ಶ್ರೀ ತರಳಬಾಳು ಜಗದ್ಗುರುಗಳವರ ಮೂರನೇ ದಿನದ ತುಂಬಿದ ಕೆರೆ ಸಂಚಾರ ಸಂಪನ್ನ

  •  
  •  
  •  
  •  
  •    Views  

ದಿನಾಂಕ:12-11-2023

ಸ್ಥಳ: ಮುದ್ದಾಪುರ, ಯಳಗೋಡು, ಹುಲ್ಲೇಹಾಳು, ಹುಲ್ಲೇಹಾಳು ಗೊಲ್ಲರಹಟ್ಟಿ, ನೆಲ್ಲಿಕಟ್ಟೆ, ಅಡವಿಗೊಲ್ಲರಹಳ್ಳಿ.

ರೈತರ ನೆಮ್ಮದಿಗೆ ಕಾರಣವಾದ ಶ್ರೀಗುರುವಿಗೆ ಅನ್ನದಾತರ ಮನತುಂಬಿ ಭಕ್ತಿನಮನ ಸಲ್ಲಿಸಿದರು.

ರೈತನ ಮಂದಹಾಸದಲ್ಲಿಯೇ ತಪೋತೃಪ್ತಿಭಾವದ ದಿವ್ಯತೆ ಕಾಣುವ ಕರುನಾಡಿನ ಜಲಋಷಿ, ಸರ್ವಸಮಾಜಗಳ ಅಭಿವೃದ್ಧಿಯ ಸಂಕಲ್ಪಿಸಿ ಸಾಕ್ಷಿತ್ಕಾರಕ್ಕೆ ಶ್ರಮಿಸುವ ನಾಡಿನ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ನ್ಯಾಯಮುಖಿ ಕ್ಷೇತ್ರಗಳ ಮಹಾದಾಸೋಹಿ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಏಕಮಾತ್ರ ಕರುಣಾಧಾರತ್ವದಿ ಕೈಗೊಂಡ  ₹ 550 ಕೋಟಿ ಮೊತ್ತದ ಭರಮಸಾಗರ ಏತನೀರಾವರಿ ವ್ಯಾಪ್ತಿಯ 42 ಕೆರೆಗಳಿಗೆ ಯೋಜನೆಯು ಫಲಶೃತಿಯಾಗಿ ಗಂಗಾವತಾರಣವಾಗಿದೆ.

ಪೂಜ್ಯರ ಸಂಕಲ್ಪ ಶಕ್ತಿಯ ಆಶೀರ್ವಾದದಿಂದ ಇಂದು ಭರಮಸಾಗರ, ಚನ್ನಗಿರಿ,ಜಗಳೂರು, ಆಣೂರು-ಬುಢಪನಹಳ್ಳಿ, ಇಪ್ಪತ್ತಕ್ಕೂ ಹೆಚ್ಚು ಯೋಜನೆಗಳ  ನೂರಾರು ಕೆರೆಗಳು ತುಂಬಿ ಹರಿದು ರೈತರು, ಪಶು ಪಕ್ಷಿಗಳಿಗೆ ಅನ್ನ  ನೀರು ನೀಡುತ್ತಿವೆ. ಕಳೆದ ಮೂರು ದಿನಗಳಿಂದ ಶ್ರೀ ಜಗದ್ಗುರುಗಳವರು 25 ತುಂಬಿದ ಕೆರೆಗಳನ್ನು ತೀರ್ಥಕ್ಷೇತ್ರಗಳಂತೆ ಪ್ರದಕ್ಷಿಣಾ ಸಂಚಾರ ಕೈಗೊಂಡಿದ್ದಾರೆ. ತುಂಬಿದ ಕೆರೆಗಳಿಗೆ  ಏರಿಗಳ ಭದ್ರವಾಗಿರುವುದನ್ನು ಪರಿಶೀಲಿಸಿ ಚಿಕ್ಕ ಚಿಕ್ಕ ಏರಿಗಳಿದ್ದರೆ ಅವುಗಳನ್ನು ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲು ಅಧಿಕಾರಿ ವರ್ಗದವರಿಗೆ ಜನಪ್ರತಿನಿಧಿಗಳಿಗೆ ಸೂಚಿಸುತ್ತಿದ್ದಾರೆ.

ಇಂದು ಶ್ರೀ ಜಗದ್ಗುರುಗಳವರ ಮೂರನೇ ದಿನದ ಕೆರೆಪ್ರವಾಸ ಕಾರ್ಯಕ್ರಮ ಮುದ್ದಾಪುರ, ಯಳಗೋಡು, ಹುಲ್ಲೇಹಾಳು, ಹುಲ್ಲೇಹಾಳು ಗೊಲ್ಲರಹಟ್ಟಿ, ನೆಲ್ಲಿಕಟ್ಟೆ, ಅಡವಿಗೊಲ್ಲರಹಳ್ಳಿ ಕೆರೆಗಳನ್ನು  ವೀಕ್ಷಿಸಿ, ಗಂಗಾವತರಣದ ಕೆರೆಗಳಿಗೆ ಬಾಗೀನ ಸಮರ್ಪಿಸಿದರು. ಶ್ರೀ ಜಗದ್ಗುರುಗಳವರನ್ನು  ಸಾವಿರಾರು ರೈತರು ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿ, ಅನ್ನದಾತರಿಗೆ ಜಲಭಾಗ್ಯ ಕರುಣಿಸಿದ ಪ್ರತ್ಯಕ್ಷ ದೇವರೇಂದು ಕೃತಜ್ಞತೆಗಳನ್ನು ಸಲ್ಲಿಸಿದರು.