ಸಂವಿಧಾನ ಎಲ್ಲರಿಗೂ ಶಿಕ್ಷಣವನ್ನು ನೀಡುವ ಅವಕಾಶ ನೀಡಿದ್ದು ಇದರ ಸದುಪಯೋಗವಾಗಬೇಕು: ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಚಳ್ಳಕೆರೆ : ಡಿಡಿಪಿಐಗಳು ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಿದ್ದಾರೆ, ಬೆಂಗಳೂರು ಪವರ್ ಸೆಂಟರ್ ಆಗಿ, ಅಧಿಕಾರದ ಸೂತ್ರ ಹಿಡಿದುಕೊಳ್ಳಲಾಗಿದೆ. ಡಿಡಿಪಿಐಗಳು ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿ ಅಧಿಕಾರ ವಿಕೇಂದ್ರಿಕರಣ ಆಗಬೇಕಿದೆ. ಖಾಸಗಿ ಶಾಲೆಯವರು ಪ್ರತಿವರ್ಷ ನೀಡುವ ದಾಖಲೆಗಳನ್ನು ಮತ್ತೆ ಮತ್ತೆ ಕೇಳಿದರೆ ಸಂಗ್ರಹಿಸಲು ಆಗುತ್ತಿಲ್ಲ. ದಾಖಲೆ ಪಡೆಯುವ ಕೆಟ್ಟ ಪದ್ದತಿ ಬಿಟ್ಟು ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಬೇಕು. ನಮ್ಮ ಸಂಸ್ಥೆ ಶಾಲೆಗಳಲ್ಲಿ ಮೊಬೈಲ್ ಆ್ಯಪ್ ಬಳಸುತ್ತಿದ್ದು, ಈ ಯೋಜನೆ ಜಾರಿಗೊಳಿಸಿ ಎಂದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಚಿವರಿಗೆ ಹೇಳಿದರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಬುಧವಾರ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳಿಂದ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ, ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಾಲೆಗಳ ಮಕ್ಕಳಿಗೂ ಬಿಸಿಯೂಟ ಯೋಜನೆ ಜಾರಿ ಬಗ್ಗೆ ಸಿಎಂ ಬಳಿ ಚರ್ಚೆ ನಡೆಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಖಾಸಗಿ ಶಾಲೆ ಮಕ್ಕಳಿಗೆ ಬಿಸಿಯೂಟ ನೀಡಿದರೆ ಸರಕಾರಕ್ಕೆ ದೊಡ್ಡ ಆರ್ಥಿಕ ಹೊರೆಯಾಗಲಿದೆ. ಅನ್ನಭಾಗ್ಯ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯಗೆ ತುಂಬಾ ಆಸಕ್ತಿ ಇರುವುದರಿಂದ ಅವರ ಜತೆ ಚರ್ಚೆ ನಡೆಸುತ್ತೇನೆ ಎಂದರು. ಖಾಸಗಿ ಕಂಪನಿಗಳ ಸಿಎಸ್ಆರ್ (ಕಾರ್ಪೋರೇಟ್ ಸೋಷಿಯಲ್ ರೆಸ್ಪಾಲಿಬಿಟಿ) ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡುವ ಕುರಿತು ಸಿಎಂ, ಡಿಸಿಎಂ ಜತೆ ಸಭೆ ನಡೆದಿದೆ. ಸಿಎಸ್ ಆರ್ ಫಂಡ್ನಲ್ಲಿ 2500 ಕೋಟಿ ನಿಧಿ ನಿರೀಕ್ಷೆಯಿದ್ದು, ಈ ಪೈಕಿ ಇದುವರೆಗೆ 600 ಕೋಟಿ ಬಂದಿದೆ. ಇದನ್ನು ಬೇರೆ ಯೋಜನೆಗಳಿಗೆ ಬಳಸದೆ ಶಿಕ್ಷಣಕ್ಕೆ ವಿನಿಯೋಗ ಮಾಡುವ ತೀರ್ಮಾನ ಮಾಡಲಾಗಿದೆ. ಇತ್ತ 17ಸಾವಿರ ಶಾಲೆಗಳಲ್ಲಿ 25ರಂತೆ ಮಕ್ಕಳಿದ್ದಾರೆ. ಇನ್ನು ಕೆಲ ಕಡೆ 10 ಮಕ್ಕಳಿದ್ದು, ಒಬ್ಬರೇ ಶಿಕ್ಷಕರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೂರು ಬಾರಿ ಪರೀಕ್ಷೆ : ಮಕ್ಕಳು ಫೇಲ್ ಆದಲ್ಲಿ ಮುಂದಿನ ಒಂದು ವರ್ಷದಲ್ಲಿ ಓದಿನ ಆಸಕ್ತಿ ಉಳಿಯುವುದಿಲ್ಲ. ಈ ದೃಷ್ಟಿಯಿಂದ ಯಾರು ಫೇಲ್ ಆಗಬಾರದು ಪಾಸ್ ಆಗಬೇಕು ಎಂಬ ಉದ್ದೇಶದಿಂದ ವರ್ಷಕ್ಕೆ 3 ಬಾರಿ ಪರೀಕ್ಷೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. 3ನೇ ಬಾರಿ ಪರೀಕ್ಷೆ ಬರೆದ 1.20 ಲಕ್ಷ ಮಕ್ಕಳಲ್ಲಿ 42 ಸಾವಿರ ಮಕ್ಕಳು ಮಾತ್ರ ಪಾಸ್ ಆಗಿದ್ದಾರೆ ಎಂದು ತಿಳಿಸಿದರು.

ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮಾತನಾಡಿ, ವರ್ಷಕ್ಕೆ ಮೂರು ಪರೀಕ್ಷೆಗಳು ಅಗತ್ಯವಿಲ್ಲ. ಆದರೆ, ಕಠಿಣವಾಗಿರುವ ಗಣಿತ ವಿಷಯಕ್ಕೆ ವರ್ಷಕ್ಕೆ 2 ಬಾರಿ ಪರೀಕ್ಷೆ ನಡೆಸುವುದು ಉತ್ತಮ. ಇನ್ನು ನಮ್ಮ ರಾಜ್ಯ ಪಠ್ಯ ಪುಸ್ತಕಗಳು ಎನ್ ಸಿಆರ್ ಟಿಗೆ ಸಮನವಾಗಿದ್ದು, 1ರಿಂದ 4 ತರಗತಿಗಳ ಪಠ್ಯ ಪುಸ್ತಕ ಮಾತ್ರ ಪರೀಕ್ಷರಣೆ ಮಾಡಿದರೆ ಸಾಕು ಎಂದರು. ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ಸೈನ್ಸ್ಸಿಟಿಯಾಗುತ್ತಿರುವುದರಿಂದ ಸೈನ್ಸ್ ಪಾರ್ಕ್ ತೆರೆಯುವುದು ಉತ್ತಮ. ಇದಕ್ಕೆ ಕೇಂದ್ರ ಸರಕಾರದಿಂದ ಅನುದಾನ ಕೊಡಿಸಲಾಗುವುದು. ಸಿಎಸ್ ಆರ್ ನಿಧಿಯು ಬಳಕೆ ಮಾಡಿಕೊಳ್ಳಬಹುದು. ಇದಕ್ಕಾಗಿ 400 ಎಕರೆ ಜಾಗವು ಇದೆ ಎಂದು ಸಚಿವರಿಗೆ ಎಂಎಲ್ಸಿ ಕೆ.ಎಸ್.ನವೀನ್ ಸಲಹೆ ನೀಡಿದರು.

ಲೋಕೇಶ್ ತಾಳಿಕಟ್ಟೆರುಪ್ಪಾ ಸಂಘಟನೆ ರಾಜ್ಯಾಧ್ಯಕ್ಷ ಮಾತನಾಡಿ, ಕಳೆದ 30 ವರ್ಷದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನವಿಲ್ಲದೆ ದುಡಿಯುತ್ತಿದ್ದಾರೆ. ಹಾಗಾಗಿ ಸರಕಾರ ಅನುದಾನಕ್ಕೆ ಒಳಪಡಿಸಬೇಕು. ಎಲ್ಲ ಶಿಕ್ಷಕರು ಒಂದೇ ಸಮನಾಗಿ ಕಂಡು ಉತ್ತಮ ಶಿಕ್ಷಕ ಪ್ರಶಸ್ತಿಗೆ ಖಾಸಗಿ ಶಾಲೆಯನ್ನು ಆಯ್ಕೆ ಮಾಡಬೇಕು. ಸರಕಾರದ ಮಾನದಂಡ ಬದಲಾಗಬೇಕು. ಖಾಸಗಿ ಶಾಲೆ ಮಕ್ಕಳಿಗೆ ಬಿಸಿಯೂಟ ಯೋಜನೆ ಜಾರಿಗೊಳಿಸಿ. ಇನ್ನೂ ಕಠಿಣ ಆದೇಶಗಳಿಂದ ಶಾಲೆಗಳು ಮುಚ್ಚುತ್ತಿವೆ. ಅಗ್ನಿ ಸುರಕ್ಷತೆ ಆದೇಶದಿಂದ ಶಾಲೆಗಳನ್ನು ನಡೆಸಲು ಆಗುತ್ತಿಲ್ಲ.  

ವಿನಾಯಿತಿ ನೀಡಲು ಸಾಧ್ಯವಿಲ್ಲ :

ಶಾಲೆಗಳಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ವಿನಾಯಿತ್ತಿ ನೀಡಲು ಸಾಧ್ಯವಿಲ್ಲ. ಮಕ್ಕಳ ಜೀವದ ಸುರಕ್ಷತೆ ದೃಷ್ಠಿಯ ಪ್ರಶ್ನೆ ಬರುವ ಕಾರಣ ಕೆಲವೊಂದು ಸಡಿಲಿಕೆ ಕುರಿತು ಚಿಂತನೆ ನಡೆಸಲಾಗುವುದು ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ದಯನಂದ್ ಪ್ರಹ್ಲಾದ್ ಮಾತನಾಡಿದರು.ಡಿಡಿಪಿಐ ರವಿಶಂಕರ್ ರೆಡ್ಡಿ, ಬಿಇಒ ಸುರೇಶ್, ಅವರ್ ಸಂಘಟನೆಯ ಪ್ರಭಾಕರ್, ಸಂಘಟನೆಯ ರಾಜ್ಯಾಧ್ಯಕ್ಷ ಮಕ್ಕಣ್ಣನವರ್,ಖಾಸಗಿ ಶಾಲೆಗಳ ತಾಲೂಕು ಅಧ್ಯಕ್ಷ ಯಾದಲಗಟ್ಟಿ ಜಗನ್ನಾಥ್,ಕಸಾಪ ಜಿಲ್ಲಾಧ್ಯಕ್ಷ ಶಿವಸ್ವಾಮಿ ಹಾಗೂ ಶಾಸಗಿ ಇಲಾಖೆಗಳ ಪದಾಧಿಕಾರಿಗಳು ಇದ್ದರು.