ಸಿರಿಗೆರೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

  •  
  •  
  •  
  •  
  •    Views  

ದಾವಣಗೆರೆಯ ಎಸ್.ಎಸ್.ಕೇರ್ ಟ್ರಸ್ಟ್ ಹಾಗೂ ಬಾಪೂಜಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಭಾಗಿ

ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯದಂತೆ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಹಾಗೂ ದಾವಣಗೆರೆಯ ಎಸ್.ಎಸ್.ಕೇರ್ ಟ್ರಸ್ಟ್ ಇವರ ಸಹಯೋಗದಲ್ಲಿ ಸಿರಿಗೆರೆಯ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ  ಶ್ರೀ ಸಂಸ್ಥೆಯ ಆಡಳಿತಾಧಿಕಾರಿ ಡಾ.ಹೆಚ್.ವಿ.ವಾಮದೇವಪ್ಪ ಚಾಲನೆ ನೀಡಿದರು. ಇವರು ಎಸ್.ಎಸ್.ಕೇರ್ ಟ್ರಸ್ಟ್ ನ ಅಧ್ಯಕ್ಷರಾದ ಹಾಗೂ ಶಿಬಿರದ ಆಯೋಜಕರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಮಾನ್ಯ ಲೋಕಸಭಾ ಸದಸ್ಯರು ಇವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದರು.

ನಮ್ಮ ನಡೆ ಆರೋಗ್ಯದೆಡೆ ಎಂಬ ಘೋಷವಾಕ್ಯದಲ್ಲಿ ಜು.24ರ ಬುಧವಾರದಿಂದ 27ರ ಶನಿವಾರದವರೆಗೆ ಜರುಗುವ ಶಿಬಿರದಲ್ಲಿ ಸುಮಾರು 2500 ವಿದ್ಯಾರ್ಥಿಗಳಿಗೆ ದಾವಣಗೆರೆಯ ಎಸ್.ಎಸ್  ಹಾಗೂ ಬಾಪೂಜಿ ಆಸ್ಪತ್ರೆಯ 50 ವೈದ್ಯರು ಮತ್ತು ಸಿಬ್ಬಂದಿಗಳಿಂದ ಉಚಿತ ಆರೋಗ್ಯ ತಪಾಸಣೆಯ ಜೊತೆಗೆ ಚಿಕಿತ್ಸೆಯನ್ನು ಸಹ ಟ್ರಸ್ಟ್ ವತಿಯಿಂದ ನೀಡಲಾಯಿತು. 

ಶಿಬಿರದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರಕ್ತ ಪರೀಕ್ಷೆ, ಬಿ.ಪಿ, ಶುಗರ್ ಟೆಸ್ಟ್, ಕಣ್ಣಿನ ಪರೀಕ್ಷೆ, ಚರ್ಮರೋಗ ತಪಾಸಣೆಯ ಜೊತೆಯಲ್ಲಿ ಮಕ್ಕಳತಜ್ಞರು ಸಹ ವಿಶೇಷ ತಪಾಸಣೆ ಮಾಡಿದರು. 

ದಾವಣಗೆರೆಯ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಬಿ.ಎಸ್.ಪ್ರಸಾದ್, ಡಾ. ಸೋಮಶೇಖರ್, ಪ್ರಾಂಶುಪಾಲರಾದ ಶುಕ್ಲಶೆಟ್ಟಿ, ವೈದ್ಯಕೀಯ ನಿರ್ದೇಶಕರಾದ ಡಾ.ಅರುಣ್ಅಜ್ಜಪ್ಪ, ಮಕ್ಕಳ ತಜ್ಞರಾದ ಡಾ.ಲತಾ ಶಾಮನೂರು, ಮೂಗನಗೌಡ ಪಾಟೀಲ್,  ಡಾ.ರಂಗನಾಥ್, ಸ್ತ್ರೀರೋಗ ತಜ್ಞರಾದ ಡಾ.ಮಾಳವಿಕಾ, ಚರ್ಮರೋಗ ತಜ್ಞರಾದ ಮಾನ್ಸೂನ್, ಡಾ.ಎಂ.ಎಸ್ ಅನುರೂಪ, ನೋಡಲ್ ಆಫೀಸರ್ ಡಾ.ಜಿ.ಧನ್ಯರಾಜ್, ಡಾ.ಸಂಧ್ಯಾರಾಣಿ ಡಾ.ಪುನೀತ್, ಡಾ.ರಶ್ಮಿ, ಡಾ.ವಿನಯ್ ಆರೋಗ್ಯ ಸಿಬ್ಬಂದಿಗಳು ಹಾಗೂ ಶ್ರೀ ಸಂಸ್ಥೆಯ ವಿಶೇಷಾಧಿಕಾರಿಗಳಾದ ವೀರಣ್ಣ.ಎಸ್.ಜತ್ತಿ, ಪ್ರಾದೇಶಿಕ ಅಧಿಕಾರಿ ಕೆ.ಈ.ಬಸವರಾಜಪ್ಪ, ಬಾಲಕ ಮತ್ತು ಬಾಲಕಿಯ ವಿದ್ಯಾರ್ಥಿ ನಿಲಯದ ವಾರ್ಡನ್ ಕೆ.ಎನ್.ನಟರಾಜ್, ಚಂದ್ರಯ್ಯ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.