10-02-2024 03:44 PM
ಪ್ರತಿಕ್ರಿಯಿಸಿರುವ ವಿಜಯ್ ಸುರಗೀಹಳ್ಳಿ ಶಿಕಾರಿಪುರ ಇವರ ಗಮನಕ್ಕೆ...
ತಾವು ಅಡ್ಡಪಲ್ಲಕ್ಕಿ ಉತ್ಸವದ ಬಗ್ಗೆ ಪ್ರತಿಕ್ರಿಯಿಸಿರುವ ಮೊದಲು
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸರ್ವ ಜನಾಧರಣೆಯ ಕಾರ್ಯಕ್ರಮವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಎಂದೂ ಪಾಲ್ಗೊಂಡಿಲ್ಲ ಎಂದು ಮನವರಿಕೆಯಾಯಿತು.
ಕಳೆದ 7 ದಶಕಗಳಿಂದ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನ ನಡೆಯುವ ಅಡ್ಡಪಲ್ಲಕ್ಕಿ ಉತ್ಸವವು ಮನುಷ್ಯರ ಹೆಗಲ ಮೇಲೆ ಪಲ್ಲಕ್ಕಿ ಹೊತ್ತು ಸಾಗುವ ಕಾರ್ಯಕ್ರಮವಾಗಿರುವುದಿಲ್ಲ.
ವಾಸ್ತವವಾಗಿ ಶ್ರೀ ಜಗದ್ಗುರುಗಳವರು ನಮಗೆ ಪಲ್ಲಕ್ಕಿ ಉತ್ಸವ ಬೇಡ ಎಂದು ನಿರಾಕರಿಸಿದರು
ಭಕ್ತರ ಅಪೇಕ್ಷೆ, ಒತ್ತಡಕ್ಕೆ ಅನಿವಾರ್ಯವಾಗಿ ಸಮ್ಮತಿಸಬೇಕಾದ ಸಂದರ್ಭಗಳು ಬಂದಿವೆ.
ಪ್ರಸ್ತುತ ಶ್ರೀ ಜಗದ್ಗುರುಗಳವರಾದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಾಗಲಿ, ಹಿರಿಯ ಜಗದ್ಗುರುಗಳವಾರದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಾಗಲಿ ಎಂದೂ ಮನುಷ್ಯರ ಹೆಗಲ ಮೇಲೆ ಹೊತ್ತ್ತೊಯ್ಯುವ ಪಲ್ಲಕ್ಕಿಯಲ್ಲಿ ಕೂತಿರುವುದಿಲ್ಲ.ಚಲಿಸುವ ಟ್ರಾಕ್ಟರ್ ಮತ್ತಿತರ
ತೆರೆದ ವಾಹನದಲ್ಲಿ 2 ಗಂಟೆಗಳ ಕಾಲ ಮೀರದಂತೆ,ಮಠದ ಪರಂಪರೆಗನುಗುಣವಾಗಿ, ಭಕ್ತರ ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ವರ್ಷದಲ್ಲಿ ಒಮ್ಮೆ ಮಾತ್ರ ಪಲ್ಲಕ್ಕಿ ಉತ್ಸವಕ್ಕೆ ಸಮ್ಮತಿ ನೀಡಿದ್ದಾರೆ.
ಶ್ರೀ ಜಗದ್ಗುರುವರು ಕೆಲವೊಮ್ಮೆ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಇದೇ ಪಲ್ಲಕ್ಕಿ ಯಾತ್ರೆಯನ್ನು ಪಾದಯಾತ್ರೆಯನ್ನಾಗಿಸಿ, ಗುಜರಾತ್ ಭೂಕಂಪ, ಸುನಾಮಿ ಸಂತ್ರಸ್ತರಿಗೆ, ನೆರೆ ಸಂತ್ರಸ್ತರಿಗೆಮಠದಿಂದ ಕಾಣಿಕೆಯೊಂದಿಗೆ, ದೇಣಿಗೆ ಸಂಗ್ರಹಿಸಿ, ಸಂತ್ರಸ್ತರಿಗೆ ನೆರವು ನೀಡಿದ್ದಾರೆ .
ಭಕ್ತರ ಹೃದಯ ಸಿಂಹಾಸನಧೀಶರಾದ ಶ್ರೀ ಜಗದ್ಗುರುಗಳವರು ಪಲ್ಲಕ್ಕಿಯ ಮೇಲೆ ಆಸೀನರಾಗುವ ಸಂದರ್ಭವನ್ನು, ಮೊಮ್ಮಗನೊಬ್ಬ ತನ್ನ ಅಜ್ಜನ ಹೆಗಲ ಮೇಲೆ ಕೂತುಕೊಳ್ಳುವ ಭಾವದಲ್ಲಿ ಸ್ವೀಕರಿಸಿದ್ದಾರೆ.
ತಮ್ಮ ಪ್ರತಿಕ್ರಿಯೆಯು ಶರಣ ತತ್ವಗಳ ಒಳ ಹೂರಣವಾದ ವೈಚಾರಿಕ, ವೈಜ್ಞಾನಿಕ, ಧಾರ್ಮಿಕ ತತ್ವಗಳಿಂದ ದಿಕ್ಕು ತಪ್ಪಿಸುವ, ವಾರದಲ್ಲಿ ಮೂರು ದಿನ ಭಕ್ತರ ಹೆಗಲ ಮೇಲೆ ಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವ ಕಾವಿಧಾರಿಗಳಿಗೆ ಅನ್ವಯಿಸುತ್ತದೆ.
ಕೊನೆಯದಾಗಿ ತಾವು ಶರಣ ತತ್ವದ ಬಗ್ಗೆ ಹೇಳಿದ್ದೀರಿ...ಇಂದು ವಿಶ್ವದಾದ್ಯಂತ ಶರಣ ತತ್ವಗಳು ಪ್ರಸಾರವಾಗಲು ನಾಲ್ಕು ದಶಕಗಳ ಹಿಂದೆಯೇ ಕಂಪ್ಯೂಟರ್ ಕಣ್ಣು ಬಿಡುವ ಸಮಯದಲ್ಲಿಯೇ ಬಸವಾದಿ ಶರಣರ ವಚನಗಳನ್ನು ವಿಶ್ವಾದ್ಯಂತ ಅಂತರ್ಜಾಲದ ಮೂಲಕ ಪಸರಿಸಿದ ನಾಡಿನ ಪ್ರಥಮ ರಾಗಿದ್ದಾರೆ.
BASAVARAJ BANGLORE
BANGLORE