25 ಲಕ್ಷ ರೂ. ದೇಣಿಗೆ !... ಬಡ ರೋಗಿಗಳಿಗೆ ತರಳಬಾಳು ಶ್ರೀರಕ್ಷೆ !!... ಸಾಕ್ಷ್ಯಾಧಾರಗಳ ಮಂಡನೆ !!!...

  •  
  •  
  •  
  •  
  •    Views  

12-8-2024

ಈ ಮೇಲಿನ ದಾವಣಗೆರೆ ತಾ. ಆವರಗೆರೆ ಲಿಂಗರಾಜ್ ರವರ ಧ್ವನಿಮುದ್ರಿಕೆ ಮತ್ತು ಶಿವಮೊಗ್ಗದ  ಎಂ.ಬಿ. ಮಲ್ಲಿಕಾರ್ಜುನ್ ರವರು ರವಾನಿಸಿರುವ WhatsApp ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಮೊದಲನೆಯದಾಗಿ ಪರಮಪೂಜ್ಯ ಶ್ರೀ ಜಗದ್ಗುರುಗಳವರು ಬೆಂಗಳೂರಿನ ಹೆಸರಾಂತ ಸ್ಪರ್ಶ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು ಮತ್ತು ಚಿಕಿತ್ಸೆ ಪಡೆದದ್ದು 2021ರ  ಮಾರ್ಚ್ ತಿಂಗಳು 8 ರಿಂದ 18.   ಹಿರೇಕೆರೂರಿನ ಎಸ್ ಎಸ್ ಪಾಟೀಲರು ಮಠ, ಸಂಘ ಮತ್ತು ವಿದ್ಯಾ ಸಂಸ್ಥೆಯ ವಿರುದ್ಧವಾಗಿ ಚಿತ್ರದುರ್ಗ ಕೋರ್ಟಿನಲ್ಲಿ ಕೇಸು ದಾಖಲಿಸಿದ್ದು 2021ರ ಅಕ್ಟೋಬರ್ ತಿಂಗಳು 25 ರಂದು. ಆದಕಾರಣ ಕೋರ್ಟ್ ಕೇಸಿನ ಹಿನ್ನೆಲೆಯಲ್ಲಿ ಹಣವನ್ನು ಕೊಟ್ಟಿದ್ದಾರೆ ಎಂದು ಆಪಾದಿಸುವುದು ಅಪ್ಪಟ ಸುಳ್ಳು ಮತ್ತು ವಿಕೃತ ಮನಸ್ಸು.

ಡಾ.  ಶರಣ್ ಪಾಟೀಲ್ ರವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಇದೊಂದು ನನ್ನ ಗುರು ಸೇವೆ ಎಂದು ಚಿಕಿತ್ಸೆಗಾಗಿ ಹಣ ಪಡೆಯಲು ನಿರಾಕರಿಸಿದರು. ಎಷ್ಟೇ ಒತ್ತಾಯಿಸಿದರೂ ಬಿಲ್  ಕೊಡಲು ಒಪ್ಪಲಿಲ್ಲ.  ಆಗ ಉಚಿತವಾಗಿ ಚಿಕಿತ್ಸೆ ಪಡೆಯಲು ಇಷ್ಟಪಡದ ಪರಮಪೂಜ್ಯರು ತಮ್ಮ ಪಾದ ಕಾಣಿಕೆಯ ಅಕೌಂಟಿನಿಂದ ಚೆಕ್ ಕೊಟ್ಟರು.  ಈ ಹಣ ಶಿಷ್ಯರಿಂದ ಬಂದ ಗುರು ಕಾಣಿಕೆ.  ಶಿಷ್ಯರಿಗೇ ಸಲ್ಲಲಿ.  ಇದನ್ನು ನಿಮ್ಮ ಆಸ್ಪತ್ರೆಗೆ ಬರುವ ಬಡರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಿರಿ ಎಂದು ಹೇಳಿ 25 ಲಕ್ಷ ರೂ.ಗಳ ಚೆಕ್  ಕೊಟ್ಟರು. 

ಈ ದೇಣಿಗೆಯಿಂದ ಇದುವರೆಗೆ ಅನೇಕ ಬಡ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.  ಶ್ರೀ ಜಗದ್ಗುರುಗಳವರ ಆದೇಶದಂತೆ ಈ ಹಣ ಬಡ ರೋಗಿಗಳ ಚಿಕಿತ್ಸೆಗೆ ಬಳಕೆಯಾಗುತ್ತಲಿದ್ದು ಡಾ. ಶರಣ್ ಪಾಟೀಲ್ ರವರು ಪರಮಪೂಜ್ಯರಿಗೆ ಲೆಕ್ಕ ಒಪ್ಪಿಸುತ್ತಾ ಬಂದಿರುತ್ತಾರೆ.  ಈ ಸಂಬಂಧವಾಗಿ ಉಭಯತರ ಮಧ್ಯೆ ನಡೆದ ಸುದೀರ್ಘ ವಾಟ್ಸಾಪ್ ಮೆಸೇಜ್ ಗಳನ್ನು ಈ ಕೆಳಗೆ ಕೊಡಲಾಗಿದೆ. 

ಇದನ್ನು ಓದಿದ ನಂತರ, ಪರಮಪೂಜ್ಯರ ಮೇಲೆ ಮಿಥ್ಯಾರೋಪ ಮಾಡುತ್ತಿರುವವರು ಈಗಲಾದರೂ ನಿಲ್ಲಿಸಿ ಆತ್ಮಾವಲೋಕನ ಮಾಡಿಕೊಳ್ಳಲಿ.  ಮೂರು ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ಕುರಿತು ಈಗ ಮಾಹಿತಿ ಕೊಟ್ಟವರು ಯಾರು?  ತಪ್ಪು ಗ್ರಹಿಕೆ ಮೂಡಿಸಿದವರು ಯಾರೆಂದು ಬಹಿರಂಗ ಪಡಿಸಲಿ.

- ಕಾರ್ಯದರ್ಶಿ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ,  ಸಿರಿಗೆರೆ