ರೈತರ ಪ್ರಾಯೋಗಿಕ ಪಾಠಶಾಲೆ – ತರಳಬಾಳು ಕೃಷಿವಿಜ್ಞಾನ ಕೇಂದ್ರ

  •  
  •  
  •  
  •  
  •    Views  

ದಾವಣಗೆರೆ: ದಾವಣಗೆರೆ ತಾಲೂಕಿನ ಸಿದ್ದನೂರು ಪವಾಡರಂಗವನಹಳ್ಳಿ ಹಾಗೂ ಅಗಸನಕಟ್ಟೆ ಗ್ರಾಮಗಳ ರೈತರು 5 ವರ್ಷಗಳ ಹಿಂದೆ ಜೀವನೋಪಾಯಕ್ಕೆ ಮಳೆಯನ್ನೇ ಆಶ್ರಯಿಸಬೇಕಿತ್ತು.  ಏರು ತಗ್ಗಿನ ಭೂಮಿಯನ್ನು ಹೊಂದಿದ್ದ ಈ ಗ್ರಾಮದಲ್ಲಿ ವ್ಯವಸಾಯ ಮಾಡುವುದೇ ಕಷ್ಟವಾಗಿತ್ತು. ಆದರೆ ಈಗ ಎಲ್ಲೆಲ್ಲೂ ನೀರಿನ ಬಗ್ಗೆ.

ಈ ಗ್ರಾಮಗಳಲ್ಲಿ ಕೊಳವೆಬಾವಿಗಳು ಮರುಪೂರಣಗೊಂಡಿವೆ. ಕೃಷಿ ಹೊಂಡಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಏಕ ಬೆಳೆ ಆಶ್ರಯಿಸಿದ್ದ ರೈತರು ಈಗ ಮಿಶ್ರಬೆಳೆಯಲ್ಲಿ ತೊಡಗಿದ್ದಾರೆ ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಅನುಷ್ಠಾನಗೊಳಿಸಿರುವ "ನಿಕ್ರಾ" ಯೋಜನೆಯ ಫಲ ಇದು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ಜಿಲ್ಲೆಯ ಕೃಷಿ ಮತ್ತು ಕೃಷಿಯೇತರ ಸಮಸ್ಯೆಗಳಿಗೆ ಅನುಗುಣವಾಗಿ ನವೀನ ತಾಂತ್ರಿಕತೆ ಪರಿಚಯಿಸುತ್ತಿದೆ ವಿದ್ಯಾನಗರದಲ್ಲಿ 20ಎಕರೆಯಲ್ಲಿ ಕದಳಿವನ, ತೋಳಹುಣಸೆಯಲ್ಲಿರುವ 20 ಎಕರೆಯಲ್ಲಿ ಕೇಸರಿ ವನವನ್ನು ನಿರ್ಮಿಸುವ ಮೂಲಕ ಸಸ್ಯ ಸಂಪತ್ತನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದಿಂದ ಕೇಂದ್ರವು ರೈತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ಸಿರಿಗೆರೆಯ ತರಳಬಾಳು ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಒಪ್ಪಂದದ ಮೇರೆಗೆ 2005ರಲ್ಲಿ ಆರಂಭವಾದ ಈ ಕೇಂದ್ರವು ರೈತರಿಗೆ ಕೃಷಿ ತಾಂತ್ರಿಕತೆಯನ್ನು ನೀಡುವುದು ಮುಂಚೂಣಿ. ಪ್ರಾತ್ಯಕ್ಷಿಕೆಗಳು, ಕ್ಷೇತ್ರ ಪ್ರಯೋಗಗಳು, ತರಬೇತಿಗಳು ಮತ್ತಿತರ ವಿಸ್ತರಣೆಗಳ ಮೂಲಕ ರೈತರಿಗೆ ಹೊಸ ತಾಂತ್ರಿಕತೆ ನೀಡುವುದೇ ತನ್ನ ಮುಖ್ಯ ಉದ್ದೇಶವಾಗಿರಿಸಿಕೊಂಡಿದೆ

ಜೊತೆಗೆ 380ಜನ ಗ್ರಾಮೀಣ ಯುವಕರಿಗೆ ತೆಂಗಿನ ಮರ ಹತ್ತುವ ತರಬೇತಿ ಕೌಶಲ ಕಲ್ಪಿಸಿ ಕೊಡುತ್ತಿದೆ. ಯುವಕರಿಗೆ ಯಂತ್ರಗಳನ್ನು ನೀಡಿ ಗ್ರಾಮೀಣ ಮಟ್ಟದಲ್ಲಿ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದೆ ನಗರದಲ್ಲಿ ಹಣ್ಣು ತರಕಾರಿ ಬಳಸಿದ ಬಳಿಕ ದೊರೆಯುವ ಘನತಾಜ್ಯದಿಂದ ಗೊಬ್ಬರ ತಯಾರಿಸಿ ಪೌಷ್ಟಿಕ ತಾರಸಿ ಹಾಗೂ ಕೈತೋಟಕ್ಕೆ ಬಳಸುವಂತೆ ಸಲಹೆ ನೀಡಿದ್ದು ಈ ಬಗ್ಗೆ 3500 ಜನ ಮಹಿಳೆಯರಿಗೆ ತರಬೇತಿ ನೀಡುತ್ತಿದೆ ಅಲ್ಲದೆ ಎರೆಹುಳು ಘಟಕ ಸ್ಥಾಪಿಸಿದೆ.  ಗ್ರಾಮೀಣ ಮಹಿಳೆಯರಿಗೆ ಕೃಷಿ ಸಖಿ ತರಬೇತಿಯನ್ನು ನೀಡುತ್ತಿದೆ.

ಅಗಸನಕಟ್ಟೆ ಸಿದ್ದನೂರು ಪವಾಡ ರಂಗವ್ವನಹಳ್ಳಿ ಗ್ರಾಮಗಳಲ್ಲಿ ಹವಾಮಾನ ವೈಪರೀತ್ಯಕ್ಕೆ ಚೇತರಿಕೆಯುಕ್ತ ಕೃಷಿ ತಂತ್ರಜ್ಞಾನಗಳ ರಾಷ್ಟ್ರೀಯ ಆದ್ಯತಾ ಯೋಜನೆ ಮೂಲಕ ಕೃಷಿ ಪಶುಸಂಗೋಪನೆ ತೋಟಗಾರಿಕೆ ಇಲಾಖೆಗಳ ಯೋಜನೆಗಳನ್ನು ಈ ಕೃಷಿ ವಿಜ್ಞಾನ ಕೇಂದ್ರ ಮೂಲಕ ಅನುಷ್ಠಾನಗೊಳಿಸುತ್ತಿದೆ. 205 ಕುಟುಂಬಗಳು ವಾಸಿಸುವ ಈ ಗ್ರಾಮಗಳಲ್ಲಿ ಬಾಳೆ, ದಾಳಿಂಬೆ, ಅಡಿಕೆ, ಸೌತೆಕಾಯಿ, ಟೊಮೆಟೊ ಬೆಳೆ ಬೆಳೆಯುತ್ತಿದ್ದು ಈಗ ಕೆಲವು ರೈತರು ಆದಾಯ ದುಪ್ಪಟ್ಟು ಆಗಲು ಕಾರಣವಾಗಿದೆ.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿಂದ ಜೈವಿಕ ಇಂಧನ ಉತ್ಪಾದನೆ ಮತ್ತು ಪ್ರಾತ್ಯಕ್ಷಿಕೆ ಘಟಕದ ಮೂಲಕ ಹೊಂಗೆ ಜೈವಿಕ ಇಂಧನದ ಬೀಜಗಳಿಂದ ಎಣ್ಣೆ ತಗದು ಅದರಿಂದ ಜೈವಿಕ ಡೀಸೆಲ್ ತಯಾರಿಸಲಾಗುತ್ತಿದೆ. 2014ರಿಂದ ಆರಂಭಗೊಂಡ ಈ ಯೋಜನೆಯ ಮೂಲಕ ಇದುವರೆಗೆ 4,500 ಲೀಟರ್ ಬಯೋ ಡೀಸೆಲ್ ಉತ್ಪಾದಿಸುತ್ತಿದೆ. ಹೊಂಗೆ ಎಣ್ಣೆ ತಯಾರಿಸಿದ್ದೇವೆ ಉತ್ಪಾದಿಸಿದ ಶೇ.10ರಷ್ಟು ಜೈವಿಕ ಡೀಸೆಲ್ ಅನ್ನು ನಮ್ಮ ಕೇಂದ್ರದ ವಾಹನಗಳು ಹಾಗೂ ಕೃಷಿ ಲಾರಿ ಹಾಗೂ ಬಸ್ ಗಳಿಗೆ ಬಳಸಲಾಗಿದೆ. ಉಳಿದಿದ್ದನ್ನು ರೈತರ ತೆಗೆದುಕೊಂಡು ಹೋಗುತ್ತಾರೆ ಎಂದು ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞ ರಘುರಾಜ್ ಮಾಹಿತಿ ನೀಡಿದ್ದಾರೆ.

ಶನಿವಾರಕೊಮ್ಮೆ ಸಾವಯವ ಸಂತೆ:

ಸಾವಯುವ ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಲ್ಲಿನ ವಿದ್ಯಾನಗರದಲ್ಲಿರುವ ತರಳಬಾಳ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರತಿ ಶನಿವಾರ ಸಾವಯವ ಸಂತೆ ನಡೆಯುತ್ತಿದೆ.

2013 ರಿಂದಲೂ ಸಾವಯುವ ಪದ್ಧತಿಯಲ್ಲಿ ರೈತರು ಬೆಳೆದ ಹಣ್ಣು, ತರಕಾರಿ, ಅಕ್ಕಿ, ಸಿರಿಧಾನ್ಯ ಅವರೇ ತಯಾರಿಸಿದ ಬೆಲ್ಲ ಗಾಣದ ಎಣ್ಣೆಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಬೇರೆ ಕಡೆಯಿಂದಲೂ ರೈತರು ಇಲ್ಲಿಗೆ ಬಂದು ತಮ್ಮ ಉತ್ಕೃಷ್ಟ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡುವ ಮೂಲಕ ಪ್ರಯತ್ನಿಸಲಾಗುತ್ತಿದೆ.

ಕ್ಷೇತ್ರ ಭೇಟಿ ಪ್ರಾತ್ಯಕ್ಷಿಕೆ ಸೇರಿ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಶೇ. 65ರಷ್ಟು ರೈತರನ್ನು ನಾವು ತಲುಪಿದ್ದೇವೆ.  ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಾದ ರಾಗಿ,ನವಣೆ, ಶೇಂಗಾ ಜೋಳ ಈರುಳ್ಳಿಯ ಹೊಸ ತಳಿಗಳ ಪರಿಚಯವನ್ನು ಮಾಡಿಕೊಟ್ಟಿದ್ದೇವೆ. ಕೇಂದ್ರದಲ್ಲಿ ಒಬ್ಬರು ಮುಖ್ಯಸ್ಥರು ಹಿರಿಯ ವಿಜ್ಞಾನಿಗಳು, ಬೇಸಾಯ ಶಾಸ್ತ್ರ ತೋಟಗಾರಿಕೆ, ಪಶು ವಿಜ್ಞಾನ, ಮಣ್ಣು ವಿಜ್ಞಾನ, ಸಸ್ಯ ಸಂರಕ್ಷಣಾ ತಜ್ಞರು ಸೇರಿದಂತೆ ಕೃಷಿ ವಿಸ್ತರಣೆ ಗೃಹ ವಿಜ್ಞಾನಿಗಳು,  7-8 ವಿಜ್ಞಾನಿಗಳ ತಂಡವಿದೆ ಎಂದು ಅವರು ತಿಳಿಸಿದ್ದಾರೆ.

ಬಾಳೆಯಲ್ಲಿ ಹಾಗೂ ತರಕಾರಿ ಅಡಕೆಯಲ್ಲಿ ಅಂತರ ಬೆಳೆಯಾಗಿ ವೆಲ್ವೆಟ್ ಬೀನ್ಸ್ ಅನ್ನು ಪರಿಚಯಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಕೃಷಿ ವಿಜ್ಞಾನಿಗಳು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ರೋಗ ಕೀಟ ನಿರ್ವಹಣೆ ತರಬೇತಿ ನೀಡುತ್ತಿದ್ದಾರೆ ಎಂಬುದು ಅವರ ವಿವರಣೆ.

ಸೌಲಭ್ಯ:

ಮಣ್ಣು ಹಾಗೂ ನೀರು ಪರೀಕ್ಷಾ ಪ್ರಯೋಗಾಲಯ ಸಸ್ಯ ಚಿಕಿತ್ಸಾಲಯ ಮಾದರಿ ಹೈನುಗಾರಿಕಾ ಘಟಕ ,ಮೀನು ಮರಿ ಸಾಕಾಣಿಕೆ ಘಟಕ, ನರ್ಸರಿ ಮಿಶ್ರ ಹಣ್ಣುಗಳ ತಾಕು, ಅಧಿಕ ಸಾಂದ್ರದ ಮಾವು ಬೇಸಾಯ ಪದ್ಧತಿ, ಮಾವು ಹಾಗೂ ಹಲಸಿನ ವಿವಿಧ ತಳಿಗಳ ಘಟಕ. ಔಷದ ಹಾಗೂ ಸುಗಂಧದ ಸಸ್ಯಗಳ ಘಟಕ ಸೇರಿದಂತೆ ಹಲವು ಸೌಲಭ್ಯಗಳು ನಮ್ಮಲ್ಲಿವೆ.

ಪ್ರಶಸ್ತಿಗಳು : 

ಜಿಲ್ಲೆಯ ಉದ್ದಗಲಕ್ಕೆ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ನೀಡಿ ಅಭಿವೃದ್ಧಿ ಕಾರ್ಯಕ್ರಮ ಹಾಗೂ ನೂತನ ಮಾದರಿಯ ಕೃಷಿ ಮೇಳ ಮಣ್ಣು ಮತ್ತು ನೀರು ಪ್ರಯೋಗಾಲಯ, ಸಸ್ಯ ಚಿಕಿತ್ಸಾಲಯ ಚಟುವಟಿಕೆಯನ್ನು ಗಮನಿಸಿ ಐಸಿಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ 2018ನೆಯ ಸಾಲಿನ “ಪಂಡಿತ್ ದೀನ್ ದಯಾಳ್ ಉಪಾಧ್ಯಾಯ”  ರಾಷ್ಟ್ರೀಯ ಕೃಷಿ ವಿಜ್ಞಾನ ಪ್ರೋತ್ಸಾಹ ಪುರಸ್ಕಾರ ನೀಡಲಾಗಿದೆ. ಉತ್ತಮ ಕೆವಿ ಕೆ ಎಂಬ ಪ್ರಶಸ್ತಿಯು ಲಭಿಸಿದೆ.

ಸಿದ್ದನೂರು ಅಗಸನಕಟ್ಟೆ ಹಾಗೂ ಪವಾಡರಂಗವನಹಳ್ಳಿಗಳಲ್ಲಿ ಹವಾಮಾನ ವೈಪರೀತಕ್ಕೆ ಚೇತರಿಕೆಯುಕ್ತ ಕೃಷಿ ತಂತ್ರಜ್ಞಾನಗಳ ರಾಷ್ಟ್ರೀಯ ಆದ್ಯತಾ ಯೋಜನೆ (ನ್ಯಾಷನಲ್ ಇನ್ನೋವೇಶನ್ ಇನ್ ಕ್ಲೈಮೇಟ್ ರೆಸಿಲಿಯಂಟ್ ಅಗ್ರಿಕಲ್ಚರ್“ ಜಾರಿಗೊಳಿಸಿದ್ದಕ್ಕಾಗಿ ಬೆಸ್ಟ್ ಕೆವಿಕೆ ಪ್ರಶಸ್ತಿ ಬಂದಿದೆ. ಈ ಗ್ರಾಮಗಳಲ್ಲಿ ಜಲ ಸಾಮರ್ಥ್ಯ ವೃದ್ಧಿಸಿ 70ಕ್ಕೂ ಹೆಚ್ಚು ಕೃಷಿಹೊಂಡ  ನಿರ್ಮಾಣದ ಜೊತೆಗೆ ಆರು ಚೆಕ್-ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ.

2022 ರಲ್ಲಿ ಬಾಳೆ ಬೆಳೆಯಲ್ಲಿ ಗುಣಮಟ್ಟದ ತಂತ್ರಜ್ಞಾನಕ್ಕಾಗಿ ರಾಷ್ಟ್ರೀಯ ಬಾಳೆಯ ಸಂಶೋಧನಾ ಕೇಂದ್ರವು ಪ್ರಶಸ್ತಿ ನೀಡಿ ಗೌರವಿಸಿದೆ.