ತಾಯಿಯ ಹೃದಯವೇ ಮಗುವಿನ ಮೊದಲ ಶಾಲೆ!

  •  
  •  
  •  
  •  
  •    Views  

ಗು ಅಳುತ್ತಿದ್ದರೆ ಅದನ್ನು ಸಂತೈಸುವ ಮಾಂತ್ರಿಕ ಶಕ್ತಿ ತಾಯಿಯ ಕೈಯಲ್ಲಿದೆಯೇ ಹೊರೆತು ತಂದೆಯ ಕೈಯಲ್ಲಿಲ್ಲ. ‘ಗಂಡಸರ ಕೈಯಾಗೆ ಕೂಸು ನಿಲ್ಲಲ್ಲ’ ಎಂಬ ಗಾದೆ ಮಾತು ಬಂದದ್ದು ಇದರಿಂದಲೇ ಇರಬೇಕು. ಇದರಿಂದ ಕುಪಿತಗೊಂಡ ಗಂಡಸರು ಮುಂದುವರಿದು "ಹೆಂಗಸರ ಬಾಯಾಗೆ ಮಾತು ನಿಲ್ಲಲ್ಲ!" ಎಂದು ಮೂದಲಿಸಿರಬೇಕೆಂದು ತೋರುತ್ತದೆ.

ಒಮ್ಮೆ ಪ್ರಾತಃಕಾಲ ವಾಯುವಿಹಾರದಿಂದ ಹಿಂದಿರುಗುವಾಗ ದೂರದಲ್ಲಿ ಬಸ್ಸಿಗೆ ಕಾಯುತ್ತಾ ಶಿಷ್ಯರೊಬ್ಬರು ತಮ್ಮ ಮಡದಿಯೊಂದಿಗೆ ರಸ್ತೆ ಬದಿಯಲ್ಲಿ ನಿಂತಿದ್ದರು. ಹತ್ತಿರ ಹತ್ತಿರ ಬರುತ್ತಿದ್ದಂತೆಯೇ ತಂದೆಯ ಕೈಹಿಡಿದು  ನಿಂತಿದ್ದ ಪುಟ್ಟ  ಮಗು ಪಕ್ಕದಲ್ಲಿದ್ದ ತಾಯಿಯ ಕಡೆ ತಿರುಗಿ ಅಮ್ಮಾ  ಗುರುಗಳು!" ಎಂದು ನಮ್ಮತ್ತ ಬೆರಳು ಮಾಡಿ ತೋರಿಸಿ ಹೇಳಿತು. ಭೀಮ ಕಾಯನಾದ ಆಪ್ಪನ ಕೈಹಿಡಿದು ನಿಂತಿದ್ದ ಆ ಮಗು ಅಪ್ಪಿತಪ್ಪಿಯೂ ಅವನನ್ನು ಕತ್ತೆತ್ತಿಯೂ ಸಹ ನೋಡಲಿಲ್ಲ. ಆ ಮಗುವಿಗೆ ತಾನು ಕಂಡದ್ದನ್ನು ಹೇಳಬೇಕೆನಿಸಿದ್ದು ತಾಯಿಗೇ ಹೊರತು ತಂದೆಗಲ್ಲ! It was a spontaneous reaction! ತಾಯಿಯ ಬಗೆಗೆ ಮಕ್ಕಳಿಗೆ ಎಷ್ಟೊಂದು ಒಲವು ಇರುತ್ತದೆ ಎಂಬುದು ಇದರಿಂದ ಸುವ್ಯಕ್ತವಾಗುತ್ತದೆ. ""ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ!" ಎನ್ನುವಲ್ಲಿ ತಾಯಿಗೆ ಮೊದಲ ಸ್ಥಾನ ಕೊಟ್ಟದ್ದು ಅರ್ಥಪೂರ್ಣವಾಗಿದೆ.

"No man is poor who has a Godly mother." ಎಂದು ಅಬ್ರಾಹಾಂ ಲಿಂಕನ್ ಹೇಳಿರುವುದನ್ನು ಗಮನಿಸಬೇಕು. ಪ್ರೀತಿಸುವ ತಾಯಿಯನ್ನು ಪಡೆದಾತ ಎಂದೂ ಬಡವನಲ್ಲ, "ತಾಯಿಯ ಪಾದಗಳ ಬಳಿಯಲ್ಲೇ ಸ್ವರ್ಗವಿದೆ"" ಎಂದು ಕುರಾನ್ ಹೇಳುತ್ತದೆ. "ಜಗತ್ತಿನಲ್ಲಿ ಒಂದೇ ಒಂದು ಸುಂದರವಾದ ಮಗು ಇದೆ. ಅದು ಎಲ್ಲಾ ತಾಯಂದಿರ ಹತ್ತಿರವೂ ಇದೆ" ಎಂಬ ಚೀನಾ ಗಾದೆ ತುಂಬಾ ಮಾರ್ಮಿಕವಾಗಿದೆ.  "ಒಬ್ಬ ತಾಯಿ ನೂರು ಜನ ಶಿಕ್ಷಕರಿಗೆ ಸಮ" (One good moth is worth a hundred school masters.) ಎಂಬ ಆಂಗ್ಲ ನುಡಿಗಟ್ಟೊಂದಿದೆ. "ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರು ಧನ್ಯರು ಎಂಬ ಕವಿವಾಣಿಯೂ ಸಹ ಅದನ್ನೇ ಸಾರುತ್ತದೆ. The motherʼs heart is the child"s school room. ತಾಯಿಯ ಹೃದಯವೇ ನಗುವಿನ  ಶಾಲಾ ಕೊಠಡಿ. ಅಂತಹ ಶಾಲಾ ಕೊಠಡಿಯಲ್ಲಿ "ಕುಳಿತು" ಪಾಠ ಕಲಿಯುವುದೆಂದರೆ ಅಮೃತವ ಮನದಣಿಯೆ ಸವಿದಂತೆ.

ಎಪ್ಪತ್ತರ ದಶಕದಲ್ಲಿ ವಿಯೆನ್ನಾ ವಿಶ್ವವಿದ್ಯಾನಿಲಯದ ಸಂಶೋಧಕ ವಿದ್ಯಾರ್ಥಿಯಾಗಿದ್ದಾಗ ನಮ್ಮ ಪ್ರಾಧ್ಯಾಪಕರಾಗಿದ್ದ ಪ್ರೊಫೆಸರ್ ಗೆರ್ ಹಾರ್ಡ್  ಓಬರ್ಹಾಮರ್ (Gerhard Oberhammer) ನಮ್ಮನ್ನು ತಮ್ಮ ಮನೆಗೆ ಔತಣಕೂಟಕ್ಕೆಂದು ಕರೆಯುತ್ತಿದ್ದರು. ಭೋಜನದ ಅನಂತರ ನಮ್ಮ ಸಂಶೋಧನಾ ಕಾರ್ಯ ಕುರಿತು ಮಾರ್ಗದರ್ಶನ ಮಾಡುತ್ತಿದ್ದರು. ಅವರು ಭಾರತೀಯ ದರ್ಶನಶಾಸ್ತ್ರದಲ್ಲಿ ಅದರಲ್ಲೂ ವಿಶೇಷವಾಗಿ ಆಚಾರ್ಯ ಶ್ರೀರಾಮಾನುಜರ ವಿಶಿಷ್ಟಾದ್ವೈತ ದರ್ಶನದಲ್ಲಿ ವಿಶೇಷ ಪರಿಣತಿಯನ್ನು ಪಡೆದವರಾಗಿದ್ದರು. ಮನೆಯಲ್ಲಿದ್ದ ಅವರ ಅಧ್ಯಯನದ ಕೊಠಡಿಯು ಒಂದು ದೊಡ್ಡ ಪುಸ್ತಕ ಭಂಡಾರವಾಗಿತ್ತು. ಕಿಟಿಕಿಯ ಕಡೆಗೆ ವಿಶಾಲವಾದ ಆಧ್ಯಯನದ ಟೇಬಲ್, ಕಿಟಕಿಯಾಚೆ "ಕಾಲೆನ್ಬೆರ್ಗ್" (Kahlenberg) ಬೆಟ್ಟದ ರಮಣೀಯ ದೃಶ್ಯ. ನಮ್ಮ ಪ್ರಾಧ್ಯಾಪಕರ ಮಡದಿ ಮೂಲತಃ ಹಾಲೆಂಡ್ ದೇಶದವರು. ಮನೆಗೆ ಹೋಗಿ ಕರೆಗಂಟೆ ಒತ್ತಿದ ತಕ್ಷಣವೇ ಅವರು ಬಾಗಿಲು ತೆರೆದು "Gruss Gott! Kommen Sie Herr Doktor Shivamurthy" ಎಂದು ಜರ್ಮನ್ನಲ್ಲಿ ಹೇಳಿ ನಮ್ಮನ್ನು ತುಂಬಾ ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಿದ್ದರು. ಅವರ ಏಕಮಾತ್ರ ಪುತ್ರಿ ನಾಲೈದು ವರ್ಷದ ಪುಟ್ಟ ಬಾಲಕಿ   ಮಾರಿಯಾ ಬಾರ್ಬರಾ (Maria Barbara)  ನಾವು ಬರುವುದನ್ನೇ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಳು. ಉಭಯ ಕುಶಲೋಪರಿಯ ಅನಂತರ ಬಾಲಕಿ ಬಾರ್ಬರಾ ನಮ್ಮ ಕೈಹಿಡಿದು ತನ್ನ ಕೊಠಡಿಗೆ ಬಲವಂತವಾಗಿ ಕರೆದುಕೊಂಡು ಹೋಗಿ ತನ್ನ ಆಟದ ಬೊಂಬೆಗಳನ್ನು ತೋರಿಸಿ ಖುಷಿಪಡುತ್ತಿದ್ದಳು ಆಕೆಗೆ ನಮ್ಮೊಂದಿಗೆ ಇನ್ನೂ ಆಟವಾಡಬೇಕೆಂದಿರುವಷ್ಟರಲ್ಲಿಯೇ ಸಂಜೆ 6 ಗಂಟೆಗೆ ಸರಿಯಾಗಿ  ಊಟಕ್ಕೆ ಕರೆ. ಯೂರೋಪಿನಲ್ಲಿ ತಾಯಂದಿರು ಮಕ್ಕಳನ್ನು ಬೇಗನೆ ಊಟ ಮಾಡಿಸಿ ಮಲಗಿಸುತ್ತಾರೆ. ನಾವು ಬಂದ ದಿನ ಆ ಬಾಲಕಿಗೆ ಬೇಗನೆ ಮಲಗಲು ಇಷ್ಟವಿರುತ್ತಿರಲಿಲ್ಲ. ನಮ್ಮೊಂದಿಗೆ ಇನ್ನೂ ಆಟವಾಡಬೇಕೆಂದು ಬಯಸುತ್ತಿದ್ದಳು. ಆ ದಿನ ನಮ್ಮ ಕಾರಣಕ್ಕಾಗಿ ಎಲ್ಲರಿಗೂ ವಿಶೇಷವಾಗಿ ಸಸ್ಯಾಹಾರದ ಅಡುಗೆ. ನಮ್ಮ ಪ್ರಾಧ್ಯಾಪಕರು ನಮ್ಮಿಂದ ಮೊದಲೇ ಅಡುಗೆ ಸಾಮಗ್ರಿಗಳ ವಿವರ ಮತ್ತು ಅಡುಗೆ ಮಾಡುವ ವಿಧಾನವನ್ನು ಕೇಳಿ ಬರೆದುಕೊಂಡು ಅವರ ಮಡದಿಗೆ ಹೇಳಿ ಮಾಡಿಸುತ್ತಿದ್ದರು. ನಾವೂ ಸಹ ಅಡುಗೆ ಮನೆಯಲ್ಲಿ ಅವರಿಗೆ ನೆರವಾಗುತ್ತಿದ್ದೆವು. ಪುಟ್ಟ ಬಾಲಕಿ ಬಾರ್ಬರಾ ಟೇಬಲ್ ನಿಲುಕದ ಕಾರಣ ಎತ್ತರದ ಕುರ್ಚಿಯಲ್ಲಿ ಕುಳಿತುಕೊಂಡು ಕೊರಳಿಗೆ "ಬಿಬ್" (bib) ಕಟ್ಟಿಸಿಕೊಂಡು ನಮ್ಮೊಂದಿಗೆ ಹರಟೆ ಹೊಡೆಯುತ್ತಾ ಉಣ್ಣುತ್ತಿದ್ದಳು. ದೃಷ್ಟಿದೋಷದ ಕಾರಣ ಆ ಚಿಕ್ಕವಯಸ್ಸಿನಲ್ಲಿಯೇ ದಪ್ಪನೆಯ ಗಾಜಿನ ಕನ್ನಡಕ ಆಕೆಯ ದುಂಡನೆಯ ಮುಖವನ್ನೇರಿತ್ತು. ಯೂರೋಪಿನಲ್ಲಿ ಆ ವಯಸ್ಸಿನಿಂದಲೇ ತಾಯಂದಿರು ಮಕ್ಕಳಿಗೆ ಶಿಷ್ಟಾಚಾರಗಳನ್ನು (table manners) ಕಲಿಸಿಕೊಡುತ್ತಾರೆ. ಊಟಕ್ಕೆ ಏನಾದರೂ ಬಡಿಸಿದಾಗಲೆಲ್ಲಾ ಮಕ್ಕಳು  Danke!/Danke schön!" (Thank you, Thank you very much) ಎಂದು ಹೇಳಲೇಬೇಕು. ಇಲ್ಲದಿದ್ದರೆ ಮಕ್ಕಳ ಕಡೆಗೆ ತಾಯಂದಿರು ಹುಸಿಕೋಪದಿಂದ ದುರುಗುಟ್ಟಿಕೊಂಡು ನೋಡುತ್ತಾರೆ. ಮಕ್ಕಳು ಈ ರೀತಿ ತಾಯಿಗೆ ಧನ್ಯವಾದಗಳನ್ನು ಹೇಳಿದ ಮೇಲೆಯೇ ಅವರು ಮುಂದಿನ ಆಹಾರ ಪದಾರ್ಥಗಳನ್ನು ಬಡಿಸುವುದು. ನಮ್ಮ ದೇಶದಲ್ಲಿ ಊಟಕ್ಕೆ ಕುಳಿತ ಯಾವ ಮಗುವೂ ತನ್ನ ತಾಯಿಗೆ "ಧನ್ಯವಾದ" ಹೇಳುವುದಿಲ್ಲ. ಅದನ್ನು ಕಲಿಸಿಕೊಡುವುದೂ ಇಲ್ಲ. ಇಲ್ಲಿಯ ಮಕ್ಕಳು ಯಾವ ಗಲಾಟೆಯನ್ನೂ ಮಾಡದೆ ಸುಮ್ಮನೆ ಉಂಡು ಎದ್ದು ಹೋದರೆ ತಾಯಿ ಪುಣ್ಯಮಾಡಿದ್ದಳು. ಆದರೂ ನಮ್ಮಲ್ಲಿ ತಾಯಿ ಮಕ್ಕಳ ಪ್ರೀತಿ ಅವರ ಕಣ್ಣಂಚಿನಲ್ಲಿ ಹುದುಗಿರುತ್ತದೆ! ನಮ್ಮ ದೇಶದಲ್ಲಿ ಕೈಯಲ್ಲಿ ಉಂಡರೇ ಸಮಾಧಾನ. ಆ ದೇಶಗಳಲ್ಲಿ ಕೈಯಲ್ಲಿ ಉಣ್ಣುವುದು ಅಸಭ್ಯತನ, ಮಕ್ಕಳಿಗೆ ಎಳೆ ವಯಸ್ಸಿನಲ್ಲಿಯೇ fork ಮತ್ತು knife ಹಿಡಿದು ಹೇಗೆ ಉಣ್ಣಬೇಕೆಂದು ಕಲಿಸಿಕೊಡುತ್ತಾರೆ. ಫೋರ್ಕನ್ನು ಎಡಗೈಯಲ್ಲೂ, ಚಾಕುವನ್ನು ಬಲಗೈಯಲ್ಲೂ ಹಿಡಿದುಕೊಳ್ಳುವುದು ಪದ್ಧತಿ. ಅಭ್ಯಾಸವಿಲ್ಲದ ನಮ್ಮನ್ನು ನೋಡಿ ಬಾರ್ಬರಾ ಮುಗುಳ್ನಗುತ್ತಿದ್ದಳು ಹಾಗಲ್ಲ ಹೀಗೆ ಎಂದು ಹೇಳಿಕೊಡುತ್ತಿದ್ದಳು. ಊಟಕ್ಕೆ ಕುಳಿತಾಗ ನಿಮ್ಮ ಆತಿಥೇಯರು ಉಣ್ಣಲು ಸೂಚಿಸುವವರೆಗೂ ನೀವು ಊಟ  ಮಾಡಲು ಆರಂಭಿಸುವುದು ಶಿಷ್ಟಾಚಾರವಲ್ಲ, ನಮ್ಮಲ್ಲಿ ಕರ್ಪೂರ ಹಚ್ಚಿ ಮಂತ್ರ ಪಠಣ ಮಾಡಿದ ಅನಂತರ ಊಟ ಮಾಡಲು ಆರಂಭಿಸಿದರೆ ಪಾಶ್ಚಾತ್ಯ ದೇಶಗಳ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಡೈನಿಂಗ್ ಟೇಬಲ್ ಮೇಲೆ ಮೇಣದ ಬತ್ತಿಯನ್ನು ಹಚ್ಚಿ "O Lord! Give us this day our daily bread and forgive us our trespasses" ಎಂದು ದೇವರ ಪ್ರಾರ್ಥನೆಯನ್ನು ಸಲ್ಲಿಸಿ ಉಣ್ಣಲು ಆರಂಭಿಸುತ್ತಾರೆ. ಆಸ್ಟ್ರಿಯಾ ಅಥವಾ ಜರ್ಮನ್ ರಾಷ್ಟ್ರಗಳಲ್ಲಿ ಊಟಕ್ಕೆ ಬಡಿಸಿಯಾದ ಮೇಲೆ ಅತಿಥಿಗಳು ಹಸನ್ಮುಖಿಗಳಾಗಿ ಪರಸ್ಪರ "Guten Appetit ಅಥವಾ "Mahizeit" ಎಂದು ಹೇಳಿ ಉಣ್ಣಲು ಆರಂಭಿಸುತ್ತಾರೆ. ಉಣ್ಣುವಾಗ ಬಾಯಿಮುಚ್ಚಿಕೊಂಡು ಆಹಾರವನ್ನು ಅಗಿದು ನುಂಗಬೇಕು. ಬಾಯ್ದೆರೆದು ಅಗಿಯುವ ಆಹಾರ ಕಂಡುಬಂದರೆ ಇತರೆ ಅತಿಥಿಗಳು ಅಸಹ್ಯಪಟ್ಟುಕೊಳ್ಳುತ್ತಾರೆ. ಬಾಯಲ್ಲಿ ಆಹಾರವನ್ನು ಹೆಚ್ಚು ತುರುಕುವುದಾಗಲೀ, ಬಾಯಲ್ಲಿ ಆಹಾರವಿದ್ದಾಗ ಮಾತನಾಡುವುದಾಗಲೀ ಅಸಭ್ಯತನ. ಊಟ ಮಾಡುವಾಗ ಫೋರ್ಕಿನ ಮುಳ್ಳುಗಳು ಕೆಳಮುಖವಾಗಿರಬೇಕು. ಊಟ ಮುಗಿದ ಮೇಲೆ ಅದರ ಮುಳ್ಳುಗಳನ್ನು ಮೇಲ್ಮುಖವಾಗಿರಿಸಿ ಅದರ ಜೊತೆಗೆ ಚಾಕುವನ್ನು ಪ್ಲೇಟಿನಲ್ಲಿಡಬೇಕು.

ಪಾಶ್ಚಾತ್ಯ ದೇಶದ ಮಕ್ಕಳ ಮನಸ್ಸಿನಲ್ಲಿ ಬಾಲ್ಯಾವಸ್ಥೆಯಿಂದಲೇ "Ego" ಮೊಳಕೆಯೊಡೆಯುತ್ತದೆ. ತಾಯಿ ತನ್ನ ಮಗುವನ್ನು ಮಗ್ಗುಲಲ್ಲಿ ಮಲಗಿಸಿಕೊಳ್ಳದೆ ಪ್ರತ್ಯೇಕ ಕೊಠಡಿಯಲ್ಲಿ ಮಲಗಿಸಿ ಅದರ ಅಹಮ್ಮಿಕೆಗೆ ಹಾಲೆರೆದು ಪೋಷಿಸುತ್ತಾಳೆ. ಮನೆಯಲ್ಲಿರುವ ಎಲ್ಲ ಕೊಠಡಿಗಳೂ "ನಮ್ಮ ಮನೆ"ಯ ಭಾಗವಾಗದೆ "ಇದು ನನ್ನ ಕೊಠಡಿ" ಎಂಬ ಪ್ರತ್ಯೇಕತೆಯ ಭಾವನೆ ಒಡಮೂಡುತ್ತದೆ. ಮಕ್ಕಳ ಮನಸ್ಸಿನಲ್ಲಿ "ನಾನು" ಎಂಬ ಅಹಂಭಾವ ಮೊಳಕೆಯೊಡೆಯದೆ "ನಾವು" ಎಂಬ ಸಮಷ್ಟಿಭಾವ ಮೂಡುವಂತೆ ಮಾಡಬೇಕು ಎಂದು  ನಮಗೆ ಅನಿಸಿದರೆ ಮಕ್ಕಳು ಸ್ವತಂತ್ರವಾಗಿ ಬೆಳೆಯುವುದನ್ನು ಕಲಿಸಬೇಕು ಎನ್ನುವುದು ಅಲ್ಲಿಯವರ ಆಶಯ. ಪಾಶ್ಚಿಮಾತ್ಯ ದೇಶಗಳಲ್ಲಿ ಪೋಷಕರು ಮಕ್ಕಳಿಗೆ ಸಮಾಜ ಸೇವೆಯ ಪಾಠವನ್ನು ಕಲಿಸುತ್ತಾರೆ. ವಾರಾಂತ್ಯದ ದಿನಗಳಲ್ಲಿ ಮಕ್ಕಳು ಮನೆಗಳಿಂದ ಸಿಹಿ ತಿಂಡಿ ತಿನಿಸುಗಳನ್ನು ಮಾಡಿಸಿಕೊಂಡು ಬಂದು ಚರ್ಚ್ಗಳ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಲು ಬಂದವರಿಗೆ ಮಾರಾಟ ಮಾಡುತ್ತಾರೆ. ಅದರಿಂದ ಬಂದ ಹಣವನ್ನು ಆಸ್ಪತ್ರೆಗಳಿಗೆ ದಾನ ಮಾಡುತ್ತಾರೆ.

ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಂದಿರ ಹೃದಯದಲ್ಲಿರುವ ಸುಮಧುರ ಭಾವನೆಗಳನ್ನು, ಮಕ್ಕಳ ಭವಿತವ್ಯವನ್ನು ರೂಪಿಸುವ ಆದರ್ಶಗಳನ್ನು ಜನಪದ ಗೀತೆಗಳು ಮನೋಜ್ಞವಾಗಿ ಚಿತ್ರಿಸಿವೆ:

ಆಚಾರಕ್ಕರಸಾಗು ನೀತಿಗೆ ಪ್ರಭುವಾಗು 
ಮಾತಿನಲಿ ಚೂಡಾಮಣಿಯಾಗು! ನನ ಕಂದ 
ಜ್ಯೋತಿಯೇ ಆಗು ಜಗಕೆಲ್ಲ

ಮಗುವಿಗೆ ಹಾಲುಣಿಸುವಾಗಲೇ ತಾಯಂದಿರು ಹಾಲಿನೊಂದಿಗೆ ಮಗುವಿಗೆ ಎರೆದ ನೀತಿಪಾಠವಿದು. ಇದಲ್ಲವೇ ನಿಜವಾದ ಶಿಕ್ಷಣ! ಮನೆಯಿಂದ ಹೊರಗೆ ಆಡಿಬಂದ ಕಂದನ ಅಂಗಾಲನ್ನು ತಾಯಿ ತೊಳೆಯುತ್ತಾಳೆ. ಮಗುವಿನ ಮುಖ ಸಾಮಾನ್ಯವಲ್ಲ, ಅದು ಬಂಗಾರದ ಮೋರೆ! ಅದನ್ನು ತೊಳೆಯಲು ಸಾಧಾರಣ ನೀರು ಸಾಕಾಗದು: ಅದನ್ನು ತೊಳೆಯಲು ತೆಂಗಿನ ಕಾಯ ತಿಳಿನೀರೇ ಸರಿ!

ಆಡಿ ಬಾ ನನ ಕಂದ ಅಂಗಾಲ ತೊಳೆದೇನ 
ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು
ನಿನ ಬಂಗಾರ ಮೋರೆ ತೊಳೆದೇನ

ಮಗು ನಕ್ಕರೂ ಚಂದ, ಅತ್ತರೂ ಚೆಂದ. ಅಳುತ್ತಿರುವ ಕಂದನ ತುಟಿ, ಕೆಂಪು ಹವಳದ ಹಾಗೆ ಚೆಂದ. ಅವನ ಕುಡಿಹುಬ್ಬು ಬೇವಿನ ಎಸಳಿನ ಹಾಗೆ, ಕಣ್ಣಿನ ನೋಟದ ಹೊಳಪೋ ಶಿವನ ಕೈಯ ಅಲಗಿನ ಹಾಗೆ ಫಳಫಳನೆ ಹೊಳೆಯುತ್ತದೆ. ಇಂತಹ ಮಗು ತೊಟ್ಟಿಲಲ್ಲಿ ಮಲಗಿದ್ದರೆ ತೊಳೆದ ಮುತ್ತಿನಂತೆ ತಾಯಿಯ ವಾತ್ಸಲ್ಯಭರಿತ ಮನಕ್ಕೆ ಗೋಚರಿಸುತ್ತದೆ.

ಅಳುವ ಕಂದನ ತುಟಿಯು ಹವಳದ ಕುಡಿ ಹಂಗ 
ಕುಡಿಹುಬ್ಬು ಬೇವಿನ ಎಸಳಂಗ ಕಣ್ಣೋಟ 
ಶಿವನ ಕೈಯಲಗು ಹೊಳೆದ್ಹಾಂಗ

ಅಂತಹ ಕೂಸು ಇದ್ದರೆ ಬೀಸಣಿಕೆಯ ಆಗತ್ಯವೇ ಇರುವುದಿಲ್ಲ. ಮಗು ಮನೆಯಲ್ಲಿ ಒಳಹೊರಗೆ ಸುಳಿದಾಡಿದರೆ ಸಾಕು ಬೀಸಣಿಕೆ ಆಡಿದಷ್ಟು ತಂಪಾದ ಗಾಳಿ ಬೀಸಿ ಮನ ತಂಪುಗೊಳ್ಳುತ್ತದೆ ಎಂಬುದು ಮಮತಾಮಯಿ ತಾಯಿಯ ಹೃದಯದ ಹಂಬಲವಾಗಿದೆ.

ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ? 
ಕೂಸು ಕಂದಯ್ಯ ಒಳಹೊರಗೆ ಆಡಿದರೆ
ಬೀಸಣಿಕೆ ಗಾಳಿ ಸುಳಿದಾವ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 25.4.2019

Das Herz einer Mutter ist die erste Schule für ein Kind!

Wenn ein Kind weint, hat nur die Mutter die magische Kraft, es zu trösten – nicht der Vater. Daher entstand wahrscheinlich das Sprichwort: „Ein Kind bleibt nicht bei der Hand des Vaters stehen.“ Aus Frustration darüber haben die Männer dann wohl das Gegensprichwort „Eine Frau kann nie den Mund halten.“ geprägt.

Einmal, als ich morgens von meinem Spaziergang zurückkehrte, sah ich in der Ferne einen meiner Schüler, der mit seiner Frau an der Bushaltestelle stand. Als ich näher kam, hielt das kleine Kind, das an der Hand seines Vaters stand, seine Mutter am Arm, zeigte mit dem Finger auf mich und rief: „Mama, unser Lehrer!“ Das Kind, das die kräftige Hand seines Vaters hielt, schaute seinen Vater nicht einmal versehentlich an, sondern berichtete spontan nur seiner Mutter, was es sah! Es war eine natürliche Reaktion! Das zeigt, wie tief die Zuneigung von Kindern zu ihren Müttern ist. Daher sagt das Sprichwort: „Mātṛ devo bhava, pitṛ devo bhava, ācārya devo bhava“ (Ehre zuerst die Mutter, dann den Vater, dann den Lehrer).

Abraham Lincoln sagte einmal: „Kein Mensch ist arm, der eine göttliche Mutter hat.“ Der Koran sagt: „Das Paradies liegt zu Füßen der Mutter.“ Ein chinesisches Sprichwort besagt: „Es gibt nur ein schönes Kind auf der Welt, und jede Mutter hat es.“ Auch das englische Sprichwort „Eine gute Mutter ist so viel wert wie hundert Lehrer“ spiegelt diese tiefe Wahrheit wider. Ebenso heißt es im Sanskrit: „Das Zuhause ist die erste Schule, die Mutter ist die erste Lehrerin.“ Das Herz der Mutter ist tatsächlich das Klassenzimmer des Kindes.

Während meines Studiums in den 1970er Jahren an der Universität Wien lud mich mein Professor Dr. Gerhard Oberhammer oft zu sich nach Hause ein. Nach dem Essen führte er uns durch Diskussionen über unsere Forschungsarbeiten. Er war ein international anerkannter Experte für indische Philosophie, insbesondere für die Viśiṣṭādvaita-Philosophie des Śrī Rāmānuja.

Seine Frau, die ursprünglich aus den Niederlanden stammte, empfing uns immer herzlich mit den Worten: „Grüß Gott! Kommen Sie, Herr Doktor Shivamurthy!“ Die kleine Tochter der Familie, Maria Barbara, wartete immer sehnsüchtig auf unseren Besuch.

Doch pünktlich um 18:00 Uhr rief ihre Mutter sie zum Abendessen. In Europa bringen Mütter ihre Kinder früh ins Bett. An diesem Tag wollte Barbara nicht schlafen, da sie weiter mit uns spielen wollte. Ihre Mutter hatte eigens für uns ein vegetarisches Menü zubereitet.

In Europa wird Kindern frühzeitig gutes Benehmen (Tischmanieren) beigebracht. Jedes Mal, wenn ein Gericht serviert wurde, musste das Kind sofort sagen: „Danke!“ oder „Danke schön!“.

Auch beim Betreten des Esszimmers gibt es Unterschiede: In Europa wartet jeder, bis der Gastgeber sagt: „Guten Appetit!“ oder „Mahlzeit!“, bevor das Essen beginnt.

Eine auffällige kulturelle Differenz ist das Konzept des persönlichen Raumes und Eigentums. In Europa hat jedes Kind sein eigenes Zimmer, was oft dazu führt, dass sich frühzeitig ein starkes „Ego“ entwickelt.

Die unendliche Liebe und Zuneigung der Mutter prägt das Leben des Kindes. Unsere Volkslieder schildern diesen mütterlichen Idealismus sehr schön:

„Sei ein König in der Moral,
Sei ein Herrscher in der Ethik,
Sei ein Juwel in Worten,
Mein Kind, sei ein Licht für die Welt!“

Eine Mutter braucht keinen Fächer, um sich zu kühlen. Das Kind, das fröhlich im Haus spielt, bringt bereits eine sanfte Brise ins Herz der Mutter.

„Warum braucht ein Haus mit einem Kind einen Fächer?
Das Kind, das drinnen und draußen spielt,
Bringt eine Brise kühler Luft ins Herz der Mutter.“

- Seiner Heiligkeit, Sri Taralabalu Jagadguru Dr. Shivamurthy Shivacharya Mahaswamiji, Sirigere

Veröffentlicht in Vijaya Karnataka - Bisilu Beladingalu am 25.04.2019.