22-05-2024 10:21 AM
ಎರಡು ದಿನಗಳ ಕಾಲ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ ನಡೆಸಿದ ಸಂಗತಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದುದು..ಇವತ್ತಿನ ಮಕ್ಕಳ ಆಸಕ್ತಿ,ಅಭಿರುಚಿಗಳಿಗೆ ತಕ್ಕಂತೆ ಪಾಠ ಬೋಧನೆ ಮಾಡಿ ಅವರಿಗೆ ಹೆಚ್ಚಿನ ಜ್ಞಾನನೀಡಿ ಉತ್ತಮನಾಗರಿಕರನ್ನಾಗಿ ಮಾಡುವ ಹೊಣೆ ಶಿಕ್ಷಕರದ್ದು.ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ,ಶಿಕ್ಷಕರು ಅಪ್ಡೇಟ್ ಆಗಬೇಕು.ತರಗತಿಗೆ ಚಾಕ್ಫೀಸ್,ಡಸ್ಟರ್ ಬದಲಿಗೆ ಪಿ.ಪಿ.ಟಿ ತರಗತಿಗಳು ಹೆಚ್ಚು ಆಕರ್ಷಣೀಯ ಎಂಬ ಮನವರಿಕೆ ಶಿಕ್ಷಕರಿಗೆ ಬೇಕು..ಅತ್ಯುತ್ತಮ,ಪರಿಣಾಮಕಾರಿ ಬೋಧನೆಗೆ ಶಿಕ್ಷಕರು ಸಿದ್ದರಾದಾಗ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ..ಈ ಹಿನ್ನೆಲೆಯಲ್ಲಿ ಆಗಾಗ್ಗೆ ಇಂತಹ ಕಾರ್ಯಾಗಾರಗಳು ತುಂಬಾನೇ ಅವಶ್ಯಕ ಎಂಬುದು ನನ್ನ ಅಭಿಪ್ರಾಯ ವಾಗಿದೆ..ಕಾರ್ಯಾಗಾರದಲ್ಲಿ ಭಾಗವಹಿಸಿದ.ಇದಕ್ಕೆ ಶ್ರಮವಹಿಸಿದ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಎಲ್ಲ ಮಹನೀಯರಿಗೆ ನನ್ನ ಶುಭ ಹಾರೈಕೆಗಳು..
ಡಾ.ಗಂಗಾಧರಯ್ಯ ಹಿರೇಮಠ.
ದಾವಣಗೆರೆ