ತರಳಬಾಳು ತ್ರೈಮಾಸಿಕಕ್ಕೆ ಚಂದಾದಾರರಾಗಲು ಮನವಿ.

  •  
  •  
  •  
  •  
  •    Views  

"ತರಳಬಾಳು" ತ್ರೈಮಾಸಿಕವು  ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಹೆಮ್ಮೆಯ ಪ್ರಕಟಣೆಯಾಗಿದೆ. 

ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ಹೊರಬರುತ್ತಿರುವ  ಕನ್ನಡದ  ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಮುಖವಾದುದು. ಈ ಪತ್ರಿಕೆಯಲ್ಲಿ  ನಾಡಿನ ಹೆಸರಾಂತ ಹಿರಿ- ಕಿರಿಯ ಲೇಖಕರ, ಚಿಂತಕರ, ಕವಿಗಳ ಸಾಹಿತ್ಯ, ವೈಚಾರಿಕ, ಸಾಂಸ್ಕೃತಿಕ ಲೇಖನಗಳು, ಕವಿತೆಗಳು ಇದರಲ್ಲಿ ಬೆಳಕು ಕಂಡಿವೆ. ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಪತ್ರಿಕೆಯು ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಕಾಲಕ್ಕೆ ತಕ್ಕಂತೆ ಮುದ್ರಣ ವಿನ್ಯಾಸದಲ್ಲಿ ಹೊಸ ರೂಪ ಪಡೆಯುತ್ತ ತಾನು ಬೆಳೆಯುತ್ತ, ಹೊಸಬರನ್ನು ಬೆಳೆಸುತ್ತ ಮುನ್ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ವ್ಯಕ್ತಿತ್ವ ವಿಕಸನ, ಕೃಷಿ, ಆರೋಗ್ಯ, ಪದಬಂಧ, ಸಂಕ್ಷಿಪ್ತ ವಾರ್ತೆ ಮುಂತಾದ ಅಂಕಣಗಳನ್ನೊಳಗೊಂಡಂತೆ ಎಲ್ಲಾ ವಯೋಮಾನದವರು ಓದುವಂತೆ ಪತ್ರಿಕೆಯನ್ನು ರೂಪಿಸಲಾಗುತ್ತಿದೆ. ಸಾಹಿತ್ಯಾಸಕ್ತರು, ಅಭಿಮಾನಿಗಳು, ಶ್ರೀಮಠದ ಭಕ್ತರು, ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಈ ಪತ್ರಿಕೆಗೆ ಚಂದಾದಾರರನ್ನಾಗಿಸಿ ನಾಡಿನಾದ್ಯಂತ ಹೆಚ್ಚು ಪ್ರಸಾರವಾಗುವಂತೆ ಮಾಡಲು ಉದ್ದೇಶಿಸಲಾಗಿದೆ. 

ಕೊರೊನ ಕಾರಣಕ್ಕಾಗಿ ಎರಡು ವರ್ಷಗಳ ಕಾಲ ಪತ್ರಿಕೆಯು ಸ್ಥಗಿತಗೊಂಡಿತ್ತು. ಸಹೃದಯ ಓದುಗರ ಒತ್ತಾಸೆಯ ಮೇರೆಗೆ ತ್ರೈಮಾಸಿಕ ಪತ್ರಿಕೆಯನ್ನು ಮುಂದುವರಿಸಲು ಸಂಪಾದಕ ಮಂಡಳಿ ತೀರ್ಮಾನಿಸಿದೆ. ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ತರಳಬಾಳು ತ್ರೈಮಾಸಿಕ ಪತ್ರಿಕೆಯ 193 ನೆಯ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಪತ್ರಿಕೆಯು ತ್ರೈಮಾಸಿಕವಾಗಿರುವುದರಿಂದ ಮೂರು ತಿಂಗಳಿಗೊಂದರಂತೆ ಒಂದು ವರ್ಷಕ್ಕೆ ನಾಲ್ಕು (ಜನವರಿ, ಏಪ್ರಿಲ್, ಜುಲೈ, ಅಕ್ಟೋಬರ್) ಸಂಚಿಕೆಗಳು ಪ್ರಕಟವಾಗುತ್ತದೆ. ಪತ್ರಿಕೆಯ ಚಂದಾ ಸ್ವರೂಪವು ಐದು ವರ್ಷಗಳಿಗೆ ಒಂದು ಸಾವಿರ ರೂಪಾಯಿಗಳು ಮಾತ್ರ. (ಇಪ್ಪತ್ತು ಸಂಚಿಕೆಗಳಿಗೆ ಅಂಚೆ ವೆಚ್ಚ ಸೇರಿ) ಆದುದರಿಂದ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಚಂದಾದಾರರನ್ನಾಗಿಸಿ ಶ್ರೀಮಠದ ಸಾಹಿತ್ಯ ಪ್ರಸಾರ ಕಾರ್ಯ ಮನೆಮನೆಗಳಿಗೆ ತಲುಪುವಂತೆ ಮಾಡಲು ತಿಳಿಸಿದೆ.

ಚಂದಾದಾರರಾಗಲು ಸಂಪರ್ಕಿಸಿ :  
89705 43613, 99164 57625, 9449629364

- ಸಂಪಾದಕ ಮಂಡಳಿ
ತರಳಬಾಳು ತ್ರೈಮಾಸಿಕ ಪತ್ರಿಕೆ