ಸಿರಿಗೆರೆ : ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಗೆ ಆಹ್ವಾನ

ದಿನಾಂಕ : 5-8-2024
1. ನಮ್ಮ ಮಠದ 19ನೆಯ ಜಗದ್ಗುರುಗಳವರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ 86ನೆಯ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇದೇ ತಿಂಗಳು ಆಗಸ್ಟ್ 10 ಮತ್ತು 11 ದಿನಾಂಕಗಳಂದು ಸಿರಿಗೆರೆಯಲ್ಲಿ ಏರ್ಪಡಿಸಲಾಗಿದೆ.
2. ಪ್ರತಿ ವರ್ಷವೂ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ವೀರಗಾಸೆ ಸ್ಪರ್ಧೆಯನ್ನು ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆಯೋಜಿಸುತ್ತಾ ಬರಲಾಗಿದೆ.
3. ಇದೇ ತಿಂಗಳು ಆಗಸ್ಟ್ 10 ಮತ್ತು 11 ದಿನಾಂಕಗಳಂದು ಸಿರಿಗೆರೆಯಲ್ಲಿ ರಾಜ್ಯ ಮಟ್ಟದ ವೀರಗಾಸೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
4. ಸಿರಿಗೆರೆಯಲ್ಲಿ ನಡೆಯುವ ರಾಜ್ಯ ಮಟ್ಟದ ವೀರಗಾಸೆ ಸ್ಪರ್ಧೆಗೆ ನಿಮ್ಮ ಗ್ರಾಮಗಳಲ್ಲಿರುವ ವೀರಗಾಸೆ ತಂಡಗಳು ಭಾಗವಹಿಸುವ ಇಚ್ಛೆ ಇದ್ದಲ್ಲಿ ಕೆಳಕಂಡ ಗೂಗಲ್ ಲಿಂಕ್ ನಲ್ಲಿ ಹೆಸರು ನೊಂದಾಯಿಸಿರಿ.
https://forms.gle/12mBQWvqAkKfq5o19
5. ನೀವು ಗೂಗಲ್ ಲಿಂಕ್ ನಲ್ಲಿ ನೀಡಬೇಕಾದ ವಿವರ:
1) ವೀರಗಾಸೆ ತಂಡದ ಹೆಸರು
2) ತಂಡದ ನಾಯಕರ ಹೆಸರು
3) ಮೊಬೈಲ್ ಸಂಖ್ಯೆ
4) ಸ್ಥಳ
5) ತಾಲೂಕು
6) ಜಿಲ್ಲೆ
6. ಈ ವೀರಗಾಸೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ (ವೀರಗಾಸೆ ಮತ್ತು ಪುರವಂತಿಕೆ ತಂಡಗಳಿಗೆ ಪ್ರತ್ಯೇಕ ಬಹುಮಾನ) ತಂಡಗಳಿಗೆ
1) ಪ್ರಥಮ ಬಹುಮಾನ 10,000 ರೂ.
2) ದ್ವಿತೀಯ ಬಹುಮಾನ 7,500 ರೂ.
3) ತೃತೀಯ ಬಹುಮಾನ 5,000 ರೂ.ಹಾಗೂ ಪ್ರಶಸ್ತಿ ಪತ್ರ ಕೊಡಲಾಗುವುದು
7. ಸಂಪರ್ಕಿಸಿ :
ಬಿ.ಎಸ್.ಮರುಳಸಿದ್ಧಯ್ಯ, ಅಧ್ಯಕ್ಷರು, ಅಣ್ಣನ ಬಳಗ, ಸಿರಿಗೆರೆ. ಮೊ. 99861 91968
ಕಾರ್ಯದರ್ಶಿ :
ವಿ.ಸೂ. ಈ ಮೆಸೇಜನ್ನು Admin ಗಳು ಕಾಪಿ ಮಾಡಿ ನಿಮ್ಮ Taralabalu Youths ಗುಂಪಿಗೆ ತಪ್ಪದೆ ಹಾಕುವುದು.