ವಿದೇಶಿ ಶಿಕ್ಷಣದ ಬಗ್ಗೆ ಅನಿವಾಸಿ ಭಾರತೀಯರು ಸಿರಿಗೆರೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು
ಸಿರಿಗೆರೆ
ದಿನಾಂಕ : 9.1.2024
ಶ್ರೀಮತಿ ವಿಜಯಲಕ್ಷ್ಮೀ ಕೊಟೂರ್ ಮಾತನಾಡಿ, ಸ್ವಾಮೀಜಿ ಮತ್ತು ಆ ಕುಟುಂಬದ ಒಡನಾಟವು ಸುದೀರ್ಘ 40 ವರ್ಷಗಳದ್ದು ಎಂದು ತಿಳಿಸಿದರು. ಕಳೆದ 45 ವರ್ಷಗಳಿಂದ ಇಂಗ್ಲೆಂಡಿನಲ್ಲಿ ಕಾನೂನು ಸಲಹೆಗಾರರಾಗಿ ವಾಸಿಸುತ್ತಿರುವ ಅವರು ಇಂದಿಗೂ ವೀರಶೈವ ಧರ್ಮ ಪಾಲನೆ ಮಾಡುವುದರ ಜೊತೆಗೆ ಇಂಗ್ಲೆಂಡಿನ ವೀರಶೈವ ಮಹಾಸಭಾದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಅನಿವಾಸಿ ಭಾರತೀಯರು.
ಪೂಜ್ಯ ಶ್ರೀಗಳು ಆ ಕುಟುಂಬಕ್ಕೆ ಮತ್ತು ಅವರ ಮಕ್ಕಳಿಗೆ ಲಿಂಗದೀಕ್ಷೆ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಮಕ್ಕಳೊಂದಿಗೆ ಸುದೀರ್ಘ ಸಂವಾದ ನಡೆಸಿದ ಇವರು ಪಠ್ಯಕ್ಕಿಂತ ಪಠ್ಯೇತರ ಚಟುವಟಿಕಗಳಲ್ಲಿ ಹೆಚ್ಚಿನ ಜ್ಞಾನ ಅಡಗಿದೆ ಮತ್ತು ವಿದೇಶಿ ಶಿಕ್ಷಣ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳನ್ನು ಕುರಿತು ಚರ್ಚಿಸಿದರು.
ಶಿಕಾಗೋದಲ್ಲಿ ನೆಲಿಸಿರುವ ಶ್ರೀಯುತ ಶಿವಕುಮಾರ್ ಮಾತನಾಡಿ ತಮ್ಮ ಮತ್ತು ಗುರುಗಳು ಒಡನಾಟದ ಬಗ್ಗೆ ಮಾತನಾಡಿದರು. ಪೂಜ್ಯ ಶ್ರೀಗಳು ಹವಾಯ್ ದ್ವೀಪಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ತಮ್ಮ ಕವನಕ್ಕೆ ಗುರುಗಳು ರೂಪಾಂತರ ಮಾಡಿ ಅದಕ್ಕೊಂದು ಹೊಸ ಅರ್ಥ ಕಲ್ಪಿಸಿದರು ಎಂದು ಗುರುಗಳ ಕಾವ್ಯ ಪ್ರೌಢಿಮೆಯನ್ನು ಕೊಂಡಾಡಿದರು.
ಶ್ರೀಗಳು ತಮ್ಮ ಹಾಗೂ ವಿದೇಶಿ ಭಾರತೀಯರ ನಡುವಿನ ಗುರು ಶಿಷ್ಯರ ಸಂಬಂಧವನ್ನು ಮನಸಾರೆ ಶ್ಲಾಘಿಸಿದರು. ಅವರ ಕುಟುಂಬದ ಸದಸ್ಯರ ಸಾಧನೆಗಳನ್ನು ಅವಲೋಕಿಸಿದ ಶ್ರೀಗಳು ಪಾಣಿನಿಯ ಸೂತ್ರವೊಂದಕ್ಕೆ ಸಂಬಂಧಿಸಿದಂತೆ ಮುಕ್ತ ಚರ್ಚೆ ನಡೆಸಿದರು. ಹಾಗೆಯೇ ಮಕ್ಕಳು ಪಠ್ಯದ ಜೊತೆಗೆ ಕ್ರೀಡಾ ಮನೋಭಾವವನ್ನು ಬೆಳಿಸಿಕೊಳ್ಳಬೇಕೆಂದು ಅರಿವು ಮೂಡಿಸಿದರು ಹಾಗೂ ವಿದ್ಯಾರ್ಥಿಗಳು ಮತ್ತು ವಿದೇಶಿಯರಿಗೆ ಜ್ಞಾನದ ಸುಧೆ ಹರಿಸಿದರು. ಈ ಕಾರ್ಯಕ್ರಮದಲ್ಲಿ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಮತ್ತು ಎಂ.ಬಸವಯ್ಯ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನೌಕರರು ಭಾಗವಹಿದ್ದರು.