮ್ಮೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಿತ ರಾಣೇಬೆನ್ನೂರಿನಲ್ಲಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ E&C Dept ನಲ್ಲಿ ಹಿರಿಯ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು. ಪ್ರಸ್ತುತ ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಶ್ರೀಮತಿ ಹೇಮಲತಾರವರು ಕರ್ತವ್ಯದಲ್ಲಿರುವುದು ನಮಗೆ ಸಂತಸದ ಸಂಭ್ರಮದ ಜೊತೆಗೆ ಹೆಮ್ಮೆಯ ಸಂಗತಿಯಾಗಿದೆ.