BREAKING NEWS !.. BEWARE OF SOCIAL MEDIA!... ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ!…

  •  
  •  
  •  
  •  
  •    Views  

ಪರಮಪೂಜ್ಯ ಶ್ರೀ ಜಗದ್ಗುರುಗಳವರು ನಿನ್ನೆ ತಡರಾತ್ರಿಯವರೆಗೆ ಮಠದ ಆದಾಯ ತೆರಿಗೆಯ ಸಂಬಂಧವಾಗಿ ಅನೇಕ ಹಳೆಯ ಫೈಲ್ ಗಳು ಮತ್ತು ದಾಖಲೆಗಳ ಸುದೀರ್ಘ ಪರಿಶೀಲನೆ ನಡೆಸಿದರು. ತೆರಿಗೆ ವಿನಾಯಿತಿ ನವೀಕರಿಸಲು ಕೊಲ್ಕತ್ತಾದ ಡೈರೆಕ್ಟರ್ ಜನರಲ್ ರವರಿಗೆ 20 ವರ್ಷಗಳ ಹಿಂದೆ ದಿನಾಂಕ 5-11-2004 ರಂದು ಬರೆದ ಅಧಿಕೃತ ಪತ್ರ ಪರಮಪೂಜ್ಯರಿಗೆ ದೊರೆತಿರುತ್ತದೆ. ಇದರಲ್ಲಿ ಅನೇಕ ಅಡಕಗಳನ್ನು ಲಗತ್ತಿಸಿರುವುದು ಕಂಡುಬಂದಿರುತ್ತದೆ. 

ಈ  ಅಡಕಗಳಲ್ಲಿ ಮಠದ Sole Trustee ಆದ ಶ್ರೀ ಜಗದ್ಗುರುಗಳವರಿಗೆ ಸಲಹೆ ಸೂಚನೆಗಳನ್ನು ನೀಡುವ ಸಲುವಾಗಿ ರಚಿಸಿದ ಹತ್ತು ಜನರ ಸಲಹಾ ಮಂಡಳಿ (Advisory Board) ಪಟ್ಟಿಯೂ ಇದೆ. ಈ ಹತ್ತು ಜನರ ಸಲಹಾ ಮಂಡಳಿಯಲ್ಲಿ ದಾವಣಗೆರೆಯ ನರಸರಾಜಪೇಟೆಯಲ್ಲಿ ಮಠದ ಕಟ್ಟಡದಲ್ಲಿದ್ದ ಅಪೂರ್ವ ಹೋಟೆಲಿನ ಮಾಲೀಕರಾದ ಅಣಬೇರು ರಾಜಣ್ಣ ಮತ್ತು ಹಿರೇಕೆರೂರಿನ ಎಸ್.ಎಸ್ ಪಾಟೀಲ್ ಅವರ ಹೆಸರುಗಳೂ ಇವೆ. 

ಇದಲ್ಲದೆ ಪರಮಪೂಜ್ಯ ಶ್ರೀ ಜಗದ್ಗುರುಗಳವರು ತಮ್ಮ ವೈಯಕ್ತಿಕ ಹೆಸರಿನಲ್ಲಿರುವ  ಆಸ್ತಿಪಾಸ್ತಿ ಮತ್ತು ಹಣ ಎಲ್ಲವೂ ಮಠಕ್ಕೆ ಸೇರಿದ್ದೆಂದು, ತಮ್ಮ ಸ್ವಂತದ್ದು ಅಲ್ಲವೆಂದು ಲೆಟರ್  ಹೆಡ್ ನಲ್ಲಿ ಬರೆದು ಸಹಿ ಮಾಡಿದ ಘೋಷಣಾ  ಪತ್ರವೂ ಈ ಅಡಕಗಳಲ್ಲಿ ಇದೆ ಎಂಬುದನ್ನು ಶಿಷ್ಯರು ಮತ್ತು ಸಾರ್ವಜನಿಕರು  ಮನಗಾಣ ಬಹುದಾಗಿದೆ.

ಮಠದ ಟ್ರಸ್ಟ್ ಡೀಡನ್ನು ಯಾರಿಗೂ ಗೊತ್ತಾಗದಂತೆ ರಿಜಿಸ್ಟರ್ ಮಾಡಿಸಿಕೊಂಡು ಕಳೆದ 35 ವರ್ಷಗಳಿಂದ ಪರಮಪೂಜ್ಯರು ಬಚ್ಚಿಟ್ಟಿದ್ದಾರೆಂದು ಆರೋಪಿಸಿ ಮಠ, ಸಂಘ ಮತ್ತು ವಿದ್ಯಾಸಂಸ್ಥೆಯ ವಿರುದ್ಧ ಚಿತ್ರದುರ್ಗ ಕೋರ್ಟಿನಲ್ಲಿ ಕೇಸು ದಾಖಲಿಸಿರುವ ಹಿರೇಕೆರೂರಿನ ಎಸ್.ಎಸ್ ಪಾಟೀಲ್ ಮತ್ತಿತರರು ನಮ್ಮ ಮಠ ಮತ್ತು ಸಮಾಜದ ಗೌರವ ಘನತೆಗಳಿಗೆ ಧಕ್ಕೆ ಬರುವಂತೆ ಎಂತಹ ದ್ರೋಹ  ಬಗೆದಿದ್ದಾರೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕೆ?

ಸತ್ಯಮೇವ ಜಯತೆ!

-ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ,  ಸಿರಿಗೆರೆ