ಸಮಾಜದ ಆಗು ಹೋಗುಗಳ ಬಗ್ಗೆ ಶ್ರೀ ಗಳ ಹತ್ತಿರ ಚರ್ಚೆ ( ದಿನಾಂಕ - 05-08-2024 )
371
Views
11-08-2024 07:04 PM ನನ್ನ ಆತ್ಮೀಯ ಸಾಧು ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರಿಗೆ ಸಾಮಾನ್ಯ ಶಿಷ್ಯನ ಸಾಮಾನ್ಯ ಪ್ರಶ್ನೆಗಳು.
ಮಾನ್ಯರೇ ಶ್ರೀ ತಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಮಠವು ಧಾರ್ಮಿಕ ಸಂಸ್ಕೃತಿಯನ್ನು ಹಾಗೂ ಮಠಕ್ಕೆ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು ನಿಮಗೆಲ್ಲ ತಿಳಿದಿರುವ ವಿಷಯವೇ ಆಗಿದೆ ಆದರೂ ಸಹ ಕೆಲವು ದಿನಗಳ ಹಿಂದೆ ನಡೆದ ನಮ್ಮ ಸಮಾಜದ ಮುಖಂಡರು ನಡೆಸಿದ ಅಪೂರ್ವ ರೆಸಾರ್ಟ್ ನಲ್ಲಿ ನಡೆದ ಸಭೆ ಹಲವು ಗೊಂದಲಗಳಿಗೆ ಕಾರಣವಾಗಿದೆ. ಮಾನ್ಯರೇ ನನ್ನ ಪ್ರಶ್ನೆ ಇಷ್ಟೇ.
೧. ನೀವು ರೆಸಾರ್ಟ್ ನಲ್ಲಿ ಸಭೆಯನ್ನು ಮಾಡಿದ ಮೂಲ ಉದ್ದೇಶ ಏನು?
2. ನಮ್ಮ ಮಠದಲ್ಲಿ ಜಾಗ ಇರಲಿಲ್ಲವೇ.
3. ನೀವೇಕೆ ಕೆಲವೇ ಮುಖಂಡರು ರೆಸಾರ್ಟ್ ಬಳಿ ಹೋಗಿ ಸಭೆಯನ್ನು ಮಾಡಿರುವ ಉದ್ದೇಶವಾದರೂ ಏನು
4. ಕೋಟ್ಯಂತರ ಶಿಷ್ಯರು ಇರುವ ಮಠವನ್ನು ಬಿಟ್ಟು ರೆಸಾರ್ಟ್ ನಲ್ಲಿ ನೀವೇಕೆ ಸಭೆಯನ್ನು ಮಾಡಿದ್ದೀರಿ.
5. ನೀವೇಕೆ ಮಠದ ಟ್ರಸ್ಟಿಗೆ ವಿಷಯವನ್ನು ತಿಳಿಸದೆ ಸಭೆಯನ್ನು ಮಾಡಿದ್ದೀರಿ.
ಮಾನ್ಯರೇ, ದಯವಿಟ್ಟು ಕೋಟ್ಯಂತರ ಶಿಷ್ಯರು ನಿಮಗೆ ತಿಳಿಸುವ ಮಾಹಿತಿ ಏನೆಂದರೆ ಮಠದ ಯಾವುದೇ ವಿಷಯವಾಗಲಿ ಅದು ಮಠದಲ್ಲೇ ಚರ್ಚ್ ಆಗಬೇಕು ಗುರುಗಳ ಸಮ್ಮುಖದಲ್ಲಿ ಚರ್ಚೆ ಆಗಬೇಕು ವಿನಹ ರೆಸಾರ್ಟ್ ನಲ್ಲಿ ಚರ್ಚೆ ಮಾಡುವ ವಿಷಯ ಇದಲ್ಲ. ಈಗಾಗಲೇ ನೀವು ಕೋಟ್ಯಂತರ ತಳಬಾಳು ಮಠದ ಶಿಷ್ಯರ ಕೆಂಗಣ್ಣಿಗೆ ಗುರಿಯಾಗಿದ್ದೀರಿ ಇನ್ನಾದರೂ ತಿದ್ದಿಕೊಂಡು ಇಂತಹ ಅಹಿತಕರ ಘಟನೆಗೆ ಅವಕಾಶವನ್ನು ಕೊಡದೆ ನಿಮ್ಮ ಸ್ಥಾನವನ್ನು ನೀವು ಕಾಪಾಡಿಕೊಳ್ಳಬೇಕಾಗಿ ವಿನಂತಿ ಉತ್ತರಾಧಿಕಾರಿಯ ವಿಚಾರದಲ್ಲಿ ಕೋಟ್ಯಂತರ ಶಿಷ್ಯರ ಸಮ್ಮುಖದಲ್ಲೇ ನಿರ್ಣಯವಾಗಬೇಕೆನಃ ನೀವು ರೆಸಾರ್ಟ್ ನಲ್ಲಿ ಯಾವುದೇ ತರಹದ ನಿರ್ಣಯಗಳನ್ನು ಕೈಗೊಂಡಲ್ಲಿ ಮಠದ ಶಿಷ್ಯರ ಕೆಂಗಣ್ಣಿಗೆ ಗುರಿಯಾಗುತ್ತಿರಿ ಜೋಕೆ.
ಮಂಜುನಾಥ ಬಿ
ಇಸಾಮುದ್ರ
09-08-2024 10:00 PM Gurugalu corect ge heltidhre om namah shivaya 🕉️🕉️🕉️🚩🚩🚩🚩🙏🙏🙏🙏
B k shashidhar
Birur, kadur tq, chikamanglur destrik,
08-08-2024 10:55 AM i think its right decision , what they take in meeting
kushal CR
bangalore
08-08-2024 07:11 AM ಪೂಜ್ಯ ಶ್ರೀಗಳೇ, ನಿಮ್ಮ ಉತ್ತರ ಕೇಳಿ ನನಗೆ ಮನವರಿಕೆ ಆಗಿದೆ. ನಾನು ಕೂಡ ಗೊತ್ತಿಲ್ಲಿದೆ ತಪ್ಪು ಅರ್ಥ ಮಾಡಿಕೊಂಡಿದ್ದೇ. ಕ್ಷಮೆ ಇರಲಿ.
ವಸಂತ್ ಕುಮಾರ್
Bangalore
07-08-2024 12:03 PM ಪರಮ ಪೂಜ್ಯ ಡಾ.ಗುರುಗಳು ನೀಡಿದ ಸ್ಪಷ್ಟೀಕರಣದಲ್ಲಿ ಎಲ್ಲಾ ವಿಷಯಗಳು ಸರಿಯಾಗಿವೆ. ಯಾವದೇ ಲೋಪದೋಷಗಳಿಲ್ಲ.
ಪೂಜ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.