11-08-2024 11:13 PM
ಇದೇನಿದು ಪೂಜ್ಯರೇ....

2023ರಲ್ಲಿ ಬಸವಣ್ಣ ಎಂದೂ ವೇದ ವಿರೋಧಿ ಆಗಿರಲಿಲ್ಲ ಎಂದಿದ್ದಿರಿ..! ವೇದಕ್ಕೆ ಒರೆಯ ಕಟ್ಟುವೆ ಆಗಮದ ಮೂಗ ಕೊಯ್ಯುವೆ ಎಂದ ಬಸವಣ್ಣನನ್ನು ನೀವು ವೇದಪ್ರಿಯ ಬಸವಣ್ಣ ಮಾಡಲು ಹೋಗಿ ಲಿಂಗಾಯತರೆಲ್ಲರೂ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಿರಿ.

ಈಗ 2024ರಲ್ಲಿ ದೇವಸ್ಥಾನ ಗರ್ಭಗುಡಿ ಸಂಸ್ಕೃತಿಯನ್ನೇ ಸಾರಾಸಗಟಾಗಿ ತಿರಸ್ಕರಿಸಿದ ಬಸವಣ್ಣ ದೇವಾಲಯ ನಿರ್ಮಾಣಕ್ಕೆ ವಿರೋಧಿಸಿರಲಿಲ್ಲ ಎನ್ನುವ ಮೂಲಕ ಬಸವಣ್ಣನನ್ನು ಯಾವ ಆರ್ ಎಸ್ ಎಸ್ ಹಿಂದೂ ಮೂಲಭೂತವಾದಿಗಳಿಗೂ ಕಡಿಮೆಯಿಲ್ಲದಂತೆ
ಹಿಂದುತ್ವದ ತೆಕ್ಕೆಯೊಳಗೆ ಬಂಧಿಸಿಡಲು ತೊಡಗಿದ್ದೀರಲ್ಲ...?!

ಜಗತ್ತಿನಾದ್ಯಂತ ಸ್ವತಂತ್ರ ಬಸವ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಹಂಬಲಿಸಿ ಒತ್ತಾಯಿಸುತ್ತಿರುವ ಇಂದಿನ ದಿನಮಾನದಲ್ಲಿ ಬಸವ ಧರ್ಮ ಪ್ರಚಾರಕರಾದ ನೀವೂ ಸಹ ವಚನಾನಂದ ... ಸದಾಶಿವ ಸ್ವಾಮಿ ಪಂಪೀಗಳ ಮಟ್ಟಕ್ಕೆ ಇಳಿಯುತ್ತಿರುವಿರೇಕೆ ... ??!!... ಛೇ... ಛೇ...!
G. Nijaguna Murthy
India