ಚಂದ್ರಯಾನ-3 ಉಡಾವಣೆ ಕಾರ್ಯದಲ್ಲಿ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿ ಗೋವಿಂದ ರಾಜ್ ಶೆಟ್ಟಿ
ಚಂದ್ರಯಾನ-3ರ ಯಶಸ್ವಿ ಯಾತ್ರೆಯು ಇಡೀ ಜಗತ್ತೇ ಭಾರತದ ಕಡೆಗೆ ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ಈ ಯಶಸ್ಸಿನ ಹಿಂದೆ ಅನೇಕ ತಂತ್ರಜ್ಞರ ಕಾರ್ಯ ಕ್ಷಮತೆಯನ್ನು ಮೆಚ್ಚುವಂತಹದ್ದು. ಈ ತಂತ್ರಜ್ಞರ ಸಾಲಿನಲ್ಲಿರುವ ವಿಜ್ಞಾನಿ ಗೋವಿಂದ ರಾಜ್ ಶೆಟ್ಟಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ.
ಚಂದ್ರಯಾನ-3 ಮಿಷನ್ ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ ಮತ್ತು ಆವಿಷ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀ ಗೋವಿಂದ ರಾಜ್ ಶೆಟ್ಟಿ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ತಾಂತ್ರಿಕ ವ್ಯವಸ್ಥೆಯ ವಿಭಾಗದಲ್ಲಿ ತಾಂತ್ರಿಕ ವಿನ್ಯಾಸ ಘಟಕದ ಹಿರಿಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿ ಗ್ರಾಮದ ಸುಬ್ಬಣ್ಣ ಶೆಟ್ಟಿಯವರ ಸುಪುತ್ರ ಗೋವಿಂದ ರಾಜ ಶೆಟ್ಟಿಯವರು ಪ್ರೌಢಶಾಲಾ ಶಿಕ್ಷಣವನ್ನು ಪಡೆದದ್ದು ಇದೇ ಗ್ರಾಮದ ಶ್ರೀ ತರಳಬಾಳು ಸಿದ್ದೇಶ್ವರ ಪ್ರೌಢಶಾಲೆಯಲ್ಲಿ 1985-86ರ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿ.
ಶ್ರೀ ಗೋವಿಂದ ರಾಜ್ ಶೆಟ್ಟಿಯವರು ಬಳ್ಳಾರಿಯಲ್ಲಿ ಮೆಕಾನಿಕಲ್ ಡಿಪ್ಲೊಮಾ ಮತ್ತು ಚಿತ್ರದುರ್ಗ ಜೆಎಂಐ ಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಕೆಲ ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿ, 1998ರಲ್ಲಿ ಇಸ್ರೊಗೆ ಸೇರಿದರು. ಕಳೆದ 26ವರ್ಷಗಳಿಂದ ಇಸ್ರೋದಲ್ಲಿದ್ದು, ಸೀನಿಯರ್ ಸೈಂಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾವು ಓದಿದ ಶಾಲೆಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಶ್ರೀ ಗೋವಿಂದ ರಾಜ ಶೆಟ್ಟರು ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ. ಈ ದತ್ತಿ ನಿಧಿಯಿಂದ ಪ್ರತಿವರ್ಷ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಗೋವಿಂದ ರಾಜ್ ಶೆಟ್ಟಿ ಅವರು ಎಲೆಮರೆಯ ಕಾಯಿಯಂತಿದ್ದು, ಇಂದಿಗೂ ಶಾಲೆ ಮತ್ತು ಗ್ರಾಮದ ಬಗೆಗೆ ಬದ್ಧತೆ ಮತ್ತು ಪ್ರೀತಿಯನ್ನ ಹೊಂದಿದ್ದಾರೆ ಎಂದು ಊರಿನ ಮುಖಂಡರಾದ ಶಾಂತನಗೌಡರು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.
-----------------------------------
Dear Sri Govindaraju,Bravo! Presently I am on a visit to Germany. Yesterday while travelling in Germany, I witnessed the successful soft landing of Chadrayana-3 Rover on the Moon.
I came to know that you are in the mission, and you had your early education in our school in Toolahalli. I also came to know that one more fellow scientist namely Smt Hemalatha M is from our Ranebennur Engineering college.
It is a matter of great pride for me and for all Indians especially when the Russians wanted to take a lead but miserably failed.
Congratulations to you and to all your fellow scientists for this great success which is a historical event. I was overwhelmed with joy to note that the products of our school/college have contributed their might for the success of this mission.
May God bless you with many more such success in future bringing India on the top of the space mission in the world !
Dr Shivamurthy Shivacharya Mahaswamiji
Taralabalu Mutt, Sirigere.
-----------------------------------