ಲಾಭದ ಜೊತೆಗೆ ಸಾಮಾಜಿಕ ಕಳಕಳಿಯೂ ಉದ್ಯಮದ ಭಾಗವಾಗಬೇಕು : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ದಿನಾಂಕ:12-05-2024
ಸ್ಥಳ: ಬೆಂಗಳೂರು 

ಬೆಂಗಳೂರಿನಲ್ಲಿ ವಿಶ್ವನಾಥ್ ಬಾತಿರವರ ಸೂರ್ಯ ಹೈಟ್ಸ್ ಬೃಹತ್ ವಾಣಿಜ್ಯ ಕಟ್ಟಡವನ್ನು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು. 

ಬ್ಯಾಟರಾಯನಪುರ: ಬೆಂಗಳೂರು ನಗರದ ಬ್ಯಾಟರಾಯನಪುರದಲ್ಲಿ ನಿರ್ಮಿಸ ಲಾಗಿದ್ದ ಸೂರ್ಯ ಹೈಟ್ಸ್ ನೂತನ ವಾಣಿಜ್ಯ ಬೃಹತ್ ಕಟ್ಟಡವನ್ನು ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಭಾನುವಾರ ಉದ್ಘಾಟಿಸಿ ಆಶೀರ್ವಚನ ದಯಪಾಲಿಸಿ ದಾವಣಗೆರೆ ಸಮೀಪದ ಹಳೇಬಾತಿ ಗ್ರಾಮದ ಕೃಷಿ ಹಿನ್ನೆಲೆಯಿಂದ ಬಂದಿರುವ ವಿಶ್ವನಾಥ್ ಬಾತಿ ಅವರು ತುಂಬಿದ ಶ್ರಮ ಮತ್ತು ಪ್ರಾಮಾಣಿಕತೆಯ ಮೌಲ್ಯಗಳನ್ನು ಸಾಕಾರಗೊಳಿಸಿದ್ದಾರೆ. ಸಮಾಜ ಸೇವೆಯಲ್ಲಿಯೂ ಮಾಹೇಶ್ವರ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ವಿಶ್ವನಾಥ್ ಬಾತಿ ಕೇವಲ ಸ್ವಲಾಭವನ್ನು ಮಾತ್ರ ಯೋಚಿಸದೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿ ಕೊಂಡಿದ್ದಾರೆ. ಈ ಕಟ್ಟಡಕ್ಕೆ  ಸೂರ್ಯ ಹೆಸರಿಟ್ಟಿರುವುದು ಸೂಕ್ತವಾಗಿದೆ. ಸೂರ್ಯ ಮತ್ತು ಮಳೆ ಎರಡು ಮನುಷ್ಯನ ಜೀವನಾಧಾರ ಮಳೆ ಆಕರ್ಷಿಸುವ ತಂತ್ರಜ್ಞಾನವನ್ನು ಬಳಸಿ ರೈತರಿಗೆ ನೆರವಾಗುವ ಯೋಜನೆ ರೂಪಿಸುವಂತೆ ಸೂರ್ಯ ಡೆವೆಲಪರ್ಸ್ ಗೆ ಶ್ರೀ ಜಗದ್ಗುರುಗಳವರು ಸಲಹೆ ನೀಡಿದರು. ಬಾತಿ ವಿಶ್ವನಾಥ್  ರವರ ಮುಂದಿನ ಅವರ ಎಲ್ಲಾ ಯೋಜನೆಗಳು ಯಶಸ್ವಿ ಯಾಗಲಿ ತನ್ಮೂಲಕ ಅವರಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನೆರವೇರುವಂತಾಗಲಿ ಎಂದು ಹಾರೈಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ “ಲಾಭದ ಜೊತೆಗೆ ವಿಶ್ವಾಸರ್ಹತೆ ಗಳಿಸಿದರೆ ಬದುಕಿನ ಮೌಲ್ಯ ಹೆಚ್ಚಾಗುತ್ತದೆ”. ಅದನ್ನು ಸೂರ್ಯ ಹೈಟ್ಸ್ ನ ವಿಶ್ವನಾಥ್ ಬಾತಿ ಸಾಧಿಸಿ ತೋರಿಸಿದ್ದಾರೆ. ಸಮುದಾಯದ ಆರೋಗ್ಯ ಸುಧಾರಿಸುವ ದಿಸೆಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಿ ನೀಡುತ್ತಿರುವುದು ಪ್ರಶಂಸಾರ್ಹ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್, ಸ್ಪಷ್ಟತೆ ಮತ್ತು ಸಮರ್ಪಣೆಯೊಂದಿಗೆ ವಿಶ್ವನಾಥ್ ಬಾತಿ ಅವರು ಅಸಾಧಾರಣ ರಿಯಲ್ ಎಸ್ಟೇಟ್ ಬೆಳವಣಿಗೆಗಳನ್ನು ರಚಿಸುವ ದೃಷ್ಟಿಯೊಂದಿಗೆ ಆಕಾಂಕ್ಷೆಗಳನ್ನು ವಾಸ್ತವಕ್ಕೆ ಪರಿವರ್ತಿಸುವ ಪ್ರಯಾಣದಲ್ಲಿ ಮುಂದುವರಿದಿದ್ದಾರೆ.ಕಂಪನಿಯು ಅವರ ಪಟ್ಟುಬಿಡದ ಕೆಲಸದ ನೀತಿಗಳು ಮತ್ತು ಶ್ರೇಷ್ಠತೆಯ ಬದ್ಧತೆಯು ಅವರಲ್ಲಿ ಕಾಣಬಹುದು ಎಂದು ತಿಳಿಸಿದರು.

ಸೂರ್ಯ ಡೆವೆಲಪರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ವಿಶ್ವನಾಥ್ ಬಾತಿ ಮಾತನಾಡಿ ದಾವಣಗೆರೆಯ B.I.E.T ಇಂಜಿನಿಯರಿಂಗ್ ಕಾಲೇಜಿನಲ್ಲಿ ಜವಳಿಯಲ್ಲಿ B.Tech ಮುಗಿಸಿದ ನಂತರ, ಅವರು 2001 ರಲ್ಲಿ ಬೆಂಗಳೂರಿಗೆ ಕನಸುಗಳನ್ನು ಹೊತ್ತು ಬಂದೆ  ಸಮರ್ಪಣೆ ಮತ್ತು ಸಮಗ್ರತೆ, ಕನಸುಗಳ ಅನ್ವೇಷಣೆಯಲ್ಲಿ, ಗುರುಗಳು ಪೋಷಕರು, ಕುಟುಂಬ ಮತ್ತು ಸ್ನೇಹಿತರ ಆಶೀರ್ವಾದ ಮತ್ತು ಶುಭಾಶಯಗಳೊಂದಿಗೆ ಸೂರ್ಯ ಡೆವಲಪರ್ಸ್ ಅನ್ನು ಸ್ಥಾಪಿಸಿ ಮುನ್ನಡೆದೆವು. ಪ್ರಯತ್ನಗಳು ಅಚಲ ನಿರ್ಣಯದಿಂದ ಇಲ್ಲಿಯವರೆಗೆ ಸರಿಸುಮಾರು 21ಲಕ್ಷ ಚದರ ಅಡಿಗಳಷ್ಟು  ರಿಯಲ್ ಎಸ್ಟೇಟ್ ನಿರ್ಮಾಣಕ್ಕೆ ಕಾರಣವಾಯಿತು.ವಿನಯತೆ, ಶ್ರಮ ಭಕ್ತಿ ಅಂತರ್ಗತವಾಗಿದ್ದರೆ "ಜೀವನವು ನಿಮ್ಮನ್ನು ಎಲ್ಲಿ ಬೇಕಾದರೂ ಕರೆದೊಯ್ಯುತ್ತದೆ" ಎಂದು ಯಶಸ್ಸಿನ ಗುಟ್ಟು ಹಂಚಿಕೊಂಡರು. ಕನಸು ಕಾಣಬೇಕು ಮತ್ತು ಅದಕ್ಕಾಗಿ ಕೆಲಸ ಮಾಡಬೇಕು. ಮೌಲ್ಯ ಮತ್ತು ಬದ್ಧತೆಯೊಂದಿಗೆ ಉದ್ಯಮ ಆರಂಭಿಸಿ. ನಮ್ಮ ವಿಲ್ಲಾಗಳನ್ನು ಬುಕ್ ಮಾಡಿ ಕೊಳ್ಳುವ ಆರ್ಮಿ, ಏರ್ ಫೋರ್ಸ್ ನ ಸೈನಿಕರಿಗೆ ನೋಂದಣಿಯಲ್ಲಿ ವಿಶೇಷ ರಿಯಾಯಿತಿ ಕೊಡುವ ನಿರ್ಧಾರ ಮಾಡಿದ್ದೇವೆ ಸೂರ್ಯ ಡೆವಲಪರ್ಸ್ ಸದಾ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲು ಬದ್ಧವಾಗಿರುತ್ತದೆ ಮುಂದೆ ಗುರಿಗಳು ಇವೆ ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾದಿಂದ ಮುನ್ನಡೆಯುತ್ತಿದ್ದೇವೆ. ಎಂದು ಸೂರ್ಯ ಡೆವಲಪರ್ಸ್ ನ  ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಬಾತಿ ತಿಳಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಧನ್ಯತೆಯ ಕೃತಜ್ಞತೆಗಳನ್ನು ಅರ್ಪಿಸಿದರು.

ಪೂಜ್ಯ ಶ್ರೀ ಜಗದ್ಗುರುಗಳವರಿಗೆ ಸೂರ್ಯ ಡೆವೆಲಪರ್ಸ್ ಮತ್ತು ಕುಟುಂಬದವರು ಭಕ್ತಿ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ  ತೋಟಗಾರಿಕೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ಶ್ರೀ ಎಸ್.ಎಸ್.ಮಲ್ಲಿಕಾರ್ಜುನ್ ರವರು, ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಸುರೇಶ್ ರವರು, ಮಾಜಿ ಸಂಸದರಾದ ಶ್ರೀ ಜನಾರ್ಧನ ಸ್ವಾಮಿ ರವರು, ಸೇರಿದಂತೆ ಅನೇಕ ಗಣ್ಯರು, ವಿಶ್ವನಾಥ್ ಬಾತಿ ಕುಟುಂಬ ವರ್ಗದವರು, ಡೆವೆಲಪರ್ಸ್ ಸಿಬ್ಬಂದಿ ವರ್ಗ ಸೇರಿದಂತೆ ಸಾವಿರಾರು ಬಂಧು ಮಿತ್ರರು ಈ ಸಮಾರಂಭಕ್ಕೆ ಸಾಕ್ಷಿಯಾದರು.