07-08-2024 02:40 PM
"ನಡೆ ನೆರಳಾಗಲಿ"
____________________
ಇಂದಾಗಿವೆ ರೆಸಾರ್ಟ್, ದೊಡ್ಡಸ್ಥನದ ಪ್ರತಿಬಿಂಬ,
ಜನಸಾಮಾನ್ಯರ ಬಾಯಿಯಲ್ಲಿ ಕೆಳೋದು,ಹೇಳೋದೊಂದು ಮತಿ ಬಿಂಬ
ಅಲ್ಲಿ ನಡೆಯುವ ಸಭೆ ಸಮಾರಂಬಕ್ಕೆ
ಹೋಗುವವರಿಗಿರುವುದು ಇಂಬು
ಹೊರಬರುವಾಗ್ಗೆ ಅವರವರ ಬುಜಗಳಾಗುವವು ಒಬ್ಬರಿಗೊಬ್ಬರ ತಲೆದಿಂಬು
ಇಂಥವರ ಅಜೆಂಡಾ ಹಿಂಬಾಲಿಸಿಕೊಂಡವರಿಗೆ ಖಾಲಿ ಚೊಂಬು.
ನಶೆಯ ಮನಬಂದಂತೆಯ ಮಾತು
ಕಿಶೆಯಲ್ಲಿಯ ರೊಕ್ಕ ದಂತೆ.
ಕಾಂಗ್ರೆಸ್ ಪ್ರಚಾರ ,ಕೈ ಗೆ ಜೈ ,ಇತ್ತು ಕಾರು ಬಾಗಿಲಿಗೆ ಕೈ ಸಿಕ್ಕಾಗ ,ನಶೆದಾತನು ಕೈ ಗೆ ಜೈ ಎಂದಂತೆ,
ಮಠದ ಭಕ್ತರು ರೆಸಾರ್ಟ್ ಸಭೆಯ
ಕುರಿತು ಕಿಂಚಿತ್ ಅಂಜಿ ಅಳುಕಿ ವಿಚಲಿತರಾಗಿ ಬೇಡಿ.
ನಾಳೆ ನಾವು ಇಲ್ಲ,ನೀವು ಇಲ್ಲ ,ಹೊತ್ತೋಯ್ಯುವುದು ಭೂತಯ್ಯನ ಮಗ ಅಯ್ಯು ಸಿನಿಮಾದ ದ್ರಶ್ಯಾವಳಿ.
ಸತ್ಯ ಅರಿಯದೆ ,ಮಿತ್ಯದ ದುಂಬಾಲಿಗಿಲ್ಲ ಸಾಮಾಜಿಕ ಮನ್ನಣೆ.
ಸಾಮಾಜಿಕ ಮನ್ನಣೆ ,ಎಂಟಾಣೆಯ
ವಸ್ತುಎಂದರಿದಿರೆ,
ಆಗುವಿರೆಲ್ಲ ಅಡುಗೆ ಮನೆಯ ಮಸಿ ಬಟ್ಟೆಯಂತಲ್ಲವೆ.
ಬಿಸಿಲಿಗೆ ಮರದ ನೆರಳಿನಂತೆ,ನಮ್ಮಗಳ ನಡೆಯೇ
ಜೀವನದ ಕನಸಾಗಿಸೋಣ.
ಶೇಬಪಾಆಡೂರು
(ಶೇಖರಗೌಡ ಪಾಟೀಲ)
ಹರಪನಹಳ್ಳಿ
ಶೇಖರಗೌಡ ಪಾಟೀಲ
ಹರಪನಹಳ್ಳಿ