ಭಾರತೀಯ ಸಾಮ್ರಾಜ್ಯ ಉಳಿಸುವ ಕೆಲಸ ಮಾಡಿ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ದಿನಾಂಕ: 13-01-2024

ಸ್ಥಳ: ಚಿಕ್ಕಬಾಸೂರು, ಬ್ಯಾಡಗಿ ತಾಲ್ಲೂಕು.

ಹಾವೇರಿ ಜಿಲ್ಲೆ, ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರಿನಲ್ಲಿ ನಡೆಯುತ್ತಿರುವ ಶ್ರೀ ಗುರು ಶಿವಯೋಗಿ ಸಿದ್ಧರಾಮೇಶ್ವರರ 851 ನೇ ಜಯಂತಿ ಮಹೋತ್ಸವದ ಉದ್ಘಾಟನೆ ಹಾಗೂ ಲೇಖಕ ಮಂಜಯ್ಯ ಜೆ. ದೇವರಮನೆ ರಚಿತ “ಬಿಟ್ಟು ಬಂದಳ್ಳಿಯ ಕಥೆಗಳು” ಕೃತಿ ಲೋಕಾರ್ಪಣೆ ಕಾರ್ಯಕ್ರಮವು  ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.

ಬಸವಾದಿ ಶರಣರೆಲ್ಲರೂ ವಾಸ್ತವ ಜಗತ್ತಿನ ಮನುಷ್ಯ ಸಂಬಂಧಗಳ ಪ್ರೇರಣೆ ನೀಡಿದರೆ, ಗುರು ಸಿದ್ದರಾಮೇಶ್ವರರು ವಚನ ಸಾಹಿತ್ಯದ ಜೊತೆಗೆ ಸ್ವತಃ ಶಿವನ ದರ್ಶನ ಮಾಡಿ, ಪವಾಡ ಪುರುಷರಾಗಿ “ಮನುಷ್ಯ ಧರ್ಮ ದೇವರಿಗೆ ಪ್ರಿಯವಾದ ಧರ್ಮ” ಎಂದು ಜಗತ್ತಿಗೆ ಸಾರಿದವರು ಅವರ ತಪಸ್ವೀ ಜೀವನವನ್ನು ಶ್ರೀ ಜಗದ್ಗುರುಗಳವರು ಆಶೀರ್ವಚನದಲ್ಲಿ ಸ್ಮರಿಸಿದರು.

ವೃಷಭಪುರಿ ಮಹಾ ಸಂಸ್ಥಾನದ ಪರಮಪೂಜ್ಯ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ನಡೆದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕೆರೆಗೋಡಿ  ರಂಗಾಪುರದ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುಪರದೇಶಿ ಕೇಂದ್ರ ಮಹಾಸ್ವಾಮಿಗಳವರು, ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಫನವರು, ಶ್ರೀ ಬಸವರಾಜ ಬೊಮ್ಮಾಯಿರವರು, ಮಾಜಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ, ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಆರ್.ಪಾಟೀಲ್, ಮಾಜಿ ಸಚಿವರಾದ ಶ್ರೀ ಎಂ.ಪಿ.ರೇಣುಕಾಚಾರ್ಯ , ಡಾ.ಸಂದೀಪ್ ಪಾಟೀಲ್, ವಿವಿಧ ಮಠಗಳ ಪರಮಪೂಜ್ಯರು, ಸಮಾಜದ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.