ಪೂಜಿಸುವ ವಿಗ್ರಹ ಯಾವುದೇ ಇರಲಿ ಭಕ್ತಿ ಮುಖ್ಯ - ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ದಿನಾಂಕ: 17-12-2023
ಸ್ಥಳ: ಬಾವಿಹಾಳ್, ಮಾಯಕೊಂಡ.

-------------------------------- 

ಯಾವುದು ನಮ್ಮ ಬದುಕಿನ ದಾರಿಗೆ ಬೆಳಕಾಗಿ ನಮ್ಮ ಗುರಿಯನ್ನು ಮುಟ್ಟಲು ಸಹಕಾರಿಯಾಗುತ್ತದೆ ಎಂಬ ನಂಬಿಕೆ ಇರುತ್ತದೆಯೋ ಅದೇ ದೈವ.

ತನ್ನ ಬದುಕಿನ ಉದ್ಧಾರದಂತೆಯೇ ಇನ್ನೊಬ್ಬರ ಬದುಕಿನ ಬಗ್ಗೆಯೂ ಕಾಳಜಿ ಹೊಂದುವುದು ಧರ್ಮ. ನಮ್ಮ ಬದುಕಿನ ನಿಯಂತ್ರಣಕ್ಕೆ ಧರ್ಮದ ಅಗತ್ಯವಿದೆ. ಧರ್ಮದ ಹಿಂದೆ ದೈವ, ದೇವರ ಬಗ್ಗೆ ನಂಬಿಕೆ ಇರಬೇಕು. ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಬಾವಿಹಾಳ್ ಗ್ರಾಮದಲ್ಲಿ ಶ್ರೀ ಕರಿಯಮ್ಮದೇವಿ ನೂತನ ದೇವಸ್ಥಾನದ ಲೋಕಾರ್ಪಣೆ, ಕಳಸಾರೋಹಣ ಮತ್ತು ಕುಂಭಮೇಳ ಕಾರ್ಯಕ್ರಮವನ್ನು ಸಾವಿರಾರು ಭಕ್ತರ ಅಪೇಕ್ಷೆಯಂತೆ  ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು  ಸಾನ್ನಿಧ್ಯವಹಿಸಿ, ಉದ್ಘಾಟಿಸಿ ಆಶೀರ್ವಚನ ಕರುಣಿಸಿದರು

ಪೂಜ್ಯ ಶ್ರೀ ಜಗದ್ಗುರುಗಳವರನ್ನು ಬಾವಿಹಾಳ್ ಮತ್ತು ಅಕ್ಕ ಪಕ್ಕದ ಗ್ರಾಮಗಳ ಭಕ್ತರು ಅತ್ಯಂತ  ಭಕ್ತಿ ಸಂಭ್ರಮದಿಂದ ಸ್ವಾಗತಿಸಿದರು. ಪೂಜ್ಯರ ಆಗಮನದ ದಾರಿ ಉದ್ದಕ್ಕೂ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಡೊಳ್ಳುಕುಣಿತ, ಮಹಿಳೆಯರ ಭಜನೆ ಪದಗಳು ಹಾಗೂ ಕುಂಭ ಹೊತ್ತ ಮಹಿಳೆಯರು ಸಾಗಿದರು.

ಕಾರ್ಯಕ್ರಮದಲ್ಲಿ  ದಾವಣಗೆರೆ ಲೋಕಸಭಾ ಸದಸ್ಯರು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ ಡಾ. ಜಿ. ಎಂ. ಸಿದ್ದೇಶ್ವರ್, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ. ಎಸ್. ಬಸವಂತಪ್ಪ, ಮಾಜಿ ಶಾಸಕರಾದ ಶ್ರೀ ಪ್ರೊ. ಲಿಂಗಣ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕಲ್ಲೇಶಪ್ಪ, ಶ್ರೀ ಮತಿ ಮೀನಾಕ್ಷಮ್ಮ, ಶ್ರೀಮತಿ ಅಕ್ಕಮ್ಮ, ಹಾಗೂ ಗ್ರಾಮದ ಮುಖಂಡರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.