ಶಾಂತಿ ಪ್ರಾಮಾಣಿಕ ಪ್ರವರ್ತಕರಿಗೆ ಜನ್ಮದಿನದ ಶುಭ ಗೌರವಗಳು

  •  
  •  
  •  
  •  
  •    Views  

ಬ್ರಿಟೀಷರ ಅಟ್ಟಹಾಸ ತಾರಕಕ್ಕೇರಿದಾಗ, ಭಾರತವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡಿಸಲು ಜನಿಸಿದ, ಭಾರತವನ್ನು ಅಂತರ್ಗತ ದೇಶವನ್ನಾಗಿಸಲು, ಸಾಮಾಜಿಕ ದುಷ್ಕೃತ್ಯಗಳನ್ನು ತೊಡೆದುಹಾಕಲು ಸತ್ಯ ಮತ್ತು ಅಹಿಂಸೆಯ ಸಿದ್ಧಾಂತದ ಶಾಂತಿ ಪ್ರವರ್ತಕರಾದ, ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು, ಅಸ್ಪೃಶ್ಯತೆಯ ವ್ಯವಸ್ಥೆಯನ್ನು ತೆಗೆದುಹಾಕಲು, ಮಹಿಳೆಯರ ಮತ್ತು ಭಾರತೀಯ ರೈತರ ಸ್ಥಿತಿಯನ್ನು ಹೆಚ್ಚಿಸಲು ಶ್ರಮಿಸಿದ ದಣಿವರಿಯದ ಕಠಿಣ ಪರಿಶ್ರಮಿ. ಅವರ ತತ್ವ ಆದರ್ಶಗಳು ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ಜಗತ್ತು ಅನುಸರಿಸುತ್ತಿರುವುದು ಶ್ಲಾಘನೀಯ.

"ಜೈ ಜವಾನ್ ಜೈ ಕಿಸಾನ್" ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಅಜಾತ ಶತ್ರು, ಪ್ರಾಮಾಣಿಕ ರಾಜಕಾರಣಿ, ದೇಶ ಕಂಡ ಅಪರೂಪದ ಪ್ರಧಾನಿ ಡಾ.ಲಾಲ್ ಬಹದ್ದೂರ್ ಶಾಸ್ತ್ರಿಯವರ ನಡೆ ನುಡಿಗಳು ಸ್ವಾರ್ಥ, ಸ್ವ ಹಿತಾಸಕ್ತಿ, ಅಕ್ರಮ ಸಂಪತ್ತು ಸಂಗ್ರಹದಂತಹ ಹಲವು ನಿಯಮ ಬಾಹಿರ ಕೃತ್ಯಗಳ ಅಪರಾದಕ್ಕೆ ಗುರಿಯಾಗಿರುವ ಇಂದಿನ ರಾಜಕಾರಣಿಗಳಿಗೆ ಮತ್ತು ಆಡಳಿತಗಾರರಿಗೆ ಜೀವಂತ ಸಾಕ್ಷಿಯಾಗಿವೆ.

ಪ್ರಜಾಪ್ರಭುತ್ವವು ಉತ್ಕೃಷ್ಟದ ದಾರಿಗೆ ಇವರೀರ್ವರ ಆದರ್ಶಗಳೇ ದಾರಿದೀಪ. ದೇಶ ಬೆಳಗಲು ತಮ್ಮನ್ನೇ ತಾವು ಅರ್ಪಿಸಿಕೊಂಡ ಈ ಮಹಾನ್ ಚೇತನಗಳನ್ನು ಅವರ ಜನ್ಮದಿನದಂದಾರು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.