ಶಾಂತಿವನದಲ್ಲಿ ಶ್ರೀ ಜಗದ್ಗುರುಗಳವರು ಪ್ರಯೋಗಾರ್ಥವಾಗಿ ಬೆಳೆಸಿದ ಏರೋಬಿಕ್ ರೈಸ್ ಬೆಳೆಯನ್ನು ರೈತ ಸಂಘದ ಅಧ್ಯಕ್ಷರಾದ ಎಚ್.ಆರ್.ಬಸವರಾಜಪ್ಪನವರು ವೀಕ್ಷಣೆ ಮಾಡಿದರು.

  •  
  •  
  •  
  •  
  •    Views  

ಸಿರಿಗೆರೆ ಫೆ.25 :

ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಶಾಂತಿವನದ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಕೈಗೊಂಡು ರೈತರ ಗಮನ ಸೆಳೆದಿದ್ದರು. ಹೊಸ ವಿಧಾನಗಳೊಂದಿಗೆ ಪ್ರಯೋಗಾರ್ಥವಾಗಿ “ಏರೋಬಿಕ್ ರೈಸ್” ಬೆಳೆ ಬೆಳೆದಿರುವುದನ್ನು ರೈತ ಸಂಘದ ಅಧ್ಯಕ್ಷರಾದ ಶರಣ ಎಚ್.ಆರ್.ಬಸವರಾಜಪ್ಪನವರು ವೀಕ್ಷಿಸಿ ಮಾಹಿತಿ ಪಡೆದರು.

ಕೃಷಿ ವಿಜ್ಞಾನಿಗಳು ಕಂಡುಹಿಡಿದಿರುವ ಈ ಭತ್ತದ ತಳಿಗೆ ವಾರಕೊಮ್ಮೆ ಸ್ಪಿಂಕ್ಲರ್ ನಲ್ಲಿ ನೀರು ಕೊಟ್ಟರೆ ಸಾಕು. ಒಣ ಬೇಸಾಯ ಪದ್ಧತಿ ಮಾಡಿದಂತೆ ಈ ಬೆಳೆಯನ್ನು ಬೆಳೆಯಬಹುದು. ಇದರಿಂದ ಭತ್ತದ ಗದ್ದೆಗಳಲ್ಲಿ ರೈತರು ಯಥೇಚ್ಛವಾಗಿ ನೀರು ನಿಲ್ಲಿಸಿ ನೀರಿಗಾಗಿ ಪರದಾಡುವ ಅವಶ್ಯಕತೆ ಬೀಳುವುದಿಲ್ಲ.  

ಶಾಂತಿವನದ ಕೃಷಿ ಭೂಮಿಯಲ್ಲಿ ಏರೋಬಿಕ್ ರೈಸ್ ಭತ್ತದ ಬೆಳೆಯನ್ನು ವೀಕ್ಷಿಸಿದ ಬಸವರಾಜಪ್ಪನವರು ಕಡಿಮೆ ನೀರಿನ ಪ್ರಮಾಣದಿಂದ ಈ ಬೆಳೆಯಲ್ಲಿ ಉತ್ತಮ ಫಸಲು ಬಂದಿರುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು.