14-06-2024 05:04 PM ಮೊನ್ನೆ ಹೀಗೇ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ನೋಡುತ್ತಿದ್ದೆ.ಅದರಲ್ಲಿ ಒಬ್ಬರು ಇತ್ತೀಚೆಗಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳುತ್ತಿದ್ದರು.
ಅವರು ಹೇಳುವಂತೆ ಇಂದಿನ ಮಕ್ಕಳು ಉತ್ತಮ ಅಂಕಗಳನ್ನು ಪಡೆಯುತ್ತಿರುವುದು ಯಾವುದೇ ಅಚ್ಚರಿ ಅಲ್ಲ.100ಕ್ಕೆ 98 ಕೆಲವೊಮ್ಮೆ 100 ಕ್ಕೆ 100 ಅಂಕ ಗಳಿಸುವುದು ಅಚ್ಚರಿಯೇ ಅಲ್ಲ ಅಂತ ಹೇಳುತ್ತಿದ್ದರು.ಆದರೆ ಮಕ್ಕಳಿಗೆ ಅಂಕಗಳಿಸುವುದನ್ನು ಹೇಳಿಕೊಡುತ್ತಿರುವ ಶಿಕ್ಷಕರು ಅವರಿಗೆ ಆದರ್ಶ ಮಾತು ಸಾಮಾಜಿಕ ಮೌಲ್ಯ ಹೇಳಿಕೊಡುವಲ್ಲಿ ಸೋಲುತ್ತಿದ್ದಾರೆ ಅಂತ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು.
ಅದು ನಿಜವೂ ಅನ್ನಿಸುತ್ತಿದೆ.ಈಗ ಶಿಕ್ಷಣ ಕ್ಷೇತ್ರ (ಜೊತೆಯಲ್ಲಿ ಆರೋಗ್ಯ ಕ್ಷೇತ್ರವೂ) ಸಂಪೂರ್ಣ ಉದ್ದಿಮೆಯ ಸ್ವರೂಪ ಪಡೆದುಕೊಂಡಿದೆ.ಈಗ ಅವು ಸೇವಾಕ್ಷೇತ್ರ ಆಗಿ ಉಳಿದಿಲ್ಲ.ಇಂತಹ ಸಮಯದಲ್ಲಿ ಈಗ ಮಾಡುತ್ತಿರುವಂತಹ ಕೆಲಸಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು ಆಶಿಸುತ್ತೇವೆ.ಸಾಷ್ಟಾಂಗ ನಮಸ್ಕಾರಗಳೊಂದಿಗೆ.🙏
ಮಲ್ಲಿಕಾರ್ಜುನ.ಎಂ.ಎನ್.
India
14-06-2024 08:48 AM ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ, ಉತ್ತಮ ಪ್ರಜೆಗಳಾಗಲು ಬುನಾದಿ. ಇದೆ ಕಾರಣಕ್ಕೆ ನಮ್ಮ ಮಗಳನ್ನು ನಾನು ಈ ಶಾಲೆಗೆ ಸೇರಿಸಿರುವೆ. 🙏
14-06-2024 08:40 AM Yoga is a important for our life yoga is best exercise
Manya .c
Karnatak
14-06-2024 07:23 AM ಸಂಸ್ಕಾರ, ಸಂಸ್ಕೃತಿ,ಯೋಗ.ಇವುಗಳು ನಮ್ಮ ಈಗಿನ ಪೀಳಿಗೆಯ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳಲ್ಲಿ ಕೂಡಬೇಕಾಗಿದೆ.ಇದರಿಂದ ಮಕ್ಕಳ ಶಾರೀರಿಕ ಮಾನಸಿಕ ಭಾವನಾತ್ಮಕ ಸಂಬಂಧಗಳು ಪ್ರಶ್ನಾತೀತ ವಾಗೇ ಸಬಲೀಕರಣ ವಾಗಲು ಈ ತರಹದ ಸಪ್ತಾಹ ಆಚರಣೆ ಯಶಸ್ವಿ ಆಗುತ್ತವೆ..ಆದರೆ ಇವುಗಳು ಕನಿಷ್ಠ ವಾರಕೂಮ್ಮೆಯಾದರೂ ಆಟ ಪಾಠದ ಜೊತೆಗೆ ಉಪಾಧ್ಯಾಯರು ಗಳು ನೀಡಿದರೆ ಖಂಡಿತಾ ಮಕ್ಕಳ ಮನಸು ವಿಕಸಿತವಾಗುತ್ತದಲ್ಲವೆ!.