09-11-2023 07:38 PM
ದಿನಾಂಕ: ೦೯. ೧೧. ೨೦೨೩. ನಮ್ಮೆಲ್ಲರ ಹೆಮ್ಮೆಯ ಶ್ರೀ ತರಳಬಾಳು ಜಗದ್ಗುರು ಗಳವರು ಅಪ್ರತಿಮ ವಿಚಾರವಂತರೂ, ಮೇಧಾವಿಗಳೂ, ಸಮಾಜ ಸುಧಾರಕರೂ, ಪಂಚಭಾಷಾ ಪರಿಣಿತರೂ, ತಂತ್ರಾಂಶ ಜನಕರೂ, ಗಣಕಾಷ್ಠಾಧ್ಯಾಯಿ ಸೃಷ್ಟಿಕರ್ತರೂ, ಬಸವಾದಿ ಶರಣ ಸಾಹಿತ್ಯ ಪ್ರಚಾರಕರೂ, ೨೨ ಸಾವಿರ ವಚನಗಳ ಸಂಗ್ರಹಕಾರರೂ, ಶಿಸ್ತಿನ ಸಿಪಾಯಿ ಗಳೂ, ಸದ್ಧರ್ಮ ನ್ಯಾಯಪೀಠದ ಸಂಸ್ಥಾಪಕರೂ, ಪರಿಣಿತ ನ್ಯಾಯಾಧೀಶರೂ, ಸಾಂಸ್ಕೃತಿಕ ಸಂಘಟಕರೂ, ಜನಪದಸಿರಿ ಸಂಭ್ರಮದ ರೂವಾರಿಗಳೂ, ಕಾಯಕಯೋಗಿಗಳೂ, ರೈತರ ಬದುಕಿಗೆ ನೆಮ್ಮದಿ ತಂದವರೂ, ನೂರಾರು ಕೆರೆಗಳಿಗೆ ನೀರು ತುಂಬಿಸಿದ ಆಧುನಿಕ ಭಗೀರಥರೂ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶಾಕಿರಣವಾದವರೂ, ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ೧೧೦೮ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ೨೦ ನೆಯ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ೨೧ ನೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕಾಯಕ ನಿಷ್ಠೆ, ಕರ್ತವ್ಯಪ್ರಜ್ಞೆ, ತಾಳ್ಮೆಯ ಗುಣ, ನಿಸ್ವಾರ್ಥಸೇವಾ ಮನೋಭಾವ, ನುಡಿ ಜಾಣರೂ, ನಡೆಧೀರರಾಗಿ ರುವ ಪರಮ ಪೂಜ್ಯರು ದಿನಾಂಕ: ೧೦, ೧೧ ಮತ್ತು ೧೨ ನವೆಂಬರ್ ೨೦೨೩ ರ ಈ ೩ ದಿನಗಳ ಕಾಲ ೨೫ ಕೆರೆಗಳನ್ನು ವೀಕ್ಷಿಸಲು ದಯಮಾಡಿ ಸುತ್ತಿರುವುದು ನಾಡಿನ ಸದ್ಭಕ್ತರಿಗೆ ಅತ್ಯಂತ ಸಂತೋಷವಾಗಿದೆ. ಪೂಜ್ಯರು ತಮ್ಮ ಅವಧಿಯಲ್ಲಿ ಇನ್ನೂ ಸಾವಿರಾರು ಕೆರೆಗಳಿಗೆ ನೀರು ತುಂಬಿಸಿ, ರೈತರ ಮನೆ ಮತ್ತು ಮನವನ್ನು ಬೆಳಗಿಸಿ ಆಶೀರ್ವದಿಸಲೆಂದು ಪೂಜ್ಯರ ಅಡಿದಾವರೆಗಳಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ.
ಮಹಾಲಿಂಗಯ್ಯಮಾದಾಪುರ.
ಮಹಾಲಿಂಗಯ್ಯ ಮಾದಾಪುರ
ದಾವಣಗೆರೆ, ಮಾದಾಪುರ.