27-08-2023 12:49 PM
ಶ್ರೀ ಶ್ರೀ ಶ್ರೀ 1108 ಪರಮಪೂಜ್ಯರ ಪಾದಾರವಿಂದಗಳಿಗೆ ಫೊರಮಡತ್ತಾ ಶರಣು ಶರಣು ಶರಣು ಗುರುದೇವ . ಪರಮ ಪೂಜ್ಯರು, ದೇವರ ಸ್ವರೂಪ ರಾದ ತಾವುಗಳು ಬಸವಣ್ಣನವರ ಮತ್ತಿತರ ಆ ಕಾಲದ ಎಲ್ಲಾ ಶಿವಶರಣರ ವಚನಗಳನ್ನು ಗಣಕಯಂತ್ರದಲ್ಲಿ ಕೇಂದ್ರೀಕರಿಸಿ ಜಗದಲಕ್ಕೂ ಪಸರಿಸುವಂತೆ ಮಾಡಿದ ನಮ್ಮಗಳ ದೇವರ ಸ್ವರೂಪ ಶ್ರೀಗಳವರಿಗೆ ಭಕ್ತಿಪೂರ್ವಕ ಶಿರಸ್ಷ್ಟಾಂಗ ನಮಸ್ಕಾರಗಳು.
ಅಂದು ಸುಮಾರು 14 ವರ್ಷಗಳ ಹಿಂದೆ ಪೂಜ್ಯರು ತರಳಬಾಳು ಕೇಂದ್ರ ದಲ್ಲಿ ಎಲ್ಲ ವಚನಗಳನ್ನು ಗಣಕಯಂತ್ರದಲಿ ಕೇಂದ್ರೀಕರಿಸಿ, ಎಲ್ಲಾ ಸ್ವಾಮಿಜಿಯವರ, ಭಕ್ತರ ಸಮೂಕದಲ್ಲಿ ಉದ್ಘಾಟಿಸಲಾಯಿತು. ಪೇಜಾವರ ಶ್ರೀ ಗಳವರನ್ನು ನಮ್ಮ ಪೂಜ್ಯರು ನೀಮಗೆ ಯಾವ ವಚನ ಬೇಕೆಂದಾಗ, ಶ್ರೀ ಗಳವರು ಕಾಲೆ ಕಂಬ ಶಿರವೇ ಹೂನ್ನಕಳಶವಯ್ಯ ಎಂದಾಗ ಪೂಜ್ಯರು ತಕ್ಷಣವೆ ಗಣಕಯಂತ್ರದಲ್ಲಿ ತೋರಿಸಿದರು. ಶ್ರೀ ಪೇಜಾವರ ಗುರಗಳಿಗೆ ಬಹಳ ಆನಂದಮಯವಾಯಿತು ಮತ್ತು ಪ್ರಪಂಚಕ್ಕೆ ಆ ಕಾಲದ ವಚನಗಳು ಸುಲಭವಾಗಿ ಎಲ್ಲರಿಗೂ ತಿಳಿಯುವಂತಾಯಿತು.
ಆ ಕಾಲದ ಶಿವಶರಣರ/ಶಿವಶರಣೆಯರ ವಚನಗಳನ್ನು ಜಗದಲಕ್ಕೂ ಪಸರಿಸುವಂತೆ ಮಾಡಿದ ನಮ್ಮೆಲ್ಲರ ಪೂಜ್ಯ ಗುರುಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು
ಆರ್.ಎಸ್.ಮರುಳಸಿದ್ದಪ್ಪ
ಬೆಂಗಳೂರು