ದುಬೈನಲ್ಲಿ ಹೊಸ ಆವೃತ್ತಿಯೊಂದಿಗೆ ವಚನ ಸಂಪುಟ ಮೊಬೈಲ್ ಆಪ್ ಬಿಡುಗಡೆ
ನಮ್ಮ ಮಠದಿಂದ ತಂತ್ರಜ್ಞಾನ ಆಧಾರಿತವಾಗಿ ನಾನಾ ಭಾಷೆಗಳಲ್ಲಿ ವಚನಗಳನ್ನು ಸಿದ್ಧಪಡಿಸಿರುವ ಶಿವಶರಣರ ವಚನ ಸಂಪುಟ ಆ್ಯಪ್ ನ್ನು ಕಳೆದ ವರ್ಷ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬಿಡುಗಡೆಗೊಳಿಸಿದ್ದು, ಇದರ ಪರಿಷ್ಕೃತ ಆವೃತ್ತಿಯನ್ನು ಬಸವಜಯಂತಿ ಪ್ರಯುಕ್ತ ನಾವು ದುಬೈನಲ್ಲಿ ಬಿಡುಗಡೆಗೊಳಿಸಿದ್ದೇವೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು.
ದುಬೈನ ಯು.ಎ.ಇ ಬಸವ ಸಮಿತಿ ವತಿಯಿಂದ ಇತ್ತೀಚೆಗೆ ಜರುಗಿದ 17ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಶ್ರೀ ಮಠದಿಂದ ರಚಿಸಿರುವ 22 ಸಾವಿರ ವಚನಗಳನ್ನು ಒಳಗೊಂಡಿರುವ ಶಿವಶರಣರ ವಚನ ಸಂಪುಟ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದ್ದು, ಇದರಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ದರಾಮ ಸೇರಿ ಎಲ್ಲಾ ಶಿವಶರಣರ ವಚನಗಳು ಲಭ್ಯವಿದೆ.
ಶಿವಶರಣರ ವಚನ ಸಂಪುಟ ಮೊಬೈಲ್ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಲು ಈ ಕೆಳಗಿನ ಲಿಂಕ್ ಒತ್ತಿ.
https://play.google.com/store/apps/details?id=com.onscti.vachanasamputa
1994-95ರಲ್ಲಿ ಇನ್ನು ವಿಂಡೋಸ್ ಬಂದಿರಲಿಲ್ಲ, ಆಗ ಡಾಸ್ ಪ್ಲಾಟ್ ಫಾರ್ಮ್ನಲ್ಲಿ ಈ base clipper ಬಳಸಿಕೊಂಡು ನಮ್ಮ ಮಠದಿಂದ ಪಾಣಿನಿ ಅಷ್ಟಾದ್ಯಾಯಿ ರಚಿಸಿದ್ದೆವು. ಹೊಸ ಆವೃತ್ತಿಯಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಉರ್ದು ಸೇರಿದಂತೆ ಹಲವಾರು ಭಾಷೆಗಳಲ್ಲಿ ವಚನಗಳು ಲಭ್ಯವಿದೆ ಎಂದರು.