ಬಹದ್ದೂರ್‌ಘಟ್ಟ ತರಳಬಾಳು ನರ್ಸರಿ ಶಾಲೆ ಹಾಗೂ ಶ್ರೀಮತಿ ಕಲ್ಲಮ್ಮ ಪ್ರೌಢಶಾಲೆಗಳ ನೂತನ ಕಟ್ಟಡ ಉದ್ಘಾಟನೆಯನ್ನು ತರಳಬಾಳು ಶ್ರೀಗಳವರು ನೆರವೇರಿಸಿದರು.

  •  
  •  
  •  
  •  
  •    Views  

ವಿದ್ಯಾರ್ಥಿಗಳು ಸ್ಥಳೀಯವಾಗಿ ಶಿಕ್ಷಣ ಪಡೆಯಲು ಶ್ರೀಸಂಸ್ಥೆಯ ಶಾಲೆಗಳು ಪೂರಕ - ತರಳಬಾಳು ಶ್ರೀ.

ಭರಮಸಾಗರ ಸಮೀಪದ ಬಹದ್ದೂರ್‌ಘಟ್ಟ ಗ್ರಾಮದಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ತರಳಬಾಳು ನರ್ಸರಿ ಮತ್ತು ಪ್ರಾಥಮಿಕ ಶಾಲೆ ಹಾಗೂ ಶ್ರೀಮತಿ ಕಲ್ಲಮ್ಮ ಪ್ರೌಢಶಾಲೆಗಳ ನೂತನ ಕಟ್ಟಡಗಳ ಉದ್ಘಾಟನೆಯನ್ನು ತರಳಬಾಳು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಶನಿವಾರ ಉದ್ಘಾಟಿಸಿದರು.

ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿರುವ ಶಾಲಾ ಕಾಲೇಜುಗಳ ಆಡಳಿತದಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ. ಅದಕ್ಕಾಗಿ ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದ್ದು ಅದಕ್ಕಾಗಿ  ಮೊಬೈಲ್ ಆಪ್ ಸಿದ್ದಪಡಿಸಿ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸಲಾಗುತ್ತಿದೆ. ಆಡಳಿತಕ್ಕೆ ಇದು ಸುಗಮದಾರಿ ಆಗಿದೆ. ನಮ್ಮ ಮಠದಿಂದ ವಿದ್ಯಾರ್ಥಿಗಳ ಕಲಿಕೆಗೆ ಗ್ರಾಮೀಣ ಭಾಗಗಲ್ಲಿ ಹೆಚ್ಚಿನ ಶಾಲೆಗಳನ್ನು ಆರಂಭಿಸಿದ್ದು, ವಿದ್ಯಾರ್ಥಿಗಳು ಸ್ಥಳೀಯವಾಗಿ ಶಿಕ್ಷಣ ಪಡೆಯಲು ಅನುಕೂಲವಾಗುತ್ತಿದೆ ಎಂದು  ಶ್ರೀಗಳು ಹೇಳಿದರು. 

ಹೊಸ ಶಾಲಾ ಕಟ್ಟಡಕ್ಕೆ ಹೊಂದಿಕೊAಡAತೆ ಮಕ್ಕಳಿಗೆ ಅಗತ್ಯವಾಗಿರುವ ಶೌಚಾಲಯಗಳನ್ನು ನಿರ್ಮಿಸಲಾಗುವೆಂದು ಶ್ರೀಗಳು ಹೇಳಿದರು. ಶ್ರೀಗಳನ್ನು ಶಾಲಾ ಮಕ್ಕಳು ಪೂರ್ಣಕುಂಭದೊಡನೆ ಹೂಹಾಸಿನ ಸ್ವಾಗತ ಮಾಡಿದರು.  

ಕಾರ್ಯಕ್ರಮದಲ್ಲಿ ಸ್ಥಳೀಯ ಸಹಲ ಸಮಿತಿಯ ಅಧ್ಯಕ್ಷರಾದ ಕೆ.ಜಿ.ವಿರುಪಾಕ್ಷಪ್ಪ, ಬಸವರಾಜಪ್ಪ, ಉಪಾಧ್ಯಕ್ಷರಾದ ಎಚ್.ಎಸ್. ನಾಗರಾಜಪ್ಪ, ಸದಸ್ಯರಾದ ಆನಂದಪ್ಪ, ಕೋಗುಂಡೆ ಮಂಜಣ್ಣ, ಜಯಣ್ಣ, ವಿಶ್ವನಾಥ್, ಶಿವಕುಮಾರ್, ಚಂದ್ರಶೇಖರ್, ಕಲ್ಲೇಶಪ್ಪ, ಮುಖ್ಯ ಶಿಕ್ಷಕರಾದ ಈ.ತಿಪ್ಪಣ್ಣ, ಎಸ್.ಎಂ.ಸುನೀಲ್ ಕುಮಾರ್, ಮುಖಂಡರಾದ ಡಿ.ವಿ.ಎಸ್.ಶರಣ್ಣಪ್ಪ, ಚಿಕ್ಕಬೆನ್ನೂರು ತೀರ್ಥಪ್ಪ, ಚೌಲಿಹಳ್ಳಿ ಶಶಿಪಾಟೀಲ್, ಶಿಕ್ಷಕರಾದ ಸಿದ್ದೇಶ್, ಪುಷ್ಪಾವತಿ, ಗೀತಾ, ಪಾರ್ವತಿ, ಗುರುಸಿದ್ದಮ್ಮ, ಶೃತಿ, ಮೇಘನಾ, ಸುನಿಲ್, ಲಕ್ಷ್ಮಿ, ಗುರುಸಿದ್ಧಮ್ಮ, ಶೃತಿ, ಶಿವಶಂಕರ್, ಗ್ರಾಮಸ್ಥರು, ಪೋಷಕರು ಇದ್ದರು.