05-11-2023 11:08 AM
೨೦೦೯ ರಿಂದಲೂ ದಾವಣಗೆರೆ ಅನುಭವಮಂಟಪ ಸ್ಟೇಟ್ ಮತ್ತು ಸಿ.ಬಿ.ಎಸ್.ಇ ಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸಲು ಅವಕಾಶ ಒದಗಿಸಿಕೊಟ್ಟಿರುವ ಪರಮಪೂಜ್ಯರ ಸಮ್ಮುಖದಲ್ಲಿ, ಸಾಹಿತ್ಯ ಲೋಕದ ದಿಗ್ಗಜರ ಮುಂದೆ ವಚನ ವಾಚನ ಮಾಡಲು ಅವಕಾಶ ದೊರೆತಿದ್ದು ನಮ್ಮ ಪೂರ್ವಜನ್ಮದ ಪುಣ್ಯ.
ವಚನ - 1
ಕಾಮ ಕ್ರೋಧಾದಿಗಳನು ಸುಟ್ಟು
ಕಾವಿ ಬಟ್ಟೆಯನು ತಾನು ತೊಟ್ಟು
ಕಾಲ ಜ್ಞಾನದ ವಿಭೂತಿಯ ಧರಿಸಿ
ಕಾಲನ ಜಯಿಸುವ ಮಾರ್ಗವ ಬೋಧಿಸಿ
ಭಕ್ತರ ಹೃದಯ ಸಿಂಹಾಸನವೇರಿ
ಭಕ್ತಿಯ ಪರಂಜ್ಯೋತಿಯನು ಬೆಳಗಿದಿರಿ
ಶ್ರೀ ತರಳಬಾಳು ಸದ್ಗುರುವೇ ಜಗದ
ತರಳರನು ಸನ್ಮಾರ್ಗದಲ್ಲಿ ಮುನ್ನಡೆಸಿದಿರಿ.
ವಚನ - 2
ಭಕ್ತರ ಹೃದಯ ಸಿಂಹಾಸನವೇರಿದ ಗುರುವೇ
ಜನರ ಮನೆಮನದಿ ಪೂಜಿಸುವ ಮಹಾಗುರುವೇ
ತರಳರ ಬಾಳನುದ್ದರಿಸಲು ಬಂದ ಜಗದ್ಗುರುವೇ
ಕಾಯಕ ಕಾಲ ಕಾಸಿನ ಮಹತ್ವ ಸಾರಿದ ಪ್ರಭುವೇ
ಶ್ರೀ ತರಳಬಾಳು ಸದ್ಗುರುವೇ ಶರಣು ಶರಣೆಂಬೆ.
ವಚನ - 3
ಮಾರ್ಜಾಲ ತನ್ನ ಮರಿಯನು
ಮಮತೆಯಿಂದ ರಕ್ಷಿಸುವಂತೆ
ಮರ್ಕಟದ ಮರಿಯು ತನ್ನಯ
ಮಾತೆಯನು ಆಶ್ರಯಿಸುವಂತೆ
ಮತ್ಸ್ಯದ ಮರಿಯು ತನ್ನಯ
ವಾತ್ಸಲ್ಯದ ತಾಯಿಯ ಸ್ಮರಿಸುವಂತೆ
ಶ್ರೀ ತರಳಬಾಳು ಸದ್ಗುರುವು ತನ್ನಯ
ಶಿಷ್ಯರ ತಪ್ಪು ಒಪ್ಪುಗಳನು ಪರಿಶೀಲಿಸಿ
ಮಾರ್ಜಾಲ, ಮರ್ಕಟ, ಮತ್ಸ್ಯಗಳ
ಕಿಶೋರ ನ್ಯಾಯದ ತರಹ ಪೊರೆಯುವರು.
ವಚನ - 4
ನಾನೆಂಬುದು ಹೋಗದೇ
ನೀನ್ಯಾರೆಂಬುದು ಅರಿಯದು
ನೀನೆಂಬುದು ಇರದೇ
ನಾನ್ಯಾರೆಂಬುದು ತಿಳಿಯದು
ನೀನು ನಾನೆಂಬುವುದೇ
ನಾನು ನಿನ್ನೊಳಗಿರಲು ಸಾಧ್ಯವು
ನಾನೆಂಬ ಅಹಂ ಅಳಿಸಲು
ನೀನು ನನ್ನೊಂದಿಗಿರು ನಿತ್ಯವು
ಎನ್ನ ಕಾಯೋ ತಂದೆ ನೀನಲ್ಲವೇ
ಶ್ರೀ ಶ್ರೀ ಶ್ರೀ ತರಳಬಾಳು ಸದ್ಗುರುವೇ.
ವಚನ - 5
ಭಕ್ತರ ಹೃದಯ ಸಾಮ್ರಾಜ್ಯದ ಮಹಾಪ್ರಭುವು
ಭವಜನ್ಮದ ಅಂಧಕಾರ ಕಳೆಯುವ ವಿಭುವು
ಸಿರಿಗೆರೆಯ ಸಿರಿಸಂಪದದ ಮಹಾಚೇತನವು
ಶ್ರೀ ತರಳಬಾಳು ಬೃಹನ್ಮಠ ಪೀಠದ ಜಗದ್ಗುರುವು.
ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ. 9591417815.
ಶಿವಮೂರ್ತಿ ಹೆಚ್
India