08-09-2023 07:54 AM
ಮಾನ್ಯರೆ, ಎಲ್ಲರಿಗೂ ವಂದನೆಗಳು.
ಹಿರಿಯ ಚೇತನ ಪೂಜ್ಯ ಗುರುಗಳ🙏ಶ್ರದ್ಧಾಂಜಲಿ ಕಾರ್ಯಕ್ರಮ ಎಲ್ಲಾ ಸಮಾಜದವರ ಶ್ರದ್ದಾ ಭಕ್ತಿಗಳಿಂದ ನಿರಂತರವಾಗಿ ಸಾಗುತ್ತಿರುವುದು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಗೆ ಹಿಡಿದ ಕನ್ನಡಿ.
ಈ ಸಮಾರಂಭದಲ್ಲಿ ಭಾಗವಹಿಸುವುದು ಹಾಗೂ ಶ್ರೀಗಳ🙏ಹಿತನುಡಿಗಳನ್ನು ಅಲಿಸಿ ನಂತರ ಪಾಲಿಸುವುದು ನಮ್ಮ ಸೌಭಾಗ್ಯವೇ ಸರಿ
.
1994 ರಲ್ಲಿ ನೆಡೆದ ಪ್ರಥಮ ಶ್ರದ್ಧಾಂಜಲಿಗೆ ಹೊನ್ನಾಳಿ ತಾಲೂಕ್ (ಈಗ ನ್ಯಾಮತಿ - ಹೊನ್ನಾಳಿ) ಯಿಂದ ಪ್ರಥಮ ಸಲ ಅಕ್ಕಿ ಸಮರ್ಪಣೆ ನಡೆಯಿತು. ಆ ವ್ಯವಸ್ತೆಯ ಉಸ್ತುವಾರಿಯನ್ನು ನಮ್ಮ ತಂದೆಯವರಾದ ದಿ. ಡಿ. ಜಿ. ಬಸವನಗೌಡರು🙏ವಹಿಸಿಕೊಂಡಿದ್ದರು. ಶ್ರದ್ಧಾಂಜಲಿ ಕಾರ್ಯಕ್ರಮದ ಶ್ರೀ ಗಳ ಸನ್ನಿದಾನದ ಪೂರ್ವಭಾವಿ ಸಭೆಗೆ ನಮ್ಮ ತಂದೆಯವರು ತಡವಾಗಿ ಹೋಗಿದ್ದರು.ಅಷ್ಟರಲ್ಲಿ ಮಠದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಿಸಲು ತೀರ್ಮಾನವಾಗಿತ್ತು. ಆಗ ನಮ್ಮ ತಂದೆಯವರು ಆ ತೀರ್ಮಾನಕ್ಕೆ ಒಪ್ಪದೇ , ಮಠದ ವತಿಯಿಂದ ಬೇಡ , ಭಕ್ತಾದಿಗಳ ಕಾಣಿಕೆಯ ದವಸ- ಧಾನ್ಯಗಳ ಮುಖೇನ ನೆಡೆಸಲು ಸ್ವಾಮೀಜಿಯವರ ಮನವೊಲಿಸಿ , ತಕ್ಷಣವೇ ಹೊನ್ನಾಳಿ ತಾಲೂಕಿನ ಭಕ್ತರು ಅಕ್ಕಿ ಸಮರ್ಪಣೆ ಮಾಡುತ್ತೇವೆ ಎಂದು ವಾಗ್ದಾನ ಮಾಡಿದರು.ನಂತರ ಚನ್ನಗಿರಿ ಭಕ್ತರು ಸಿಹಿ ಖಾದ್ಯ ತಿಪಟೂರಿನ ಭಕ್ತರು ತೆಂಗಿನಕಾಯಿ , ಬ್ಯಾಡಗಿ ಭಕ್ತರು ಮೆಣಸಿನಕಾಯಿ , ತರಕಾರಿ ಇನ್ನೊಬ್ಬರು, ಈ ರೀತಿ ಭಕ್ತರಿಂದಲೆ ಈಗಲೂ ನಡೆಯುತ್ತಿರುವ ಮಾದರಿ ಶ್ರದ್ಧಾಂಜಲಿ ಕಾರ್ಯಕ್ರಮ ಪ್ರಪಂಚದ ಎಲ್ಲಿಯೂ ಕಾಣಸಿಗದು.
ಈಗ್ಗೆ 5-6 ವರ್ಷಗಳ ಹಿಂದೆ ಅಕ್ಕಿ ಸಮರ್ಪಣೆ ಕಾರ್ಯಕ್ರಮಕ್ಕೆ ರಾಮೇಶ್ವರಕ್ಕೆ (ಹೊನ್ನಾಳಿ) ಆಗಮಿಸಿದ್ದ ಶ್ರೀ ಕೆ. ಆರ್. ಜಯದೇವಪ್ಪ ನವರು (ನಿಕಟಪೂರ್ವ ಅಧ್ಯಕ್ಷರು , ಸಾಧು ಸದ್ಧರ್ಮ ಸಮಾಜ) ಆಮಂತ್ರಣ ಪತ್ರಿಕೆ ನೋಡಿ , ಆ ಪತ್ರಿಕೆಯಲ್ಲಿ ಶ್ರೀ ಡಿ. ಜಿ. ಬಸವನಗೌಡರ ಹೆಸರು ಇಲ್ಲದಿರುವುದಕ್ಕೆ ಸಾರ್ವಜನಿಕವಾಗಿ , ಸಹಜವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಲದ ಯರಗನಾಳು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲೂ ಅವರ ಹೆಸರು ಕಾಣಿಸಿಲ್ಲ.
ನಮ್ಮ ವಿನಂತಿ ಏನೆಂದರೆ ಮುಂದಿನ ಸಲದಿಂದ ಅಕ್ಕಿ ಸಂತರ್ಪಣೆ ನೆಡೆಯುವ ಕಾರ್ಯಕ್ರಮಕ್ಕೆ ಮಠದ ವತಿಯಿಂದಲೇ ಗ್ರಾಮದ ಹಾಗೂ ತಾಲೂಕ್ ಸಾಧು ಸಮಾಜದ ಸದ್ಭಕರಿಗೆ , ಮರೆಯದೆ ನಮ್ಮ ಸಮಾಜದ ಹಿರಿಯರ ಕಾರ್ಯಗಳನ್ನು ಮರೆಯದೆ , ಸಂಬಂದಿಸಿದ ಎಲ್ಲ ತಾಲೂಕ್ ಸಮಿತಿಗಳಿಗೆ ಹಿರಿಯರನ್ನು ಕಡೆಗಣಿಸದೆ ಸೂಕ್ತ ಮನ್ನಣೆ ನೀಡಲು ಮನವಿ ಮಾಡಬೇಕೆಂದು ನಮ್ಮ ಕಳಕಳಿಯ ಮನವಿ.
ಶ್ರದ್ಧಾಂಜಲಿ 🌹🌹🌹 ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿ ಎಂದು ಆಶಿಸುವ 🙏🙏
ಡಾ. ಡಿ. ಬಿ. ಪ್ರಕಾಶ್ ಬಸವನಗೌಡ.
ಅರಿವಳಿಕೆ ವಿಭಾಗದ ಮುಖ್ಯಸ್ಥರು .
ಜ.ಜ.ಮು. ವೈಧ್ಯಕೀಯ ಸಂಸ್ಥೆ.
ದಾವಣಗೆರೆ.
ಡಾ . ಡಿ.ಬಿ. ಪ್ರಕಾಶ್ ಬಸವನಗೌಡ
ದಾವಣಗೆರೆ.