26-12-2023 01:21 PM
ಇದು ನಮ್ಮ ತರಳುಬಾಳು ಮೂಲ ಪುರುಷ ತೆಲುಗು ಬಾಳುಸಿದ್ದೇಶ್ವರ ಪುಣ್ಯಕ್ಷೇತ್ರ, ಈ ಸ್ಥಳವು ಕೂಡ್ಲಿಗಿ ದಾಟಿ ಎನ್ ಹೆಚ್ 50 ರಸ್ತೆಯಲ್ಲಿರು ತಿಮ್ಮಲಾಪುರ ಟೋಲ್ ಪ್ಲಾಜದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಸ್ಥಳ, ಇಲ್ಲಿ ಶ್ರೀ ಮಠದ ಸುಮಾರು 40 ಎಕರೆ ಜಮೀನು ಇದ್ದು ಇದರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಶ್ರೀ ಮಠದ ಪ್ರೌಡ ಶಾಲೆ ಇದೆ, ಹಾಗೂ ವಸತಿ ನಿಲಯವಿದ್ದು ಈ ಶಾಲೆಯಲ್ಲಿ ಸುಮಾರು 170 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಇಲ್ಲಿ ಸುಸಜ್ಜಿತ ಕಟ್ಟಡಗಳು ಇದ್ದು, ಶ್ರೀಮಠದ ಶಾಲಾ ಕಟ್ಟಡಗಳಲ್ಲಿ ಕೆಲವು ಕಟ್ಟಡಗಳಿ ದುರಸ್ತಿಯಲ್ಲಿರುತ್ತವೆ, ಈ ಭಾಗದಲ್ಲಿ ನಮ್ಮ ಸಮಾಜದ ಜನಾಂಗದವರು ಕಡಿಮೆ ಪ್ರಮಾಣದಲ್ಲಿ ಇದ್ದು, ಆದರು ಸಹ ಈ ಹಿಂದೆ ಶಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇತ್ತಿಚಿನ ಪ್ರಮಾಣದಲ್ಲಿ ವ್ಯಾಸಂಗ ಮಾಡುವವರ ಸಂಖ್ಯೆ ಕುಂಟಿತಗೊಳ್ಳುತ್ತಿದೆ. ಅದ್ದರಿಂದ ನನ್ನೊದೊಂದು ಮನವಿ ಇಲ್ಲಿರುವ ಶಾಲಾ ಕಟ್ಟಗಳು, ವಸತಿ ನಿಲಯ, ಗ್ರೌಂಡ್ ಹಾಗೂ ಮೂಲ ಪುರುಷ ತೆಲುಗುಬಾಳು ಸಿದ್ದೇಶ್ವರ ದೇವಸ್ಥಾನ ವನ್ನು ಈ ಕ್ಷೇತ್ರದ ರಾಜಕಾರಣಿಯೊಂದಿಗೆ ಸಮಾಲೋಚನೆ ಮಾಡಿ ಅಭಿವೃದ್ಧಿ ಮಾಡಿದರೆ ಈ ಬಾಗದ ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ವ್ಯಾಸಂಗ ಮಾಡಲು ಸಹಕಾರಿಯಾಗುತ್ತೆ ಅಂತಾ ನನ್ನದೊಂದು ಕೋರಿಕೆ
Sandeepa m
Toolahalli