ಹಳ್ಳಿ ಹಳ್ಳಿಗಳಲ್ಲಿ ಭಕ್ತರ ಸಭೆ : ತರಳಬಾಳು ಶ್ರೀಗಳ ಪರ ಬೆಂಬಲಕ್ಕೆ ನಿಂತ ಸದ್ಭಕ್ತರು !

  •  
  •  
  •  
  •  
  •    Views  


ಕೊಟ್ಟೂರು: ತರಳಬಾಳು ಮಠದ ಪೀಠಾಧಿಪತಿಯಾಗಿ ಶಿವಮೂರ್ತಿ ಶಿವಾಚಾರ್ಯರೇ ಮುಂದುವರಿಯಲಿ ಹಾಗೂ ಅವರು ತಗೆದುಕೊಳ್ಳುವ ನಿರ್ಣಯಗಳನ್ನು ನಾವು ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವುದರ ಜೊತೆಯಲ್ಲಿ ಮಠಕ್ಕೆ ಸದಾ ಬೆಂಗಾವಲಾಗಿರುತ್ತೇವೆ ಎಂದು ಶ್ರೀ ಮರುಳಸಿದ್ಧೇಶ್ವರ ಸಮಿತಿ ಅಧ್ಯಕ್ಷ ಯು.ಮರುಳಸಿದ್ಧಪ್ಪ ಹೇಳಿದರು.

ತಾಲ್ಲೂಕಿನ ತೂಲಹಳ್ಳಿ ಗ್ರಾಮದ ವಿಶ್ವಬಂಧು ಮರುಳಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು.

"ಸ್ವಾಮೀಜಿ ಹಾಗೂ ಮಠದ ಬಗ್ಗೆ ಸುಳ್ಳು ಅಪಾದನೆ ಮಾಡುತ್ತಿರುವವರು ಮಠದ ಸಹಕಾರದಿಂದ ಬೆಳೆದಿರುವುದನ್ನು ಮರೆತು ರೆಸಾರ್ಟ್‌ನಲ್ಲಿ ಸಭೆ ನಡೆಸಿ ಸಮಾಜವನ್ನು ಒಡೆಯುವವರ ವಿರುದ್ಧ ಗಟ್ಟಿಯಾದ ಪ್ರತಿರೋಧವನ್ನು ವ್ಯಕ್ತಪಡಿಸುತ್ತೇವೆ" ಎಂದರು.

"ಸಿರಿಗೆರೆ ಗ್ರಾಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುವಲ್ಲಿ ಸ್ವಾಮೀಜಿಗಳ ಪಾತ್ರ ಮುಖ್ಯವಾಗಿದೆ. ಮಠದ ಆಶ್ರಯದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ನೀಡಿ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವುದರ ಜೊತೆಯಲ್ಲಿ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ" ಎಂದು ಹೇಳಿದರು.

"ರಾಜಕಾರಣಿಗಳ ವೈಯಕ್ತಿಕ ಹಿತಾಸಕ್ತಿಗಾಗಿ ಸ್ವಾಮೀಜಿ ವಿರುದ್ಧ ಆರೋಪ ಮಾಡುವುದು ಅಕ್ಷಮ್ಯ". ಅಂತಹವರನ್ನು ಮಠದಿಂದ ಕೂಡಲೇ ಬಹಿಷ್ಕರಿಸಬೇಕು. ಬೃಹನ್ಮಠದ ಉತ್ತರಾಧಿಕಾರತ್ವಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ತಗೆದುಕೊಳ್ಳುವ ನಿರ್ಣಯಗಳಿಗೆ ಭಕ್ತ ಸಮುದಾಯ ಸದಾ ಬದ್ಧವಾಗಿರುತ್ತದೆ' ಎಂದು ಮರುಳಸಿದ್ಧಪ್ಪ ಭರವಸೆ ನೀಡಿದರು.

ಮುಖಂಡರಾದ ಬಿ. ಸಿದ್ಧನಗೌಡ, ಟಿ.ಕೆ. ಕುಬೇರಗೌಡ, ಎಂ. ಶಾಂತನಗೌಡ, ಎಂ. ಪುಟ್ಟಪ್ಪ, ಕೆ. ಸುರೇಶ್, ಎಂ. ವೀರೇಶ್, ಜಿ.ಎಸ್. ಶಿವಯೋಗಿ ಇತರರು ಪಾಲ್ಗೊಂಡಿದ್ದರು.

ದಾವಣಗೆರೆ ತಾಲ್ಲೂಕು : ಬೆಳಿಯೂರು


ತಿಪಟೂರು: "ಸಿರಿಗೆರೆಯ ತರಳಬಾಳು ಮಠದ ಪೀಠಾಧಿಪತಿಯಾಗಿ ಕೊನೆ ಉಸಿರು ಇರುವವರೆಗೂ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯೇ ಮುಂದುವರಿಯಬೇಕು" ಎಂದು ಮಠದ ಭಕ್ತರು ಒತ್ತಾಯಿಸಿದರು. ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದಲ್ಲಿರುವ ಮೂಲ ಸಂಸ್ಥಾನ ಮಠದಲ್ಲಿ ನಡೆದ ಭಕ್ತರು ಸಭೆಯಲ್ಲಿ ಒತ್ತಾಯಿಸಿದರು.

ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ವಿರುದ್ಧ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಗುಂಪು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಅವರನ್ನು ಮಠದಿಂದ ಬಹಿಷ್ಕರಿಸಬೇಕು ಎಂದರು. ಸಾಧು ವೀರಶೈವ ಸಮಾಜದ ಅಧ್ಯಕ್ಷ ಪಟ್ರೇಹಳ್ಳಿ ನಂಜುಡಪ್ಪ ಮಾತನಾಡಿ, ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ತಿಳಿಸಿ ಸಿರಿಗೆರೆ ಎಂಬ ಪುಟ್ಟ ಹಳ್ಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಸ್ವಾಮೀಜಿ ವಿರುದ್ಧ ಮಾತನಾಡಿರುವ ಶಾಮನೂರು ಶಿವಶಂಕರಪ್ಪ, ಬಿ.ಸಿ ಪಾಟೀಲ್ ಹಾಗೂ ಇತರರು ಸ್ವಾಮೀಜಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಹರಿಸಮುದ್ರ ಗಂಗಾಧರ್ ಮಾತನಾಡಿ, ಸ್ವಾಮೀಜಿ ಆರೋಗ್ಯವಾಗಿದ್ದಾರೆ. ರಾಜಕಾರಣಿಗಳು ಅವರ ವೈಯಕ್ತಿಕ ಹಿತಸಾಧನೆಗೆ ಸ್ವಾಮೀಜಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಆಕ್ಷಮ್ಯ ಎಂದರು. ನಾಗರಾಜು ಹಾಲ್ಕುರಿಕೆ ಮಾತನಾಡಿ, ಮಠದ ವಿರುದ್ಧ ಮಾತನಾಡುತ್ತಿರುವ ಕಿಡಿಗೇಡಿಗಳು ಮಠದ ಸಹಕಾರದಿಂದ ಬೆಳೆದು ಹೆಮ್ಮರವಾಗಿದ್ದಾರೆ ಎಂದರು.

ಸಭೆಯಲ್ಲಿ ತಾಲ್ಲೂಕಿನ 25 ಗ್ರಾಮಗಳ ಭಕ್ತರು ಹಾಗೂ ಕಾರ್ಯದರ್ಶಿ ವೀರಭದ್ರಪ್ಪ, ರಾಜಶೇಖರ್ ಚಿಕ್ಕಬಿದರೆ, ಚಂದ್ರಶೇಖರ್, ಚಿದಾನಂದ್, ಆನಂದಮೂರ್ತಿರಾಮನಹಳ್ಳಿ, ಉಮಾಶಂಕರ್‌ ಬಳವನೇರಲು, ಜಗದೀಶ್, ಪ್ರಸನ್ನಕುಮಾರ್, ಪರಮೇಶ್, ರಾಜು, ಉಮಾಮಹೇಶ್, ಗಂಗಾಧರ್, ಚಿದಾನಂದ್ ಮತ್ತಿಹಳ್ಳಿ, ವಿಜಯಕುಮಾರ್ ಭಾಗವಹಿಸಿದ್ದರು.

ಶ್ರೀ ಮದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಾದಾರವಿಂದಗಳಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತಾ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಶ್ರೀ ಮಠದ ಸದ್ಬಕ್ತರಾದ ನಾವುಗಳು,

ದಿನಾಂಕ 12.8.2024 ರಂದು ಸೋಮವಾರ ನಮ್ಮ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ 7 ಗಂಟೆಗೆ ಸಭೆ ಕರೆದಿದ್ದು ಸಮಾಜದ ಎಲ್ಲಾ ಬಂಧುಗಳು ಸಭೆಯಲ್ಲಿ ಭಾಗವಹಿಸಿ ಶ್ರೀ ಮಠದ ವಿರುದ್ಧ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಮಠದ ವಿರುದ್ಧ ನಡೆಯುತ್ತೀರುವ ಪಿತೂರಿಗಳನ್ನು ಖಂಡಿಸಿ ನಮ್ಮ ಗುರುಗಳು ಮತ್ತು ನಮ್ಮ ಮಠದ ಪರವಾಗಿ ನಾವೆಲ್ಲರೂ ಇರಬೇಕಾಗಿರುವದರಿಂದ ನಮ್ಮ ಸಮಾಜದ  ಎಲ್ಲಾ ಬಂಧುಗಳು ಸಭೆಗೆ ಬಂದು ಯಶ್ವಸಿಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.