31ನೆಯ ಶ್ರದ್ಧಾಂಜಲಿಯ ದಾಸೋಹಕ್ಕೆ ಭಕ್ತಿ ಸಮರ್ಪಣೆ

  •  
  •  
  •  
  •  
  •    Views  

ಸಿರಿಗೆರೆ-ಸೆ.23 : ಸಿರಿಗೆರೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಎರಡು ಹಬ್ಬಗಳು ರಾಷ್ಟ್ರೀಯ ಹಬ್ಬಗಳಂತೆ ಸಂಪ್ರದಾಯ, ನಂಬಿಕೆ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸುವ ಹಬ್ಬಗಳಾಗಿವೆ. 31ನೆಯ ಶ್ರದ್ದಾಂಜಲಿಗೆ ಆಗಮಿಸಲಿರುವ ಭಕ್ತಾದಿಗಳಿಗೆ ಸುಸಜ್ಜಿತ ಆವರಣದಲ್ಲಿ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ.

ಲಿಂ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಶ್ರದ್ಧಾಂಜಲಿಯನ್ನು ಸ್ವಾತಂತ್ರ್ಯೋತ್ಸವಕ್ಕೆ ಹಾಗೂ ಭಾವೈಕ್ಯದ ತರಳಬಾಳು ಹುಣ್ಣಿಮೆಯನ್ನು ಗಣರಾಜ್ಯೋತ್ಸವಕ್ಕೆ ಹೋಲಿಸಬಹುದಾಗಿದೆ. ಗೌರಮ್ಮನಹಳ್ಳಿಯ ಭಕ್ತಾದಿಗಳು ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 31ನೆಯ ಶ್ರದ್ದಾಂಜಲಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ತರಕಾರಿಗಳ ಜತೆಗೆ ತನುಮನ-ಧನ ದಾಸೋಹ ಸಮಿತಿಗೆ ಅರ್ಪಿಸಿ ಭಾವೈಕ್ಯ ಮೆರೆದರು.

ದಾಸೋಹಕ್ಕೆ ಭದ್ರಾವತಿ, ಹೊನ್ನಾಳಿ-ನ್ಯಾಮತಿ, ಶಿವಮೊಗ್ಗ, ಭಕ್ತರು ಅಕ್ಕಿ ಹಾಗೂ ಚನ್ನಗಿರಿ ತುಮ್ಕೋಸ್ ಸಂಸ್ಥೆಯಿಂದ ಒಂದು ಲಕ್ಷ ಲಾಡು ಉಂಡೆಗಳನ್ನು ಸಮರ್ಪಣೆ ಮಾಡಿದ್ದಾರೆ.

ಶಿವಮೊಗ್ಗ ತಾಲ್ಲೂಕಿನಿಂದ 101ಕ್ಷಿಂಟಾಲ್ ಅಕ್ಕಿ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಿಂದ 101ಕ್ಷಿಂಟಾಲ್ ಅಕ್ಕಿ, ನ್ಯಾಮತಿ ತಾಲ್ಲೂಕು ಭಕ್ತಾದಿಗಳಿಂದ 101 ಕ್ಷಿಂಟಾಲ್‍ ಅಕ್ಕಿ

ಶಂಕರ್ ಬಿದರಿ ಅವರಿಂದ ದಾಸೋಹಕ್ಕೆ 310 ಕ್ಷಿಂಟಾಲ್ ಬೆಲ್ಲ ಸಮರ್ಪಣೆಯಾಗಿದೆ.

ದಾವಣಗೆರೆ ತಾಲ್ಲೂಕು ಮೆಳ್ಳೆಕಟ್ಟೆ ಭಕ್ತಾದಿಗಳಿಂದ 750ಕೆಜಿ ಅಡುಗೆ ಎಣ್ಣೆ, ಟೊಮೊಟೊ 20 ಬಾಕ್ಸ್ 

ಹಳೇಬೀಡು, ಮಾಯಗೊಂಡನಹಳ್ಳಿ ಬಸವೇಶ್ವರ ಬಳಗದಿಂದ ಟೊಮೊಟೊ 2250ಕೆಜಿ, ಎಲೆಕೋಸು 1260ಕೆಜಿ, ಈರುಳ್ಳಿ, ಮೆಣಸಿನಕಾಯಿ, ಬೀನ್ಸ್, ಎಲೆಕೋಸು, ಹಸಿಶುಂಠಿ, ಆಲೂಗಡ್ಡೆ, ತೊಂಡೆಕಾಯಿ, ನುಗ್ಗೆಕಾಯಿ, ಬದನೆ, ಸೌತೆಕಾಯಿ, ಕುಂಬಳ ಕಾಯಿ ಸಮರ್ಪಿಸಿದ್ದಾರೆ. 

ತಿಪಟೂರು ತಾಲ್ಲೋಕಿನ ಎಲ್ಲಾ ಗ್ರಾಮಗಳ ಗ್ರಾಮಸ್ಥರು, ತರಳಬಾಳು ಸದ್ಭಕ್ತ ಮಂಡಳಿ, ಗ್ರಾಮದ ಮುಖಂಡರುಗಳು ಸಾಧು ವೀರಶೈವ ಸಮಾಜ, ಶಾಲಾ, ಕಾಲೇಜಿನ ಆಡಳಿತ ಮಂಡಳಿ, 31ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ದಾಸೋಹ ಕಾರ್ಯಕ್ರಮಕ್ಕೆ ತನು-ಮನ-ಧನ ಹಾಗೂ 6000 ತೆಂಗಿನಕಾಯಿ, 28ಕ್ಷಿಂಟಾಲ್ ರಾಗಿ ಭಕ್ತಿಸಮರ್ಪಣೆ ಮಾಡಿದ್ದಾರೆ.

31ನೆಯ ಶ್ರದ್ದಾಂಜಲಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ತರಕಾರಿಗಳ ಜತೆಗೆ ತನುಮನ-ಧನ ದಾಸೋಹ ಸಮಿತಿಗೆ ಅರ್ಪಿಸಿ ಭಾವೈಕ್ಯ ಮೆರೆದ ಗೌರಮ್ಮನಹಳ್ಳಿಯ ಭಕ್ತಾದಿಗಳು