14-02-2024 03:01 PM
ಪರಮ ಪೂಜ್ಯ ಲಿಂಗೈಕ್ಯ ಮಲ್ಲಿಕಾರ್ಜುನ ಗಳವರಿಗೆ ಶ್ರದ್ಧಾಂಜಲಿ ಸಮರ್ಪಿಸುತ್ತೇನೆ.
ಕೊಪ್ಪಳ ಜಿಲ್ಲೆಯಿಂದ ಈ ಭಾಗದ ನಂದಿಬೇವೂರಿಗೆ ಬಂದ ಬಳಿಕ ಹಾಸ್ಟೆಲ್ಲಗೆ ದವಸಕ್ಕಾಗಿ ದಯಮಾಡಿಸಿದ್ದರು .ಅಂದೆ ಪ್ರಥಮ ದರ್ಶನಾರ್ಶೀವಾದ ಪಡೆದಿದ್ದು ,ಅಂದು ಗುರುಗಳು ದವಸಕ್ಕಾಗಿ ಭಕ್ತರಲ್ಲಿ ಮಾತನಾಡಿದ್ದು,ಕಾಲಾನುಸಾರವಾಗಿ ನನಗೆ ಜ್ಞಾಪಕಕ್ಕೆ
ಬಂದೆ ಬರುತ್ತಿದೆ. ನಾನು ಈ ಭಾಗಕ್ಕೆ ಮತ್ತು ಮಠದ ಬಗ್ಗೆ ತಿಳಿವಳಿಕೆ ಇದ್ದಿಲ್ಲ ( 45ವರ್ಷದ ಆಚೆ). ಗ್ರಾಮದಲ್ಲಿ ಓರಿಗೆಯ ರೈತಾಪಿ ಸ್ನೇಹಿತರು ,ಗುರುಗಳು ಕ್ರಷಿಯ ಬಗ್ಗೆ ಇದ್ದಶ್ರಮ,ಆಸಕ್ತಿ,ಹಾಸ್ಟೆಲ್ ಹುಡುಗರಲ್ಲಿ ರಜಾ ದಿವಸ ದಲ್ಲಿ ಅವರಿಂದ ಕೆಲಸ ಪಡೆದು ಕಾಯಕ ಶ್ರದ್ಧೆಯ ಬಗ್ಗೆ ತಿಳಿಸುವುದರ ಬಗ್ಗೆ, ಶ್ಲಾಘನೀಯ ಮಾತುಗಳನ್ನು ಮಾತಿನ ಮೂಲಕ ತಿಳಿದಿದ್ದೇನೆ. ಅವರ ನೆನಹು ಭಕ್ತ ರಲ್ಲಿ ಚಿರಕಾಲ ಉಳಿಯುವ ಕಾಯಕ ಜೀವಿಗಳಾದ ಪರಮ ಪೂಜ್ಯರಿಗೆ ನನ್ನ ಕುಟುಂಬ ವರ್ಗದಿಂದ ಶ್ರದ್ಧಾಂಜಲಿ ಯನ್ನು ಈ ಮೂಲಕ ಶರಣು ಎಂದು ಅರ್ಪಿಸುವೆನು .
ಶೇಖರಗೌಡ ಪಾಟೀಲ
ಹರಪನಹಳ್ಳಿ