20-04-2024 10:35 AM
ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ದೇವರುಗಳ ಉತ್ಸವಗಳು ಮತೀಯ ವಾಗಿರದೆ ಜನಮತವಾಗಿರಲು ಕಾರಣ ಸಮರಸ,ಸಹಬಾಳ್ವೆ ಗಳೇ ಕಾರಣ.ವೈಯಕ್ತಿಕ ಮತ್ಸರ ಬಿಟ್ಟು ಒಟ್ಟಿಗೆ ಸೇರಿ ರಥೋತ್ಸವ, ಮುಂತಾದ ಊರಿನ ಕಾರ್ಯಕ್ರಮ ಗಳು ಸಾಮರಸ್ಯದ ಸಂಕೇತವಾಗಿ ರುತ್ತವೆ.ಅಲ್ಲಿನ ಗ್ರಾಮದ ಹಿರಿಯರು ಇಂದಿನ ಪೀಳಿಗೆಯ ಹುಡುಗರ ಜೊತೆಗೆ ದೈವ ಭಾವ ಸಂಬಂಧಗಳಿರಬೇಕು,ಒಗ್ಗಟ್ಟಿರಬೇಕು. ಹಾಗೇ ಹಿರಿಯರ ಜೊತೆ ಯುವಕರೂ ಕೂಡ ಸಹಮತ ವ್ಯಕ್ತವಾಗಬೇಕು .ಅದಕ್ಕೆ ತಕ್ಕಂತೆ ಗ್ರಾಮದ ಹಿರಿಯರ ನಡಾವಳಿಕೆಗಳು ಕಿರಿಯರಿಗೆ ದಾರಿ ದೀಪ ಹಾಗಾಗಿ ಉತ್ಸವಗಳ ಮೂಲಕ ಭಕ್ತಿ,ಭಾವಗಳ ನಂಟು ಹೆಚ್ಚಾಗಬೇಕು..ನಾವು ನಮ್ಮವರಂತೆ ಬೇರೆ ಬೇರೆ ವರ್ಗದ ಜನರೂ ಕೂಡ ಸಹಮತದ ಜೂತೆ ಹೆಜ್ಜೆ ಹಾಕಬೇಕಾಗಿದೆ.ಗ್ರಾಮದ ದೇವರು ಗಳು ಆಯಾ ಗ್ರಾಮದ ಜನರ ಉತ್ತಮ ಬದುಕಿಗೆ ಆರ್ಶೀವಾದ ಗಳಿರಲಿ.ಶ್ರೀಗಳ ನುಡಿಯಂತೆ ಭಕ್ತಿ ಉನ್ನತ ಮಟ್ಟದ ಲ್ಲಿರಬೇಕು ,ಇದು ಅವರ ವ್ಯಕ್ತಿತ್ವಕ್ಕೆ ಊಳಶ ಪ್ರಾಯವಲ್ಲವೆ.
ಪ್ರಣಾಮಗಳೂಂದಿಗೆ
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ