ಸಿರಿಗೆರೆ ಜಗದ್ಗುರುಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ : ರೈತರ ಆತ್ಮೀಯ ಒಡನಾಡಿ

  •  
  •  
  •  
  •  
  •    Views  

ದಾವಣಗೆರೆ:

ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯದಂತೆ ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರವು ಕೇಂದ್ರ ಸರ್ಕಾರದ ಪ್ರತಿಷ್ಠಿತ ಹವಾಮಾನ ವೈಪರೀತ್ಯಕ್ಕೆ ಚೇತರಿಕೆಯುಕ್ತ ಕೃಷಿ ತಂತ್ರಜ್ಞಾನಗಳ ಯೋಜನೆಯನ್ನು ಹತ್ತು ವರ್ಷಗಳ ಕಾಲ ಸಿದ್ಧನೂರು, ಪವಾಡ ರಂಗವ್ವನಹಳ್ಳಿ, ಅಗಸನಕಟ್ಟೆ ಗ್ರಾಮಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿತ್ತು.

ಈ ಗ್ರಾಮಗಳಿಂದ ಸುಮಾರು 500 ಕುಟುಂಬಗಳಿಗೆ ಹವಾಮಾನ ವೈಪರೀತ್ಯಕ್ಕೆ ಸ್ಥಿತಿಸ್ಥಾಪಕತೆ ಉಳ್ಳ ಬೆಳೆ ತಳಿಗಳ ಪರಿಚಯವನ್ನು ಮಾಡಿಕೊಡಲಾಗಿತ್ತು. ಇದರಿಂದಾಗಿ ಈ ರೈತರುಗಳ ಕೃಷಿ ಪರಿಸ್ಥಿತಿ ಉತ್ತಮ ಗೊಂಡಿತ್ತು. ಜೊತೆಗೆ ಪರಮಪೂಜ್ಯರ ನದಿ ನೀರನ್ನು ಕೆರೆಗಳಿಗೆ ಜೋಡಿಸುವ ಮಹತ್ವಾಕಾಕ್ಷಿ ಯೋಜನೆಯ ಮೂಲಕ ನೀರಾವರಿ ಸೌಲಭ್ಯವು ಪರಿಣಾಮಕಾರಿಯಾಗಿ ಹೆಚ್ಚಾಗಿದ್ದುದರಿ೦ದ ಕೃಷಿ ಚಟುವಟಿಕೆಗಳು ತ್ವರಿತಗತಿಯಲ್ಲಿ ಅಭಿವೃದ್ಧಿಗೊಂಡವು.

ಶ್ರೀಗಳ ಮೂಲ ಆಶಯ ಗ್ರಾಮೀಣ ಅಭಿವೃದ್ಧಿ ಹಾಗೂ ಕೃಷಿಕರ ಆದಾಯ ಆರೋಗ್ಯ ಉತ್ತಮ ಪಡಿಸುವುದು ಅವರ ಎಲ್ಲ ಯೋಜನೆಗಳಲ್ಲಿ ನಿಚ್ಚಳವಾಗಿ ಕಂಡುಬರುತ್ತದೆ. ಅವರ ಕನಸಿನ ಕೂಸಾದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇ೦ದ್ರ ದಾವಣಗೆರೆಯ ಕೃಷಿಕರ ಅಭ್ಯದಯಕ್ಕೆ ಕಟಿಬದ್ಧವಾಗಿದೆ. ಲಕ್ಷಾಂತರ ರೈತ ಕುಟುಂಬಗಳ ಅಭಿವೃದ್ಧಿಗೆ ಪರಮಪೂಜ್ಯರ ಕೃಷಿ ವಿಜ್ಞಾನ ಕೇಂದ್ರವು ನಿರಂತರವಾಗಿ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ರೀತಿ ವಿನೂತನ ಕೃಷಿ ತಂತ್ರಜ್ಞಾನಗಳನ್ನು ನಿರಂತರವಾಗಿ ರೈತರಿಗೆ ಪರಿಚಯಿಸುತ್ತಾ ಮಾರ್ಗದರ್ಶನ ನೀಡುತ್ತಾ ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವಲ್ಲಿ ಶ್ರೀಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ ಜಿಲ್ಲೆಯ ರೈತರ ಆತ್ಮೀಯ ಒಡನಾಡಿ ಆಗಿದೆ.

- ಡಾ. ದೇವರಾಜ ಟಿ.ಎನ್.
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, 
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ.